May 18, 2024

MALNAD TV

HEART OF COFFEE CITY

ಭೂಸ್ವಾಧೀನಕ್ಕೆ ಮೀಸಲಿಟ್ಟ ಹಣ ದೋಚುವ ಯೋಚನೆ – ಗ್ರಾಮಸ್ಥರ ಆರೋಪ

1 min read
plan-to-steal-money-earmarked-for-land-acquisition-villagers-allege

plan-to-steal-money-earmarked-for-land-acquisition-villagers-allege

ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿ ಕಾನೂನು ಪ್ರಕಾರ ಭೂಸ್ವಾಧೀನ ಪ್ರಕ್ರಿಯೇ ನಡೆದಿಲ್ಲ ಎಂದು ಚಿಕ್ಕಕುರುಬರಹಳ್ಳಿ ಗ್ರಾಮಸ್ಥರು ಆರೋಪಿಸಿ ದ್ದಾರೆ.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಕೀಲ ಹರೀಶ್ ಮಾತನಾಡಿ, 1970ರ ದಶಕದಲ್ಲೇ ರಸ್ತೆ ಜಾಗ ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ. ಆ ಪ್ರಕಾರ 8ಅಡಿ ಮಾತ್ರ ರಸ್ತೆಯನ್ನು ಗುರುತಿಸಲಾಗಿದೆ. ಅಂದು ಕೂಡ ಸ್ಥಳೀಯರಿಗೆ ಪರಿಹಾರ ನೀಡಿಲ್ಲ ಎಂದು ದೂರಿದರು.

ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಇಲ್ಲಿ ನೆಲೆ ಕಂಡು ಕೊಂಡವರು ಒತ್ತುವರಿ ಮಾಡಿಲ್ಲ ಅದು ಅವರಿಗೆ ಬಂದ ಪಿತ್ರಾರ್ಜಿತ ಆಸ್ತಿಯಾಗಿದೆ ಎಂದು ತಿಳಿಸಿದರು.

ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿರುವ ಜಮೀನು, ಮನೆಗಳ ಮಾಲೀಕರಿಗೆ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು.
ಪರಿಹಾರಕ್ಕೆಂದು ಮೀಸಲಿಟ್ಟಿರುವ 5 ಕೋಟಿ.ರೂ. ಹಣವನ್ನು ಹೊಡೆಯಲು ಸಂಚು ರೂಪಿಸಲಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ಕೆಚ್ ಪ್ರಕಾರ ಸರ್ವೆ ಮಾಡುವ ಬದಲು ಕೇಸು ಹಾಕಿರುವ 4 ಜನರ ಮನೆಗಳನ್ನು ಮಾತ್ರ ಸರ್ವೆ ಮಾಡಿ ವರದಿ ಕೊಟ್ಟಿದ್ದಾರೆಂದು ಆರೋಪಿದರು.

ಈ ಸಂದರ್ಭದಲ್ಲಿ ಚಿಕ್ಕಕುರುಬರಹಳ್ಳಿ ಗ್ರಾಮಸ್ಥರಾದ ಪರಮೇಶ್ವರಪ್ಪ, ರೂಪ್‍ಕುಮಾರ್, ವಿಜಯ್ ಕುಮಾರ್, ಲಲಿತ್ ಕುಮಾರ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!