April 29, 2024

MALNAD TV

HEART OF COFFEE CITY

ಹೈಟೆಕ್ ಕೇಂದ್ರೀಯ ವಿದ್ಯಾಲಯ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದಾದರೂ ಏಕೆ..?

1 min read

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ಕಾಮಗಾರಿ ಮುಗಿದು ನಾಲ್ಕು ತಿಂಗಳಾದ್ರು ಉದ್ಘಾಟನೆಯಾಗೋ ಭಾಗ್ಯ ಇಲ್ಲ. ಕಂಟ್ರಾಕ್ಟರ್ ಕೀ ಕೊಡೋದಕ್ಕೆ ಸಿದ್ಧನಿದ್ದಾನೆ. ಆದ್ರೆ, ತೆಗೆದುಕೊಳ್ಳೋಕೆ ಜಿಲ್ಲಾಡಳಿತ ಮನಸ್ಸು ಮಾಡ್ತಿಲ್ಲವಂತೆ. ಕಾರಣ ಇಷ್ಟೆ. ನೀರು ಸಮರ್ಪಕವಾಗಿಲ್ಲ ಅಂತ. ಮೂರು ಬೋರ್ ಕೊರೆಸಿದ್ರು ನೀರು ಸಿಕ್ಕಿರೋದು ಅಲ್ಪಪ್ರಮಾಣದಲ್ಲಿ. ಎರಡು ಬೋರ್ ಫೇಲ್ ಆಗಿ. ಮೂರನೇ ಬೋರ್ನಲ್ಲಿ ಅರ್ಧ ಇಂಚು ನೀರು ಸಿಕ್ಕಿದೆಯಂತೆ. ಸೋ, 400 ಮಕ್ಕಳಿಗೆ ಆ ನೀರು ಸಾಲುವುದಿಲ್ಲ ಅಂತ ಜಿಲ್ಲಾಡಳಿತ ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದೆ. ಸಾಲದಕ್ಕೆ ಈ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸ್ತುತ ತಾತ್ಕಾಲಿಕ ಪ್ರಾಂಶುಪಾಲರಿದ್ದು, ನೀರಿನ ಸಮಸ್ಯೆ ಇರೋದ್ರಿಂದ ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ ಅಂತಾರೆ ಪೋಷಕರು.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೇಂದ್ರ ಸರ್ಕಾರ ಹಣ ನೀಡಿದೆ. ಹಣಕ್ಕೆ ತಕ್ಕಂತೆ ಬಿಲ್ಡಿಂಗ್ ಕೂಡ ರೆಡಿಯಾಗಿದೆ. ಸುಸಜ್ಜಿತ ಆಟ ಮೈದಾನ. ಒಳಹೊಕ್ಕರೆ ಉತ್ತಮ ಪರಿಸರವಿರೋ ಕೇಂದ್ರಿಯ ವಿದ್ಯಾಲಯದ ಕಟ್ಟಡದಲ್ಲಿ ನೀರಿನ ಸಮಸ್ಯೆಯನ್ನ ಬಗೆಹರಿಸೋ ಮನಸ್ಸು ಮಾತ್ರ ನಾಲ್ಕು ತಿಂಗಳಿನಿಂದ ಮಾಡ್ತಿಲ್ಲ. ಕಾಮಗಾರಿ ಮುಗಿಯಿತು. ಕಟ್ಟಡವೂ ಆಯ್ತು. ಈಗ ಅಲ್ಲಿರೋದು ಓರ್ವ ಸೆಕ್ಯೂರಿಟಿ ಗಾರ್ಡ್ ಮಾತ್ರ. ಪ್ರಸ್ತುತ 400 ಮಕ್ಕಳಿರೋ ಈ ಕೇಂದ್ರೀಯ ವಿದ್ಯಾಲಯ ಸದ್ಯಕ್ಕೆ ಡಯಟ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿದೆ. ಅಲ್ಲಿ ನಾನಾ ಸಮಸ್ಯೆಗಳಿವೆ. ಹೈಟೆಕ್ ಬಿಲ್ಡಿಂಗ್ ತಲೆಎತ್ತಿ ನಿಂತಿದ್ರು ಸರ್ಕಾರ ಮಕ್ಕಳನ್ನ ವರ್ಗಾವಣೆ ಮಾಡುತ್ತಿಲ್ಲ. ಪೋಷಕರು ಕೂಡ ಈಗಾಗಲೇ ನಗರದಿಂದ 5 ಕಿ.ಮೀ. ದೂರದ ಶಾಲೆಗೆ ಹೋಗಿ ಬರೋದಕ್ಕೆ ಬಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದ್ರೆ, ಸರ್ಕಾರ ಕಟ್ಟಡವನ್ನ ಸುಪರ್ದಿಗೆ ತೆಗೆದುಕೊಳ್ಳದಿರೋದು ಪೋಷಕರಿಗೂ ಬೇಸರ ತರಿಸಿದೆ.

ಈ ಕುರಿತು ಮಾತನಾಡಿದ ಡಿಸಿ ಮೀನಾ ನಾಗರಾಜ್ ಅವರು, ನೀರಿನ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಕಟ್ಟಡವನ್ನ ನಮ್ಮ ಹ್ಯಾಂಡ್ಓವರ್‌ಗೆ ತೆಗೆದುಕೊಳ್ತೀವಿ ಅಂತಿದ್ದಾರೆ. ಒಟ್ಟಾರೆ, ಸಂಸದರಿಗೂ ಹೇಳಿಯಾಯ್ತು. ಜಿಲ್ಲಾಧಿಕಾರಿಗೂ ಮನವಿ ಮಾಡಾಯ್ತು. ಆದ್ರೆ, ಅಧಿಕಾರಿಗಳು ಬಿಲ್ಡಿಂಗ್‌ ಹ್ಯಾಂಡ್ಓವರ್ ತೆಗೆದುಕೊಳ್ಳೋಕೆ ಮನಸ್ಸು ಮಾಡ್ತಿಲ್ಲ. 30 ಕೋಟಿ ಹಣ ನಿರುಪಯುಕ್ತ ವಸ್ತುವಿನಂತೆ ಬಿದ್ದಿದೆ. ಡಯಟ್ ಬಿಲ್ಡಿಂಗ್‌ನಲ್ಲಿ ಮಕ್ಕಳು ಇಕ್ಕಟ್ಟಿನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ, ಪೋಷಕರು ಕೂಡ ಸರ್ಕಾರ ಕೂಡಲೇ ನೀರಿನ ಸಮಸ್ಯೆ ಸೇರಿದಂತೆ ಅಲ್ಲಿರುವ ಇತರೆ ಸಮಸ್ಯೆಯನ್ನ ಬಗೆಹರಿಸಿ ಕೂಡಲೇ ಬಿಲ್ಡಿಂಗ್‌ ಸುಪರ್ದಿಗೆ ತೆಗೆದುಕೊಂಡು ಅಲ್ಲೇ ಶಾಲೆಯನ್ನ ಓಪನ್ ಮಾಡಲಿ ಎಂದು ಆಗ್ರಹಿಸಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!