May 15, 2024

MALNAD TV

HEART OF COFFEE CITY

‘ನಂಜೇಶ್ ಬೆಣ್ಣೂರು’ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

1 min read

ಚಿಕ್ಕಮಗಳೂರು: ನ್ಯೆರುತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನಲೆ ಕಾಂಗ್ರೆಸ್ ಪಕ್ಷದ ಮೂಲಕ ಶಿಕ್ಷಕರನ್ನು ಪ್ರತಿಬಿಂಬಿಸಲು ಸಾಧ್ಯವಾಗದ ಕಾರಣ,ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ನ್ಯೆರುತ್ಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಂಜೇಶ್ ಬೆಣ್ಣೂರು ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೆ ಈ ಚುನಾವಣೆಯ ಕುರಿತು ನಾನು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷದಿಂದ ಯಾರು ನಿಂತರು ಗೆಲ್ಲುವಷ್ಟು ಅರ್ಜಿಗಳನ್ನು ಬರ್ತಿಮಾಡಿಸಿದ್ದೇನೆ. ಜೂಲೈ, ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ಈ ನಾಲ್ಕು ತಿಂಗಳು ಒಂದು ದಿನ ಬಿಡುವಿಲ್ಲದೆ, ಸಂಘಟನೆ ಮಾಡಿದ್ದೇನೆ. ಸುಮಾರು 2200 – ಶಾಲಾ ಕಾಲೇಜುಗಳಿಗೆ ಭೇಟಿ ಮಾಡಿದ್ದೇನೆ. ಆದರೆ ಪಕ್ಷದ ಮುಖಂಡರು ತಳಮಟ್ಟದಲ್ಲಿ ಸರ್ವೇ ಮಾಡಿಸದೇ, ಈ ಚುನಾವಣೆಗೆ ಸಂಬಂಧಿಸದ ಆಯಾಮಗಳ ಅಡಿಯಲ್ಲಿ ಮತ್ತೊಬ್ಬರಿಗೆ ಅಭ್ಯರ್ಥಿಯಾಗಿ ಮಾಡಿರುವುದು ಮುಂಬರುವ ಚುನಾವಣೆಯ ಫಲಿತಾಂಶದಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ನನ್ನ ಮೇಲೆ ಭರವಸೆಯನ್ನಿಟ್ಟು, ನನ್ನ ಪರ ನಿಂತು ಬೆಂಬಲಿಸಿದ ಸಾವಿರಾರು ಶಿಕ್ಷಕರಿಗೆ ಮೋಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಈಗಾಗಲೇ ಇರುವ ವ್ಯವಸ್ಥೆಯಿಂದ ಬೇಸತ್ತು ಹೋಗಿರುವ ಶಿಕ್ಷಕ ವೃಂದಕ್ಕೆ ಧ್ವನಿಯಾಗಲು ಇಲ್ಲಿಯವರಿಗೆ ಮಾಡಿದ ಕೆಲಸವನ್ನು ಯಥಾವತ್ತಾಗಿ ಮುಂದುವರಿಸುತ್ತೇನೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಮೂಲಕ ಶಿಕ್ಷಕರನ್ನು ಪ್ರತಿಬಿಂಬಿಸಲು ಸಾಧ್ಯವಾಗದ ಕಾರಣ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ, ರಾಜ್ಯ ಸಂಚಾಲಕ, ಸಾಮಾಜಿಕ ಮಾಧ್ಯಮ KPYC. ಸ್ಥಾನಕ್ಕೆ ಹಾಗು ಇನ್ನಿತರ ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿಗಳಿಗೆ ರಾಜೀನಾಮೆ ಕೊಟ್ಟು ಶಿಕ್ಷಕರ ಪರ ಹಾಗೂ ಅವರ ಸಮಸ್ಯೆಗಳಿಗೆ ನನ್ನದೇಯಾದ ರೀತಿಯಲ್ಲಿ ಹೋರಾಟ ಮಾಡಲು ನಿರ್ಧರಿಸಿ ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ತಿಳಿಸಿದರು.

ಶಿಕ್ಷಕರು ನನ್ನ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷವು ನನಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನು ಇಲ್ಲಿಯವರಿಗೂ ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನೀವುಗಳು ಪಕ್ಷನಿಷ್ಠೆ ಇಂದ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಬೇಕಾಗುತ್ತದೆ ಆದರೆ ನಾನು ನಿಜವಾಗಿಯೂ ಕೆಲಸ ಮಾಡಿದ್ದೇನೆ ಎಂದು ನಿಮಗನಿಸಿದರೆ priority voting ಅಲ್ಲಿ ಎರಡನೇ ಸ್ಥಾನಕ್ಕಾದರೂ ನನಗೆ ಮತ ನೀಡಿ ಬೆಂಬಲ ವ್ಯಕ್ತ ಪಡಿಸಿ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!