May 5, 2024

MALNAD TV

HEART OF COFFEE CITY

ಹಾಸ್ಟೆಲ್ ಮಕ್ಕಳ ಜೊತೆ ಸಾಲಲ್ಲಿ ಕೂತು ಹಾಸ್ಟೆಲ್ ಊಟ ಸೇವಿಸಿದ ಸಂಸದೆ ಶೋಭಾ

1 min read

 

ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಮಕ್ಕಳ ಜೊತೆ ಸರದಿ ಸಾಲಲ್ಲಿ ಕೂತು ಹಾಸ್ಟೆಲ್ ಊಟವನ್ನ ಸವಿದಿದ್ದಾರೆ. ಅವರು ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ, ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದರು. ಭೇಟಿಯ ಬಳಿಕ ಹಾಸ್ಟೆಲ್ ಮಕ್ಕಳ ಜೊತೆ ಟೇಬಲ್ ಮೇಲೆ ಸರದಿ ಸಾಲಲ್ಲಿ ಕೂತು ಮಕ್ಕಳ ಜೊತೆಯೇ ಊಟ ಮಾಡಿದ್ದಾರೆ. ಬಳಿಕ ಊಟ ಮುಗಿಸಿ ಹೊರಬಂದಾಗಲೂ ಊಟಕ್ಕೆಂದು ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳ ಸಾಲಿನ ಜೊತೆಯೇ ಹೋಗಿ ಮಕ್ಕಳನ್ನ ಆತ್ಮೀಯಂತೆಯಿಂದ ಮಾತನಾಡಿಸಿ ಮಕ್ಕಳ ಕಷ್ಟ-ಸುಖ-ಕುಂದು-ಕೊರತೆಯನ್ನ ಕೇಳಿದ್ದಾರೆ.

ಮಕ್ಕಳಿರುವ ಜಾಗಕ್ಕೆ ಹೋಗಿ ಮಾತನಾಡಿಸಿದ ಸಂಸದರನ್ನ ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಶೋಭಾ ಮಕ್ಕಳಿಗೆ ಚೆನ್ನಾಗಿದ್ದೀರಾ ಎಂದು ಕೇಳಿದಾಗ, ಮಕ್ಕಳು ಹೌದು ಮೇಡಂ ಎಂದು ನೀವು ಚೆನ್ನಾಗಿದ್ದೀರಾ ಎಂದು ಆತ್ಮೀಯತೆಯಿಂದಲೇ ಮಾತನಾಡಿಸಿದ್ದಾರೆ.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!