April 29, 2024

MALNAD TV

HEART OF COFFEE CITY

ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ

1 min read

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಮಲೆನಾಡು ಭಾಗದಲ್ಲಿ ಹರಿ ಯುವ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ. ಮೂರು ದಿನಗಳಿಂದ ನಿರಂತರ ವಾಗಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದೆ.ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಪದೇ ಪದೇ ಭದ್ರಾನದಿ ನೀರಿನಲ್ಲಿ ಮುಳುಗುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಶೃಂಗೇರಿ ಶಾರದಾ ದೇವಸ್ಥಾನ ಬಳಿ ಹರಿಯುವ ತುಂಗಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸೋಮವಾರ ರಾತ್ರಿಯಿಡಿ ಸುರಿದ ಬಾರೀ ಮಳೆಗೆ ನದಿನೀರು ಶಾರದಾ ದೇವಸ್ಥಾನಕ್ಕೆ ತೆರಳುವ ಸಿಮೆಂಟ್ ರಸ್ತೆವರೆಗೂ ನೀರು ನಿಂತಿತ್ತು. ಮಧ್ಯಾಹ್ನದ ವೇಳೆಗೆ ನೀರು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ. ಹೇಮಾವತಿ ಮತ್ತು ಸೋಮಾವತಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

 

ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳಗೆ ಜಿಲ್ಲೆಯಲ್ಲಿ 28 ಮನೆಗಳಿಗೆ ಹಾನಿಯಾಗಿದೆ. ಅನೇಕ ವಿದ್ಯುಯ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಎರಡು ವಾಟರ್ ಟ್ಯಾಂಕ್‍ಗೆ ಹಾನಿಯಾಗಿದೆ. 56ಕಿ.ಮೀ. ರಸ್ತೆಗೆ ಹಾನಿಯಾಗಿದೆ. ಎರಡು ಶಾಲೆ ಹಾಗೂ 7 ಸೇತುವೆಗಳಿಗೆ ಹಾನಿಯಾಗಿದೆ.
ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಎಡ ಬಿಡದೆ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಡೂರು, ತರೀಕೆರೆ ಭಾಗದಲ್ಲೂ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲಾದ್ಯಂತ ಮೋಡಕವಿದ ವಾತವರಣ ಮುಂದುವರೆದಿದೆ.
ತರೀಕೆರೆ ತಾಲ್ಲೂಕು ನಂದಿಬಟ್ಟಲು ಕಾಲೋನಿ ಜಯಪುರ ಮಾರ್ಗದ ರಸ್ತೆಮೇಲೆ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ನೆರವಿ ನೊಂದಿಗೆ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಾರೀ ಮಳೆಯಿಂದ ಆರದವಳ್ಳಿ ಗ್ರಾಮದಲ್ಲಿ ರೈತರು ಹಾಕಿರುವ ಆಲೂಗಡ್ಡೆ ಬೆಳೆಗೆ ಅಂಗ ಮಾರಿ ಮತ್ತು ಕರುಕುರೋಗ ಬಾಧೆ ಕಾಣಿಸಿಕೊಂಡಿದ್ದು, ಬೆಳೆನಾಶದ ಆತಂಕ ರೈತರಲ್ಲಿ ಎದುರಾಗಿದೆ. ಬಾರೀ ಗಾಳಿ ವ ಅವರ ಮನೆಮೇಲೆ ಮಂಗಳವಾರ ಬೆಳಗಿನ ಜಾವ ಮರ ಬಿದ್ದು ಮನೆ ಜಖಂಗೊಂಡಿದೆ. ಮನೆಯಲ್ಲಿ ಮಲಗಿದ್ದ ದಂಪತಿಗಳು ಮತ್ತು ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಮಳೆಹಾನಿ: ಜೂ.1ರಿಂದ ಜುಲೈ 5ರ ವರೆಗೆ ಬಿದ್ದ ಮಳೆಗೆ ಗ್ರಾಮೀಣ ಭಾಗದ 37.55 ಕಿ.ಮೀ. ರಸ್ತೆಗೆ ಹಾನಿಯಾಗಿದೆ. 4ಸೇತುವೆ, 7ಸರ್ಕಾರಿ ಪ್ರಾಥಮಿಕ ಶಾಲೆ, 446 ವಿದ್ಯುತ್ ಕಂಬ, 932 ಮೀಟರ್ ವಿದ್ಯುತ್ ತಂತಿ, 1ಮನೆ ಪೂರ್ಣ ಹಾನಿಯಾದರೇ, 23 ಮನೆ ಭಾಗಶಃ ಹಾನಿಯಾಗಿದೆ. 1ಹಸು ಮೃತಪಟ್ಟಿದೆ.
ಮಳೆ ವಿವರ:

ಕಾಫಿನಾಡಿನಲ್ಲಿ ಮಳೆ ಮುಂದುವರೆದಿದ್ದು, ಶೃಂಗೇರಿ ತಾಲ್ಲೂಕಿನ ಮಳೆದೇವರೆಂದೇ ಪ್ರಸಿದ್ಧಿ ಪಡೆದಿರುವ ಕಿಗ್ಗಾದಲ್ಲಿ 188.5 ಮಿಲಿಮೀಟರ್ ಅಧಿಕಮಳೆಯಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆ ಬಿದ್ದಿರುವ ಮಳೆ ವಿವರ ಮಿಲಿಮೀಟರ್‍ಗಳಲ್ಲಿ ಇಂತಿದೆ.
ಚಿಕ್ಕಮಗಳೂರು ಕಸಬಾ 10.1, ವಸ್ತಾರೆ 22,ಜೋಳದಾಳ್ 25 35, ಅತ್ತಿಗುಂಡಿ 48.5, ಸಂಗಮೇಶ್ವರಪೇಟೆ 43.5, ಬ್ಯಾರುವಳ್ಳಿ 53.4, ಕಳಸಾಪುರ 6, ದಾಸರಹಳ್ಳಿ 12.4, ಮೂಡಿ ಗೆರೆ 65, ಕೊಟ್ಟಿಗೆಹಾರ 106, ಗೋಣಿಬೀಡು 43.1, ಜಾವಳಿ 59, ಹಿರೇಬೈಲು 75,ಕಳಸ 78.4 ಹೊಸಕೆರೆ 82,2, ಬೆಳ್ಳೂರು 72, ನರಸಿಂಹರಾಜಪುರ 42.2, ಬಾಳೆಹೊನ್ನೂರು 58.2, ಮೇಗರಮಕ್ಕಿ 62, ಶೃಂಗೇರಿ 118.4, ಕೆರೆಕಟ್ಟೆ 176.5 ಕೊಪ್ಪ 124, ಹರಿಹgಪುರ 124 ಜಯಪುರ 102, ಬಸರಿಕಟ್ಟೆ 89.2, ಕಮ್ಮರಡಿ 130.4, ತರೀಕೆರೆ 13.6 ಲಕ್ಕವಳ್ಳಿ 16.4, ರಂಗೇನಹಳ್ಳಿ 13.8, ಲಿಂಗದಹಳ್ಳಿ 16.6, ಉಡೇವಾ 1`2.2, ತಣಿಗೆಬೈಲು 19.2, ತ್ಯಾಗದಬಾಗಿ 16.2, ಹುಣಸಘಟ್ಟ 8, ಕಡೂರು 12, ಸಖರಾಯಪಟ್ಟಣ 8.2, ಸಿಂಗಟಗೆರೆ 23, ಪಂಚನಹಳ್ಳಿ 4.2, ಎಮ್ಮೆದೊಡ್ಡಿ 42.2, ಯಗಟಿ 2.2,ಗಿರಿಯಾಪುರ, ಬಾಸೂರು 7.2 ಚೌಳಹಿರಿಯೂರು 14.16, ಅಜ್ಜಂಪುರ 7, ಬುಕ್ಕಾಂಬುದಿಯಲ್ಲಿ 9.2 ಮಿಲಿಮೀಟರ್ ಮಳೆಯಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!