May 2, 2024

MALNAD TV

HEART OF COFFEE CITY

ಮೋದಿಗೆ ಭಾರತದಲ್ಲೇ ಸಿಗದಂತಹಾ ಅಮೂಲ್ಯವಾದ ಗಿಫ್ಟ್ ನೀಡಿದ ರಕ್ಷಿತಾ ರಾಜು..! ಇದಕ್ಕೆ ಮೋದಿ ಏನ್ ಹೇಳಿದ್ರು ಗೊತ್ತಾ..?

1 min read

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಭಾರತದಲ್ಲೇ ಸಿಗದಂತಹಾ ಅಮೂಲ್ಯವಾದ ಗಿಫ್ಟ್ ಒಂದನ್ನು ಕಾಫಿನಾಡ ಅಂಧ ಯುವತಿ ರಕ್ಷಿತಾ ರಾಜು ಕೊಟ್ಟಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿರೋ ರಕ್ಷಿತಾ ರಾಜು ಪ್ರಧಾನಿಗೆ 5500 ಮೌಲ್ಯದ ಗಿಫ್ಟ್ ಕೊಟ್ಟಿದ್ದಾರೆ. ಹೌದು ತನ್ನ ಓಟದ ಪಾರ್ಟ್ನರ್ ಟಿಟ್ಟರ್ ನನ್ನ ಮೋದಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಮೂಡಿಗೆರೆ ತಾಲೂಕಿನ ಕುಗ್ರಾಮ ಗುಡ್ನಳ್ಳಿ ನಿವಾಸಿ ಈ ರಕ್ಷಿತಾ ರಾಜು. ಏಷಿಯನ್ ಗೇಮ್ಸ್ ನಲ್ಲಿ ಎರಡು ಚಿನ್ನದ ಮೆಡಲ್ ಗೆದ್ದ ಟಿಟ್ಟರ್ ನ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ರಕ್ಷಿತಾ ರಾಜು ಗೈಡ್ ಜೊತೆ ಸಮಯೋಚಿತವಾಗಿ ಓಡಲು ಟಿಟ್ಟರ್ ಸಹಾಯ ಮಾಡುತ್ತದೆ. ಚೀನಾದಿಂದ ತಂದಿದ್ದ ಟಿಟ್ಟರ್ ನ ಮೋದಿಗೆ ನೀಡಿದ್ದೇನೆ. ನನ್ನಿಂದ ಉಡುಗೊರೆ ಸ್ವೀಕರಿಸಿ ಪ್ರಧಾನಿ ಮೋದಿ ತುಂಬಾ ಸಂತಸಪಟ್ಟರು, ಮುಂದೆಯೂ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನ ಗೆಲ್ಲುವಂತೆ ಹಾರೈಸಿದರು ಎಂದ ಅವರು ಮೋದಿ ಅವರನ್ನು ಭೇಟಿ ಮಾಡಿ, ಅವರಿಗೆ ಗಿಫ್ಟ್ ಕೊಟ್ಟಿದ್ದು ಅತ್ಯಂತ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!