May 4, 2024

MALNAD TV

HEART OF COFFEE CITY

ಜಿಲ್ಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

1 min read
26 students selected for the national level Pencak Silat Games

26 students selected for the national level Pencak Silat Games

ಚಿಕ್ಕಮಗಳೂರು: ಗಂಗಾವತಿಯಲ್ಲಿ ನಡೆದ ೨೦೨೦_೨೧ನೇ ಸಾಲಿನ ರಾಜ್ಯಮಟ್ಟದ ಪೆಂಕಾಕ್ ಸಿಲತ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಗರದ ಬಿ ಫಿಟ್ ಅಕಾಡೆಮಿಯಿಂದ ೩೨ ಜನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದ ಪೆಂಕಾಕ್ ಸಿಲತ್ ಸ್ಪರ್ಧೆಯಲ್ಲಿ ಭಾಗಿಯಾಗಿ ೧೬ ಬಂಗಾರ ಪದಕ, ೧೦ ಬೆಳ್ಳಿ, ೫ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಬಂಗಾರದ ಪದಕ ಹಾಗೂ ಬೆಳ್ಳಿ ಪದಕ ಗೆದ್ದವರು ಡಿಸೆಂಬರ್‌ನಲ್ಲಿ ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ.

ಜ್ಞಾನದೀಪ, ಇಂಚರ, ಉದಯ್ ರಾಜ್, ಉತ್ಕರ್ಷ, ವರುಣ್ ಗೌಡ ಎಸ್.ವಿ, ವಿಶಾಲ, ಶೋಭಾ, ನೇಹಾ, ತೌಷಿನಿ, ನಿಹಾಲ್, ಪೂರ್ವಿಕಾ, ಸಂಪ್ರಿತಾ, ರಿಯಾನ ಲಿವಿಸ್, ಕುಶಾಲ್, ಪಂದಳೇಷ್, ಅಮಾನ್, ಬಂಗಾರದ ಪದಕವನ್ನು ಪಡೆದುಕೊಂಡರೆ, ಶಿಷಿರ್, ಚಿರಾಗ್ ಎಚ್.ಎಸ್, ಮನೋಜ್ ಜೆ ಆರಸ್, ಅಹಮದ್ ರಜಾಕ್‌ಪ್ರಜ್ವಲ್ ಜೆ, ದರ್ಶನ್ ಬಿ.ಜೆ, ಛಾಯಾ, ನಂದನ್, ಸುಶೀಲ್ ಕುಮಾರ್ ಐ.ಎಸ್ ಬೆಳ್ಳಿಯ ಪದಕ ಪಡೆದರು. ಇನ್ನು ವೀಕ್ಷಿತ್, ನಿಶಲ್ ಡಿಸೋಜಾ, ಮೊಹಿತ್, ಗುರುರಾಜ್ ಆಸಿಫ್ ಕಂಚಿನ ಪಡೆದುಕೊಂಡಿದ್ದಾರೆ ಎಂದು ತರಭೇತುದಾರ ಯಶ್ವಂತ್ ತಿಳಿಸಿದ್ದಾರೆ.

ಅಕ್ಟೋಬರ್ ೩೦, ೩೧ ರಂದು ಕ್ರೀಡಾಕೂಟ ನಡೆದಿದ್ದು ಪದಕ ಗೆದ್ದ ವಿದ್ಯಾರ್ಥಿಗಳಿಗೆ ನಗರದ ಜಿಲ್ಲಾ ಶತಮಾನೋತ್ಸವ ಭವನದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಪ್ರಶಸ್ತಿಪತ್ರ ನೀಡಿದರು.

ಈ ವೇಳೆ ಬಿ ಫಿಟ್ ಅಕಾಡೆಮಿಯ ಅಧ್ಯಕ್ಷರಾದ ಗಿರೀಶ್ ಟಿ.ಎಸ್, ತರಬೇತುದಾರ ಯಶ್ವಂತ್ ಬಿ.ಆರ್ ಹಾಗೂ ಇತರರು ಇದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!