May 8, 2024

MALNAD TV

HEART OF COFFEE CITY

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ನಗರಸಭೆವತಿಯಿಂದ ‘ಸ್ವಚ್ಛ ತೀರ್ಥ ಅಭಿಯಾನ’

1 min read

ಚಿಕ್ಕಮಗಳೂರು: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಕೇಂದ್ರ ಸರ್ಕಾರವು ರಾಜ್ಯದ ದೇವಸ್ಥಾನಗಳ ಸ್ವಚ್ಛತೆಗೆ ಕರೆ ನೀಡಿದ್ದು ಈ ಹಿನ್ನೆಲೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದೇವೆ, ದೇವರು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಪ್ರಾರ್ಥಿಸಿದರು.

ಚಿಕ್ಕಮಗಳೂರು ನಗರಸಭೆ ಹಾಗೂ ದೇವಸ್ಥಾನಗಳ ಸಮಿತಿ ಸಹಕಾರದೊಂದಿಗೆ ನಗರದ ಹಿರೇಮಗಳೂರಿನ ಕೋದಂಡರಾಮೇಶ್ವರ ದೇವಸ್ಥಾನದಲ್ಲಿ ಸ್ವಚ್ಛ ತೀರ್ಥ ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಸ್ವಚ್ಛ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮನೆಯಲ್ಲಿ ಬಳಸುವಂತಹ ದೇವರ ಫೋಟೋ ಅಥವಾ ವಿಗ್ರಹಗಳನ್ನು ರಸ್ತೆ ಬದಿಯ ಯಾವುದೋ ಮರದ ಬಳಿ ತಂದು ಹಾಕುವುದು ಸರಿಯಲ್ಲ, ಅದನ್ನ ದೇವರು ಸಹ ಮೆಚ್ಚುವುದಿಲ್ಲ ಮತ್ತು ತಮ್ಮ ತಮ್ಮ ಮನಸ್ಸಿಗೂ ಕೂಡ ನೆಮ್ಮದಿಯನ್ನು ನೀಡುವುದಿಲ್ಲ ಆದ್ದರಿಂದ ಈ ರೀತಿ ಮಾಡುವುದು ಏನಾದರು ಕಂಡು ಬಂದರೆ ನಗರಸಭೆ ವತಿಯಿಂದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಸ್ವತಂತ್ರ ಆಂದೋಲನಕ್ಕಾಗಿ ನಮ್ಮ ನಾಡಿನ ಪಿತಾಮಹ ಮಹಾತ್ಮ ಗಾಂಧೀಜಿ ಅವರು ಉದ್ಗರಿಸಿದ ಮಂತ್ರವೇ “ರಘುಪತಿ ರಾಘವ ರಾಜಾರಾಮ್” ಈ ಮೂಲಕ ಭಜನೆಯಿಂದ ದೇಶದಲ್ಲಿ ವಿಭಜನೆಗೆ ಅವಕಾಶ ಕೊಡದೆ, ಯೋಜನೆ ಮತ್ತು ಯೋಚನೆ ಮೂಲಕ ಸ್ವಚ್ಛತೆಗೆ ಮನಸ್ಸನ್ನು ಬದ್ಧತೆಯಾಗಿರಿಸಿಕೊಂಡು ನನ್ನ ಮೂಲಕ ವಿವೇಕತೆಯ ಸಿದ್ಧತೆಗೆ, ಕೈಯಲ್ಲಿ ಇರಲಿ ಯಾವಾಗಲೂ ಪೊರಕೆ, ಹೀಗೆಂದು ಬಾಪೂಜಿ ನಮಗಿತ್ತ ಪೊರಕೆ, ಕಸಪೊರಕೆ ಇದ್ದರೆ ಕಸವನ್ನು ಗುಡಿಸುತ್ತಿದ್ದರೆ ಎಲ್ಲ ಚಂದ, ಊರೆಲ್ಲಾ ಚಂದ, ಈ ಕಾರ್ಯದಲ್ಲಿ ನಾವೆಲ್ಲ ಮಿಂದೇಳಬೇಕು ಕಂದ ಎಂಬ ಪದ್ಯದಂತೆ ಎಲ್ಲರೂ ಕೂಡ ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿರುವುದು ನಮ್ಮೆಲ್ಲರ ಶುಭೋದಯದ ಸಂಕೇತ ಎಂದು ಹೇಳಿದರು.

ಇದು ಪ್ರತಿನಿತ್ಯವೂ ಕೂಡ ಮನದ ಸಿದ್ಧತೆ, ಮನೆಯ ಸಿದ್ಧತೆ ಮತ್ತು ದೇಶದ ಬದ್ಧತೆಯಲ್ಲಿ ಸ್ವಚ್ಛತೆಗೆ ಆದ್ಯತೆಯನ್ನು ಕೊಡುವುದರ ಮುಖಾಂತರ ನಮ್ಮ ಹೃದಯ ನಮ್ಮ ಮನಸ್ಸು ನಮ್ಮ ಜನ, ನಮ್ಮ ಬುದ್ಧಿ, ನಮ್ಮತನ ಎಲ್ಲವನ್ನು ಕೂಡ ವಿಶ್ವಮಾನವತ್ವದದಿಂದ ಗಟ್ಟಿಗೊಳಿಸೋಣ ಇಂತಹ ಕಾರ್ಯಕ್ರಮ ಅನುಕರಣೀಯ ಮತ್ತು ಮಾನವೀಯ, ಶ್ರೀರಾಮಚಂದ್ರನ್ ಕೂಡ ಇದು ಬಹಳ ಪ್ರಿಯ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!