May 16, 2024

MALNAD TV

HEART OF COFFEE CITY

ಬಿಜೆಪಿಯಿಂದಜೂನ್ 25 ರಂದು ನಗರದಲ್ಲಿತುರ್ತು ಪರಿಸ್ಥಿತಿಯ ಕರಾಳದಿನ

1 min read

ಚಿಕ್ಕಮಗಳೂರು : ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಜೂನ್ 25 ರಂದು ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದೆ ಎಂದು ಬಿಜೆಪಿ ನಗರ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿಯಾದ ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಭಾರತ ಪ್ರಜಾಪ್ರಭುತ್ವದ ತಾಯಿ ಬೇರು ಅಂಥಹ ತಾಯಿ ಬೇರನ್ನೇ ನಾಶಗೊಳಿಸುವ ಯತ್ನ ಜೂನ್ 25, 1975  ರಂದು ತುರ್ತು ಪರಿಸ್ಥಿತಿಯನ್ನು ಇಂದಿರಾಗಾಂಧಿ ಹೇರುವ ಮೂಲಕ ಭಾರತದ ನೆಮ್ಮದಿಯನ್ನು ಮಣ್ಣು ಪಾಲು ಮಾಡಿದ್ದರು. ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಸಹಸ್ರಾರು ದೇಶಭಕ್ತರು ಜೈಲುವಾಸ ಅನುಭವಿಸಿದರು ಎಂದು ಹೇಳಿದರು.

ಭಾರತದ ಭವಿಷ್ಯಕ್ಕೆ ಮಾರಕವಾಗಿತುರ್ತು ಪರಿಸ್ಥಿತಿ ದುಷ್ಪರಿಣಾಮ ಬೀರಿತು. ಸಂವಿಧಾನ ಕೊಟ್ಟಿದ್ದ ಎಲ್ಲಾ ಹಕ್ಕುಗಳನ್ನು ತುರ್ತು ಪರಿಸ್ಥಿತಿಯ ಹೆಸರಿನಲ್ಲಿ ಕಾಂಗ್ರೆಸ್‌ ದಮನಗೊಳಿಸಿದ ಕರಾಳ ದಿನಗಳು ದೇಶದಲ್ಲಿ ಕೆಟ್ಟ ಪರಿಣಾಮ ಬೀರಿದವು ಎಂದು ಹೇಳಿದರು.

ತುರ್ತು ಪರಿಸ್ಥಿತಿಯ ದುಷ್ಪರಿಣಾಮಗಳ ಕುರಿತು ಜನಜಾಗೃತಿಗಾಗಿ ಜೂನ್ 25 ರಂದು ಸಂಜೆ 6 ಗಂಟೆಗೆ ನಗರದ ಸರ್ಕಲ್ ಲಂಚ್ ಹೋಂ ಹತ್ತಿರದ ಶ್ರೀರಾಮ ದೇವಾಲಯ ಆವರಣದಿಂದ ಮೊಂಬತ್ತಿಯೊಂದಿಗೆ ಪಕ್ಷದ ಕಾರ್ಯಕರ್ತರು ಮೌನ ಮೆರವಣಿಗೆಯ ಮೂಲಕ ವಿಜಯಪುರ ಮುಖ್ಯರಸ್ತೆ, ಆಂಜನೇಯ ಸ್ವಾಮಿದೇವಾಲಯ ಮಾರ್ಗದಲ್ಲಿ ಸಾಗಿ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದ ಎದುರಿನ ಗಣಪತಿ ಉತ್ಸವ ಸ್ಥಳದಲ್ಲಿ ಸಮಾವೇಶಗೊಂಡು ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳದಿನಗಳನ್ನು ಕುರಿತು ಅನೇಕರು ಮಾತನಾಡಲಿದ್ದಾರೆ ಎಂದು ವಿವರಿಸಿದರು.

ಬಹು ಮುಖ್ಯವಾದ ಕರಾಳದಿನ ಆಚರಣೆಯ ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!