May 17, 2024

MALNAD TV

HEART OF COFFEE CITY

ಮುಸ್ಲಿಂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಮಲ್ನಾಡ್ ಗಲ್ಪ್ ಎಜುಕೇಶನ್ ಸಂಸ್ಥೆ

1 min read

ಮೂಡಿಗೆರೆ : ಮಲ್ನಾಡು ಗಲ್ಫ್ ಎಜುಕೇಶನ್ ಅಂಡ್ ಚಾರಿಟೇಬಲ್  ಟ್ರಸ್ಟ್ ನ ಸರ್ವ ಸಮಿತಿ ಸಭೆಯನ್ನು  ಮೂಡಿಗೆರೆ ತಾಲೂಕಿನ ಹಾಂದಿ ಶಾಲಿಮಾರ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಮಲ್ನಾಡ್ ಗಲ್ಫ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸರ್ವ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಮುಸ್ಲಿಂ ಸಮುದಾಯವು ಆಧುನಿಕ ಯುಗದಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಾಸದಿಂದ ದೂರ ಉಳಿದು ಕೊಂಡಿದ್ದು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಅವರ ಆರ್ಥಿಕ ಪರಿಸ್ಥಿತಿ ಅಡ್ಡ ಬರುತ್ತಿದ್ದು ಅಂತವರನ್ನು ಗುರುತಿಸಿ ಆ ಒಂದು ವ್ಯಕ್ತಿಯು ಆರ್ಥಿಕವಾಗಿ ಸದೃಢನಾಗಿದ್ದಾನೆಯೇ? ವಿದ್ಯಾಭ್ಯಾಸ ಮಾಡಲು ಅವನಲ್ಲಿರುವ ಬಡತನ ಅವನಿಗೆ ಎದುರಾಗಿದೆಯೇ? ಇದರಿಂದ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮಟಕುಗೊಳಿಸಿದ್ದಾರೆಯೇ? ಎಂಬಂತಹ ಮಾನದಂಡದಡಿ  ಅಂಥಹ ವ್ಯಕ್ತಿಗಳನ್ನು ಗುರುತಿಸಿ, ಅವರ ವಿದ್ಯಾಭ್ಯಾಸಕ್ಕಾಗಿ ಪ್ರತಿ ಹಂತದಲ್ಲೂ ಸಹಾಯ ಹಸ್ತವನ್ನು ಚಾಚಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಮೆಟ್ರಿಕ್ ನಂತರ  ಪದವಿ ಮಾಡುತ್ತಿದ್ದಾನೆಯೇ? ಅಥವಾ ಸ್ನಾತಕೋತರ ಪದವಿ ಪಡೆಯಲು ಬಯಸಿದ್ದಾನೆಯೇ? ಎಂಬಂತಹ ಪ್ರಮುಖ ವಿಚಾರಗಳನ್ನು ಎಂ.ಜಿ.ಟಿ ಆಂತರಿಕ ವರದಿಯನ್ನು ತಯಾರಿಸಿ ನಂತರ ಸಭೆಯಲ್ಲಿ ಚರ್ಚಿಸಿ ಅಂಥವರ ಬೆನ್ನೆಲುಬಾಗಿ ನಿಂತು ವಿದ್ಯಾರ್ಥಿವೇತನ ಸೇರಿದಂತೆ ಉನ್ನತ ವಿದ್ಯಾಭ್ಯಾಸವನ್ನು ಪಡೆಯಲು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ದಾಖಲಾತಿಗಳಾಗಿ ಹಂಬಲಿಸುತ್ತಿರುವ ಪ್ರತಿಯೊಂದು ವ್ಯಕ್ತಿಯನ್ನು ಗುರುತಿಸಿ ಸಹಾಯ ಹಸ್ತವನ್ನು ಚಾಚುತ್ತ ಬರುತ್ತಿರುವ ಪ್ರತಿಷ್ಠಿತ ಟ್ರಸ್ಟ್ ಗಳ ಪಟ್ಟಿಯಲ್ಲಿ ಮಲೆನಾಡು ಗಲ್ಫ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ  ಒಂದಾಗಿದೆ.

ಅದರಂತೆ ಗುರುವಾರ ಟ್ರಸ್ಟ್ ವತಿಯಿಂದ ನಡೆದ ಸರ್ವ ಸಮಿತಿ ಸಭೆಯಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ಚರ್ಚಿಸಿದ ನಂತರ ಸದಸ್ಯರು ಹಾಗೂ ಸಭಿಕರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಸಭೆಗೆ ಮಾಹಿತಿ ನೀಡಿದ ಸಕ್ರಿಯ ಸದಸ್ಯರು ಮಲೆನಾಡು ಗಲ್ಫ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಪ್ರಪ್ರಥಮವಾಗಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತದೆ ಹಾಗೂ ವೃತ್ತಿಪರ ಪದವಿ ಪಡೆಯುವ ವಿದ್ಯಾರ್ಥಿಗಳ ಬೆನ್ನೆಲುಬಿಗೆ ನಿಲ್ಲುತ್ತದೆ  ಅದರಂತೆ ಸಂಘದ ಸದಸ್ಯರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಮುದಾಯದಲ್ಲಿ ಯಾರಾದರೂ ಆರ್ಥಿಕ ಪರಿಸ್ಥಿತಿಯಿಂದ ತನ್ನ ವಿದ್ಯಾಭ್ಯಾಸವನ್ನು ಮೋಟಕುಗೊಳಿಸಿದ್ದಾನೆಯೇ? ಅಥವಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆ ಒಂದು ವಿದ್ಯಾರ್ಥಿ ವಿದ್ಯಾರ್ಥಿನಿ ಯಾವ ನಿರೀಕ್ಷೆಯನ್ನು ಬಯಸುತ್ತಿದ್ದಾರೆ ಅಂತವರ ಬಗ್ಗೆ ಗ್ರೌಂಡ್ ರಿಪೋರ್ಟ್ ತರಿಸಿ ಟ್ರಸ್ಟ್ ನ ಗಮನಕ್ಕೆ ತಂದಾಗ ಅಂತಹ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡುವಂತಹ ಹಾಗೂ ಯು.ಪಿ.ಎಸ್ಸಿ, ಸಿವಿಲ್, ವೈದ್ಯಕೀಯ ರಂಗ, ಸೇರಿದಂತೆ ಇನ್ನೂ ಹಲವಾರು ಸ್ಪರ್ಧಾತ್ಮಕ ರೀತಿಯ ಪರೀಕ್ಷೆಯನ್ನು ಎದುರಿಸಲು ಎಲ್ಲಾ ರೀತಿಯಲ್ಲೂ ಟ್ರಸ್ಟ್ ಸಹಾಯಕ್ಕೆ ಬದ್ಧವಾಗಿದೆ ಹಾಗೂ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಗಿಯುವವರೆಗೂ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಪಡೆಯುವಂತೆ ಪ್ರೇರೇಪಿಸಲಾಗುವುದು ಎಂದು ಸಭೆಗೆ ತಿಳಿಸಿದರು.

 

ಹಿಂದಿನ ಕಾಲದಲ್ಲಿ ಮುಸ್ಲಿಂ ಜನಾಂಗದ ಆಗರ್ಭ ಶ್ರೀಮಂತ ನಾಯಕರು ಸಮುದಾಯದ ಏಳಿಗೆಗಾಗಿ ಈಗಾಗಲೇ ಭೂಮಿ ಸೇರಿದಂತೆ ಸ್ಥಳಗಳನ್ನು ನೀಡಿದ್ದಾರೆ ಆದರೆ ಅದರ ನಿರ್ವಹಣೆ ಇಲ್ಲದೆ ಸಮುದಾಯಕ್ಕೆ ಅದರಿಂದ ಯಾವ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಅಂತದ್ದರಲ್ಲಿ  ಸಂಪತ್ತು ಕ್ರೂಡಿಕರಿಸಲು ಮೊದಲು ಹಣದ ಅವಶ್ಯಕತೆ ಇದೆ ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ಕೆಲವರು ಸೋತಿದ್ದಾರೆ ಆದರೆ ಇನ್ನು ಮುಂದೆ ಇಂತಹ ಯಾವುದೇ ಕಾರ್ಯಕ್ರಮ ಇದ್ದರು ಮಲೆನಾಡು ಗಲ್ಫ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ ಸಂಪನ್ಮೂಲ ಕ್ರೂಡೀಕರಣದ ಕಡೆಗೆ ಮುಖ ಮಾಡುತ್ತದೆ ಹಾಗೂ ಅದರಲ್ಲಿ ಬಂದಂತಹ ಸಂಪನ್ಮೂಲವನ್ನು ಮೊದಲ ಹಂತದಲ್ಲಿ ಸಮುದಾಯದ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ವ್ಯವಹಿಸಲಾಗುವುದು ಹಾಗೂ ಸಂಪೂರ್ಣವಾಗಿ ವಿದ್ಯೆಯನ್ನು ಪಡೆದರೆ ಉದ್ಯೋಗ ಸೃಷ್ಟಿಯಾಗುತ್ತದೆ ಇದರಿಂದ ಸಮುದಾಯಕ್ಕೆ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸುಲಭ ಆಗುತ್ತದೆ  ಎಂದು ತಿಳಿಸಿದರು.

ಐ.ಪಿ.ಎಸ್, ಐ.ಎ.ಸ್ ಹಾಗೂ ಸಿವಿಲ್ ವಿದ್ಯಾಬ್ಯಾಸ ಪಡೆದುಕೊಳ್ಳುವ  ನಿಟ್ಟಿನಲ್ಲಿ ಸಮುದಾಯದ ಮಕ್ಕಳ ಪ್ರೋತ್ಸಾಹ ಮಾಡಬೇಕಾದ  ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದು ಸಬ್ಬೇನಹಳ್ಳಿ ಹಮೀದ್ ಸಭೆಗೆ ಸೂಚಿಸಿದಾಗ  ಈಗಾಗಲೇ ಮಂಗಳೂರು ಸಮೀಪ ಇದರ ಕೋಚಿಂಗ್ ಸೆಂಟರ್ ಇದೆ ಅದರಲ್ಲಿ ಕೆಲವು ವಿದ್ಯಾರ್ಥಿಗಳು ಈಗಾಗಲೇ ತರಬೇತಿ ಪಡೆಯುತ್ತಿದ್ದು ನಾವು ಇಂತಹ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ  ಸಿಗಬೇಕಾದರೆ ನಿಮ್ಮ ನಿಮ್ಮ ಊರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹುಡುಕಿ ಕೇಂದ್ರ ಲೋಕಸೇವಾ ಆಯೋಗದಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರೇರಣೆ ನೀಡಬೇಕು ಇಂತಹ ಕೆಲಸ ಮಾಡಿದ್ದಲ್ಲಿ ಮಾತ್ರ ಸಮುದಾಯದಲ್ಲಿ ವಿದ್ಯಾರ್ಥಿಗಳು ಗ್ರೇಡ್ ಒನ್ ಹುದ್ದೆಗಳತ್ತ ಮುಖ ಮಾಡಲು  ಮನಸ್ಸು ಮಾಡುತ್ತಾರೆ ಇದರ ಪ್ರೇರಣೆ ಹಾಗೂ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಸಭೆಗೆ ಸೂಕ್ಷ್ಮವಾಗಿ ತಿಳಿಸಿದರು.

 

ಸಮುದಾಯದಲ್ಲಿ ಪ್ರತಿಭಾವಂತ ಮಕ್ಕಳಿದ್ದರೂ ಅವರಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮಾಡಲು ಆರ್ಥಿಕ ಪರಿಸ್ಥಿತಿ ಎದುರಾಗುತ್ತದೆ ಅದೇ ರೀತಿ ಸಮುದಾಯದ್ದೇ ಆದ ಶಾಲಾ ಕಾಲೇಜುಗಳು ಇದ್ದರೂ ಅದರಲ್ಲಿ ಕಲಿಸಲು ಸಮುದಾಯದ ಬಡ ಮಕ್ಕಳಿಗೆ ಅಸಾಧ್ಯವಾಗಿದೆ ಇಂತಹ ಅತಿ ಸೂಕ್ಷ್ಮ ವಿಚಾರವನ್ನು ಪರಿಗಣಿಸಿ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಬಡವ ಶ್ರೀಮಂತರೆಂದು  ತಾರತಮ್ಯ ಮಾಡದೆ ನಮ್ಮ ಸಂಸ್ಥೆಯಲ್ಲಿ ವಿದ್ಯಾಸಂಸ್ಥೆಯನ್ನು ಹುಟ್ಟಾಕುವಂತಹ ಯೋಜನೆಗಳನ್ನು ಮಾಡಬೇಕಾಗಿದೆ ಈ ಕುರಿತು ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿಯಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ  ಈಗಾಗಲೇ ಮಲೆನಾಡು ಪ್ರದೇಶವಾದ ಮೂಡಿಗೆರೆಯ ಬಳಿ  ಸ್ಥಳವನ್ನು ಖರೀದಿ ಮಾಡಿದ್ದು ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿ ಎಲ್ಲರಿಗೂ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಪದವಿ ಹಾಗೂ ಸ್ನಾತಕೋತರ ಪದವಿ ಪಡೆಯುವ ವಿದ್ಯಾಸಂಸ್ಥೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು ಈ ಬಗ್ಗೆ ಸಂಸ್ಥೆ ಗಂಭೀರವಾಗಿ ಚಿಂತಿಸುತ್ತಿದೆ  ಎಂದು ಸಭೆಯಲ್ಲಿ ಸಭೆಯ ಪ್ರಮುಖರಾದ ನಾಯಕರು ಮಾಹಿತಿ ನೀಡಿದರು.

 

ಮುಸ್ಲಿಂ ಸಮುದಾಯವು ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ಆರೋಗ್ಯ ಸೇರಿದಂತೆ ಅಭಿವೃದ್ಧಿಯು ಕೂಡ ಸಾಧ್ಯ ಈ ನಿಟ್ಟಿನಲ್ಲಿ ಸಂಸ್ಥೆಯ ಮೊದಲ ಗುರಿ ವಿದ್ಯೆದ ಕಡೆ ಅದರಂತೆ ಸಮುದಾಯದಲ್ಲಿ ಬರುವಂತಹ ಎಲ್ಲಾ ಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಅದ್ಭುತವಾಗಿ ಕೆಲಸ ಮಾಡುತ್ತಿದೆ ಹಾಗೂ ಇದರ ಸದ್ಬಳಕೆಯನ್ನು ಮಾಡಿ ಪ್ರತಿಫಲ ಅರ್ಹ ವ್ಯಕ್ತಿಗೆ ತಲುಪಿಸುವಲ್ಲಿ ಪ್ರತಿಯೊಬ್ಬರು ಶ್ರಮವಹಿಸಬೇಕು ಎಂದೂ ಸಂಸ್ಥೆಯ ಪ್ರಮುಖರು ಈ ಸಂದರ್ಭದಲ್ಲಿ ಸೂಚಿಸಿದರು.

 

ಸರ್ವ ಸಮಿತಿ ಸಭೆಯ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಅಧ್ಯಕ್ಷ ಅಕ್ರಂ ಹಾಜಿ, ಕಾರ್ಯದರ್ಶಿ ಇಸಾಕ್, ರಾಷ್ಟ್ರೀಯ ಕಮಿಟಿ ಅಧ್ಯಕ್ಷ ಸತ್ತಾರ್, ನಾಯಕರಾದ ವಾಹಿದ್, ಜಮಾಲ್, ಯೂಸುಫ್ ಹಾಜಿ, ಇಬ್ರಾಹಿಂ ಹಾಜಿ, ಅಬೂಬಕ್ಕರ್ ಸಿದ್ದಿಕ್, ಹಮೀದ್ ಸಬ್ಬೇನಹಳ್ಳಿ, ಜಮೀರ್, ಶಾಫಿ ಬಾಳೆಹೊನ್ನೂರು, ಹಾಗೂ ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿ ಎಚ್ ಮೊಹಮ್ಮದ್ ಮುಂತಾದವರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!