May 2, 2024

MALNAD TV

HEART OF COFFEE CITY

‘ಕುಮಿತೆ’ ಎಂಬ ಫೈಟಿಂಗ್ ಗೇಮ್’ನಲ್ಲಿ ಗೋಲ್ಡ್ ಪಡೆದ ಕಾಫಿನಾಡಿನ ಪೋರ

1 min read

ಚಿಕ್ಕಮಗಳೂರು: ಜಿಲ್ಲೆ ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರ ಫೇಮಸ್ ಅಲ್ಲ. ಇಲ್ಲಿ ಅದೆಷ್ಟೋ ಪ್ರತಿಭೆಗಳು ಕೂಡ ಇವೆ. ಕೆಲವರು ಸೋಷಿಯಲ್ ಮೀಡಿಯಾ ಮುಖಾಂತರ ಫೇಮಸ್ ಆದ್ರೆ ಇನ್ನೂ ಕೆಲವರು ಮರೀಚಿಕೆ ಆಗಿಯೇ ಉಳಿದಿರುತ್ತಾರೆ. ಕ್ರೀಡೆಯಲ್ಲಿ ಅದೆಷ್ಟೋ ಕ್ರೀಡಾಪಟುಗಳು ತಮ್ಮ ರಾಜ್ಯಕ್ಕೆ ಜಿಲ್ಲೆಗೆ ದೇಶಕ್ಕೆ ಹೆಸರು ತಂದರು ಯಾರು ಸಹ ಅವರನ್ನು ಗುರುತಿಸಿರುವುದಿಲ್ಲ. ಅಂತಹ ಸಾಲಿಗೆ ಸೇರುವ ಈ ಯುವಕ ಮುಬಾರಕ್.
ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿರುವ ಅಧಿಶಕ್ತಿನಗರದ ಮುಬಾರಕ್ ಎಂಬ 20 ವರ್ಷದ ಈ ಯುವಕ ಗೋಲ್ಡ್ ಮೆಡಲ್ ಪಡೆಯುವ ಮೂಲಕ ಇಡೀ ಜಿಲ್ಲೆಗೆ ಹೆಸರು ತಂದ್ದಿದಾನೆ. ಜಪಾನ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ ಶೋಟೊ ಕಾನ್ ರಾಷ್ಟೀಯ ಮಟ್ಟದ ಕರಾಟೆಯಲ್ಲಿ, ‘ಕುಮಿತೆ’ ಎಂಬ ಫೈಟಿಂಗ್ ಗೇಮ್ ಅಲ್ಲಿ ಗೋಲ್ಡ್ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾನೆ.

ಏನಿದು ಕುಮಿತೆ…


ಸಾಮಾನ್ಯವಾಗಿ ಎಲ್ಲರಿಗೂ ಕರಾಟೆ ಮಾರ್ಷಾಲ್ ಆರ್ಟ್ಸ್ ಬಾಕ್ಸ್ಯಿಂಗ್ ಮಾತ್ರ ಗೊತ್ತು. ಕರಾಟೆಯ ಒಂದು ಭಾಗ ಕುಮಿತೆಯ ಬಗ್ಗೆ ಎಷ್ಟು ಜನಕ್ಕೆ ಗೊತ್ತು. ಕುಮಿತೆ ಎಂಬುದು ಜಪಾನ್ನಲ್ಲಿ ಹುಟ್ಟಿದ್ದು ಇದು ಮೂಲತಃ ಜಪಾನ್ ಪದ. ಕರಾಟೆಯ ಮೂರು ಮುಖ್ಯ ಭಾಗಗಳಲ್ಲಿ ಒಂದಾಗಿದೆ. ಅದರ ಇದರ ಜೊತೆಗೆ ಕಟಾ ಮತ್ತು ಕಿಹೊನ್ ಕೂಡ ಉಳಿದ ಭಾಗವಾಗಿದೆ. ಎದುರಾಳಿಯನ್ನು ಎದುರಿಸಲು ಈ ಕುಮಿತೆಯನ್ನು ಬಳಸುತ್ತಾರೆ. ಕರಾಟೆಯ ಒಂದು ಭಾಗವಾದ ಕುಮಿತೆ ಹೆಚ್ಚು ಜನಪ್ರಿಯವಾಗದೆ ಇದ್ದರು ತನ್ನದೇ ಆದ ಖ್ಯಾತಿ ಪಡೆದಿರುವುದು ಸುಳಲ್ಲ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!