May 19, 2024

MALNAD TV

HEART OF COFFEE CITY

ಪುನೀತ್ ಫ್ಯಾನ್ ಡೆತ್

1 min read

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದಿಂದ ಮನನೊಂದು ಅವರ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನ 30 ವರ್ಷದ ಶರತ್ ಎಂದು ಗುರುತಿಸಲಾಗಿದೆ.

ಮೃತ ಶರತ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಯಾವ ಚಿತ್ರವನ್ನೂ ಬಿಡದೆ ಎಲ್ಲಾ ಚಿತ್ರವನ್ನ ಎರಡ್ಮೂರು ಬಾರಿ ನೋಡುತ್ತಿದ್ದರು. ಆದರೆ, ನಿನ್ನೆ ಅವರ ಸಾವಿನ ಸುದ್ದಿ ಕೇಳ ತೀವ್ರ ಮನನೊಂದು ನಿನ್ನೆ ಬೆಳಗ್ಗೆಯಿಂದಲೂ ಅಳುತ್ತಿದ್ದರು. ನಿನ್ನೆಯಿಂದಲೂ ಮನೆಬಿಟ್ಟು ಹೊರಹೋಗದ ಶರತ್ ಟಿವಿ ನೋಡಿ ಒಂದೇ ಸಮನೆ ಅಳುತ್ತಿದ್ದನು. ಅವನನ್ನ ಮನೆಯವರು ಸಮಾಧಾನ ಮಾಡುತ್ತಿದ್ದರು. ಇಂದು ಬೆಳಗ್ಗೆಯಿಂದಲೂ ನಿರಂತರವಾಗಿ ಅಳುತ್ತಿದ್ದ ಶರತ್ ಮಧ್ಯಾಹ್ನ ಏಕಾಏಕಿ ರೂಮಿಗೆ ಹೋಗಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಶರತ್ ಹೋಟೆಲ್‍ಗಳಿಗೆ ಮರ ಹಾಗೂ ಭತ್ತದ ಹೊಟ್ಟು ತುಂಬುವ ಕೆಲಸಕ್ಕೆ ಹೋಗುತ್ತಿದ್ದನು. ಮೃತನಿಗೆ ಒಂದು ಹೆಣ್ಣು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭೀಣಿಯಾಗಿದ್ದಾಳೆ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಎಂಟು ತಿಂಗಳ ಗರ್ಭೀಣಿ ಪತ್ನಿ ಕೂಡ ಗೋಳಾಡಿ ಕಣ್ಣೀರಿಟ್ಟಿದ್ದಾಳೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!