ಕಾಂಗ್ರೆಸ್ ನಲ್ಲಿ ಕಾರ್ಯಕರ್ತರು ಚಾಕರಿ ಮಾಡಲು ಮಾತ್ರ ಇರೋದು : ಸಿ.ಟಿ ರವಿ
1 min read
ಉಡುಪಿ-ಚಿಕ್ಕಮಗಳೂರು :
ಕಾಂಗ್ರೆಸ್ ನಲ್ಲಿ ಕಾರ್ಯಕರ್ತರು ಚಾಕರಿ ಮಾಡಲು ಮಾತ್ರ ಇರೋದು, ಆ ಪಕ್ಷದಲ್ಲಿ ಕುಟುಂಬದವರಿಗೆ 14 ಟಿಕೆಟ್ ಕೊಟ್ಟಿದ್ದಾರೆ ಭಯೋತ್ಪಾದಕರನ್ನು ಕಾಂಗ್ರೆಸ್ಸಿಗರು ಬ್ರದರ್ಸ್ ಎನ್ನುತ್ತಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಸುವ ವೇಳೆ ಮಾತನಾಡಿದ ಸಿ.ಟಿ ರವಿ ಈ ಬಾರಿ ನಮ್ಮದು ನೀತಿ -ನೇತೃತ್ವ ನಿಯತ್ತಿನ ಚುನಾವಣೆಯಾಗಿದ್ದು,ಆಕಾಶ- ಭೂಮಿ, ಪಾತಾಳದಲ್ಲಿ ಕಾಂಗ್ರೆಸ್ ಹಗರಣ ಮಾಡಿದೆಮೋದಿ ಕಾಲದಲ್ಲಿ 7 ರಿಂದ 20 ಲಕ್ಷ ಕೋಟಿವರೆಗೆ ತೆರಿಗೆ ಹಣ ಸಂಗ್ರಹವಾಗಿದೆ. ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ 14 ಟಿಕೆಟ್ ಮುಖಂಡರ ಕುಟುಂಬಕ್ಕೆ ಕೊಟ್ಟಿದೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಚಾಕರಿ ಮಾಡಲು ಮಾತ್ರ ಇರೋದು ಎಂದಿದ್ದಾರೆ.ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಮನಸ್ಥಿತಿ ಕಾಂಗ್ರೆಸ್ ನದ್ದು ಇದಕ್ಕೆ ಪಪ್ಪು ನೇತೃತ್ವ ಇದೆ.ಬಿಜೆಪಿಯದ್ದು ಜಗತ್ತು ಕೊಂಡಾಡಿದ ನೇತೃತ್ವ, ಮೋದಿಯನ್ನು ಅಮೆರಿಕಾ,ಜರ್ಮನಿ- ಇಸ್ರೇಲ್, ಉಕ್ರೇನ್ ರಷ್ಯಾ ಕೊಂಡಾಡಿದೆಭಾರತ ಅಮೃತಕಾಲದಲ್ಲಿ ಇದ್ದು, ವಿಶ್ವಗುರು ಭಾರತ ಆಗಬೇಕು ಎಂಬುದು ಗುರಿ ಎಂದು ರವಿ ಹೇಳಿದ್ದಾರೆ. ಭ್ರಷ್ಟಾಚಾರ ಮುಚ್ಚಿ ಹಾಕಲು, ಜಾತಿಗಾಗಿ, ದೇಶ ಒಡೆಯಲು ಕಾಂಗ್ರೆಸ್ ಗೆ ಅಧಿಕಾರ ಕೊಡಬೇಡಿ, ಭಯೋತ್ಪಾಧಕರಿಗೆ ಗಲಭೆಕೋರರಿಗೆ ಕಾಂಗ್ರೆಸ್ ಬ್ರದರ್ಸ್ ಅಂತಾರೆ, ರಾಮೇಶ್ವರ ಕೆಫೆ ಬ್ಲ್ಯಾಸ್ಟ್ ಪ್ರಕರಣದಲ್ಲಿ ಬಾಂಬ್ ತಯಾರಿ ಲಿಂಕ್ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜೊತೆ ಲಿಂಕ್ ಇದೆ ಅದನ್ನು ಮಟ್ಟ ಹಾಕ್ತೇವೆ, ಮತ್ತೆ ಬಾಬ್ರಿ ಮಸೀದಿ ನಿರ್ಮಾಣದ ಕೂಗು ಕೇಳುತ್ತಿದೆ.. ಅವಕಾಶ ಕೊಡ್ತೀರಾ? ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದರು.
ಮಥುರಾ , ಕಾಶಿ ಪುನರ್ ನಿರ್ಮಾಣ ಮಾಡುವ ತಾಕತ್ತು ಮೋದಿ ಸರಕಾರಕ್ಕಿದೆ. ಆದ್ದರಿಂದ ಈ ಬಾರಿ ಪೂಜಾರಿ.. ಮತ್ತೊಮ್ಮೆ ಮೋದಿ , ಬೇರೆಯವರಂತೆ ಹಿ ಈಸ್ ನಾಟ್ ಜಂಪಿಂಗ್ ಸ್ಟಾರ್ , ಕೋಟ ಕಮಿಟೆಡ್ ಕೇಡರ್ ವ್ಯಕ್ತಿ ಎಂದ ರವಿ ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g