May 8, 2024

MALNAD TV

HEART OF COFFEE CITY

ಕಾಫಿನಾಡಿನಲ್ಲಿ ಅಪರೂಪದ ‘ಬ್ಯಾಂಬೋ ಪಿಟ್ ವೈಫರ್” ಉರಗ ಪತ್ತೆ

1 min read

ಚಿಕ್ಕಮಗಳೂರು :ಹಾವಿನ ಸಂತತಿಯಲ್ಲೇ ಅತ್ಯಂತ ಸುಂದರವಾದ ‘ಬ್ಯಾಂಬೋ ಪಿಟ್ ವೈಫರ್’ ಎಂಬ ಹಾವನ್ನು ಉರಗತಜ್ಞ ರಿಜ್ವಾನ್ ಅವರು ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಸೆರೆ ಹಿಡಿದಿದ್ದಾರೆ.
ಕಾಫಿನಾಡ ಕಳಸದಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವು ಕಾಣಿಸಿಕೊಂಡಿದೆ. ಅಳಿವಿನಂಚಿನಲ್ಲಿರುವ ಸಂತತಿಗಳಲ್ಲಿ ಇದು ಕೂಡ ಒಂದು. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಈ ಉರಗವನ್ನು ನಾವು ಕಾಣಬಹುದು. ತಲೆ ಮೇಲೆ ಬಿದ್ದ ನೀರನ್ನ ಹಾಗೇ ಹೀರಿಕೊಳ್ಳುವ ಅಪರೂಪದ ಉರಗ ಇದಾಗಿದೆ. ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಚಂದ್ರು ಭಟ್ ಎಂಬುವವರ ಮನೆಯ ಅಂಗಳದಲ್ಲಿ ಈ ಬ್ಯಾಂಬೋ ಪಿಟ್ ವೈಫರ್ ಕಾಣಿಸಿಕೊಂಡಿದೆ. ಇದು ಹೆಚ್ಚಾಗಿ ಬಿದಿರಿನ ಬಂಬಿನಲ್ಲಿ ವಾಸವಿರುತ್ತದೆ.

ಪ್ರಪಂಚದಲ್ಲಿ ನಮಗೆ ತಿಳಿಯದ ಅದೆಷ್ಟೋ ವಿಷಕಾರಿ ಹಾವುಗಳನ್ನು ನಾವು ನೋಡಿರಬಹುದು ಆದರೆ ಈ ಹಾವು ಕಡಿದರೆ ಸಾಯುವುದಿಲ್ಲ, ಬದಲಾಗಿ ಕಡಿಸಿಕೊಂಡ ವ್ಯಕ್ತಿ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ಅಷ್ಟೇ. ಅಲ್ಲಿನ ಸ್ಥಳೀಯರು ಅಪರೂಪದ ಹಾವಿನ ಸೌಂದರ್ಯ ನೋಡಿ ಖುಷಿ ಪಟ್ಟರು. ಈ ಅಪರೂಪದ ಹಾವನ್ನ ಉರಗತಜ್ಞ ರಿಜ್ವಾನ್ ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!