May 17, 2024

MALNAD TV

HEART OF COFFEE CITY

ಚಿಕ್ಕಮಗಳೂರು ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

1 min read
Preparation for Chikkamagaluru District Pratham Dasa Sahitya Conference

Preparation for Chikkamagaluru District Pratham Dasa Sahitya Conference

ಕಡೂರು : ಚಿಕ್ಕಮಗಳೂರು ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನವನ್ನು ಕಡೂರು ತಾಲೂಕಿನ ಪಂಚನಹಳ್ಳಿ ಹೋಬಳಿ ಆಣೆಗೆರೆ ಗ್ರಾಮದಲ್ಲಿ ಇದೇ ತಿಂಗಳು 19ರಂದು ಆಯೋಜಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.   

ತಾಲೂಕಿನ ಆಣೆಗೆರೆ ಗ್ರಾಮದಲ್ಲಿ ನಡೆಯುವ ಜಿಲ್ಲಾ ಪ್ರಥಮ  ದಾಸ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ದಾಸ ಸಾಹಿತ್ಯ ಪರಂಪರೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ನಮ್ಮೆಲ್ಲರ ಸಂಸ್ಕೃತಿಗೆ ಪೂರಕವಾಗಿರುವ ದಾಸ ಸಾಹಿತ್ಯ ಪರಂಪರೆಯನ್ನು ಮರೆಯುವಂತಿಲ್ಲ ಅಂತಹ ಪರಂಪರೆಯನ್ನು ನಾವು ಈ ಸಮ್ಮೇಳನದಲ್ಲಿ ಪುನರ್ ಮನನ ಮಾಡಿಕೊಳ್ಳಬೇಕಾಗಿದೆ. ಆ ಕಾರಣಕ್ಕಾಗಿ ಮೇ 19ರಂದು ವಿಶೇಷವಾಗಿ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಎಂ. ಮಹೇಶ್ವರಪ್ಪ ಅವರನ್ನು ಹಾಗೂ ಕೋಶಾಧ್ಯಕ್ಷರಾಗಿ ಆರ್ ಶಂಕರಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಗೌರವಾಧ್ಯಕ್ಷರಾಗಿ ಗುಡಿ ಗೌಡರಾದ ರಂಗನಾಥ್ ದಳವಾಯಿ  ಕಾರ್ಯದರ್ಶಿಯಾಗಿ ಕಡೂರು ತಾಲೂಕು ಕಸಾಪ ಅಧ್ಯಕ್ಷರಾದ ಸಿಂಗಟಗೆರೆ ಸಿದ್ದಪ್ಪ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ  ಅಧ್ಯಕ್ಷರಾದ ಲತಾ ರಾಜಶೇಖರ್  ಹಾಗೂ ಸಹ ಕಾರ್ಯದರ್ಶಿಯಾಗಿ ಪಂಚನಹಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್, ರವಿಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಉದ್ಘಾಟಿಸಲಿದ್ದು, ಹೊಸದುರ್ಗ ಕನಕ ಗುರುಪೀಠದ ಶಾಖ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು ಹಾಗೂ ಯಳನಾಡು ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶೀ ಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಟ್ನಳ್ಳಿ ಮಹೇಶ್ ನಾಗಶ್ರೀ ತ್ಯಾಗರಾಜ್ ಹಾಗೂ ರಾಜಪ್ಪ ದಳವಾಯಿ, ನಾಗರಾಜ್ ಹಾಗೂ ಡಾ.ಆನಂದ್ ಮಾತನಾಡಲಿದ್ದಾರೆ. ವೇದಿಕೆಯಲ್ಲಿ ದಾಸರ ಕೀರ್ತನೆಗಳನ್ನು ವಿವಿಧ ಸಂಘಟನೆಗಳು ನೆರವೇರಿಸಿಕೊಡಲಿದ್ದಾರೆ.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ರಂಗನಾಥ್ ದಳವಾಯಿ ಮಾತನಾಡಿ ಸುತ್ತಮುತ್ತಲಿನ ಗ್ರಾಮದವರ ಸಹಕಾರ ಪಡೆದು ಈ ದಾಸ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಲಾಗುವುದು ಎಂದು ತಿಳಿಸಿದರು   ಪರಿಷತ್ತಿನ ಜಿಲ್ಲಾ ಘಟಕದ ಸಂಚಾಲಕರಾದ ಎಸ್. ಪರಮೇಶ್ ಹಾಗೂ ಪಂಚನಹಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಆರ್ . ರವಿ ಚಂದ್ರ ಮಾತನಾಡಿ ಸಮ್ಮೇಳನದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ ಮತ್ತು ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ಎಚ್ ಮಂಜುನಾಥ್, ಪುಂಡಲೀಕ ರಾವ್ ಹಾಗೂ ಹೆಚ್ ಕೆ ಮಂಜುನಾಥ್ ಮಾತನಾಡಿದರು ಆಣೆಗೆರೆ ಗ್ರಾಮದ ಕೆ ಚಂದ್ರಪ್ಪ ಎಂ ನಾಗರಾಜ್ ಹನುಮಂತಪ್ಪ ಶಿಕ್ಷಕ ಶ್ರೀನಿವಾಸ್, ಕುಪ್ಪಳು ಶಾಂತಮೂರ್ತಿ, ಚಿಕ್ಕನಲ್ಲೂರು ನಾಗೇಶ್, ಪಂಚನಹಳ್ಳಿ ಹೋಬಳಿ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದ ಸಾವಿತ್ರಮ್ಮ ಹಾಗೂ ಸಿಂಗಟಗೆರೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಲಲಿತಮ್ಮ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!