May 2, 2024

MALNAD TV

HEART OF COFFEE CITY

85 ಗಂಟೆಯಲ್ಲಿ ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ನನ್ನ ಕೃತಜ್ಞತೆ : ಆರಗ ಜ್ಞಾನೇಂದ್ರ

1 min read

ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಯಾವ ಸಾಕ್ಷಿಗಳು ಇಲ್ಲ. ತೊಂದರೆಗೊಳಗಾದವರು ಹೇಳಿಕೆ ನೀಡಿಲ್ಲ. ಆದರೂ ನಮ್ಮ ಪೊಲೀಸರು ಪ್ರಕರಣವನ್ನ ಹೇಗೆ ಭೇದಿಸುತ್ತಾರೆ ಎಂದು ಅನ್ನಿಸಿತ್ತು. ಮಂತ್ರಿಯಾಗಿ ನಾನೇ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಆದರೆ, ನಮ್ಮ ಪೊಲೀಸರು 85 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆಗ ನನ್ನ ಹೃದಯ ತುಂಬಿ ಬಂತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಜಿಲ್ಲೆಯ ಕಡೂರಿನಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ 5ನೇ ತಂಡ ತರಬೇತಿ ಪಡೆದು ನಿರ್ಗಮಿತದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪೊಲೀಸರು ಈ ಪ್ರಕರಣವನ್ನ ಹೇಗೆ ಹೊರ ತೆಗೆಯುತ್ತಾರೆ ಎಂದು ಅನ್ನಿಸಿತ್ತು. ಆದರೆ, ನಮ್ಮ ಪೊಲೀಸರು 85 ಗಂಟೆಯಲ್ಲೇ ಅವರನ್ನ ಬಂಧಿಸಿದಾಗ ಹೃದಯ ತುಂಬಿ ಬಂತು, ನಮ್ಮ ಪೊಲೀಸರ ಇಮೇಜ್ ಜಾಸ್ತಿಯಾಯ್ತು ಎಂದರು. ನಮ್ಮ ಪೊಲೀಸ್ ವ್ಯವಸ್ಥೆ ಅತ್ಯಂತ ಬಿಗಿಯಾಗಿದೆ. ವೈಜ್ಞಾನಿಕವಾಗಿ ಇಂತಹಾ ಪ್ರಕರಣಗಳನ್ನ ಪತ್ತೆ ಹಚ್ಚುವ ಎಲ್ಲಾ ಕಲೆ ನಮ್ಮ ಪೊಲಿಸರಿಗೆ ಕರಗತವಾಗಿದೆ ಎಂದರು. ಇದೇ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಷಣ ಮಾಡುವ ವೇಳೆ ವೇದಿಕೆ ಮುಂಭಾಗ ಎಡ ಹಾಗೂ ಬಲಭಾಗದಲ್ಲಿ ನಿಂತಿದ್ದ ಪೊಲೀಸರಲ್ಲಿ ಮೈಸೂರಿನ ಅಶ್ವದಳದ ಮೈಲುದ್ದೀನ್ ಎಂಬ ಸಿಬ್ಬಂದಿ ಬಿಸಿಲಿಗೆ ತಲೆಸುತ್ತು ಬಂದು ಬಿದ್ದರು. ಕೂಡಲೇ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ವೇದಿಕೆ ಮೇಲಿದ್ದ ಎದ್ದು ಬಂದು ಸಿಬ್ಬಂದಿಯನ್ನ ಎತ್ತಿ ನೀರು ಕುಡಿಸಿ ಆಂಬುಲೆನ್ಸ್‍ಗೆ ಸ್ವತಃ ಎಸ್ಪಿಯೇ ಎತ್ತಿಕೊಂಡು ಹೋಗಿ ಆಂಬುಲೆನ್ಸ್‍ನಲ್ಲಿ ಕೂರಿಸಿದರು. ಅಲ್ಲಿವರೆಗೆ ಆರಗ ಜ್ಞಾನೇಂದ್ರ ಕೂಡ ಮಾತು ನಿಲ್ಲಿಸಿದ್ದರು. ನಮ್ಮ ಸೇನಾ ಪಡೆ ಜಗತ್ತಿನ ಅತ್ಯಂತ ಮೂರನೇ ದೊಡ್ಡ ಪಡೆ. ಜಗತ್ತಿನಲ್ಲಿ ನಮ್ಮ ಪೊಲೀಸ್ ಪಡೆಗೆ ಅತ್ಯಂತ ಒಳ್ಳೆಯ ಹೆಸರಿದೆ. ಅದರಲ್ಲೂ ನಮ್ಮ ಕರ್ನಾಟಕದ ಪೊಲೀಸರಿಗೆ ಇದೆ ಎಂದು ತರಬೇತಿ ಪಡೆದ ನೂತನ ನಿರ್ಗಮಿತ ಪೊಲೀಸರಿಗೆ ಹುರಿದುಂಬಿಸಿದರು. ಮೈಸೂರು ಪ್ರಕರಣದ ಎಲ್ಲಾ ಅಪರಾಧಿಗಳನ್ನ ಬಂಧಿಸುತ್ತಿದ್ದಾರೆ. ಅವರಿಗೆ ಶಿಕ್ಷೆ ಆಗುವಂತೆ ನಮ್ಮ ಪೊಲೀಸರು ವಿಶೇಷ ಶ್ರಮ ವಹಿಸಿದ್ದಾರೆ. ಸರ್ಕಾರ ಕೂಡ ಅದರ ಬಗ್ಗೆ ವಿಶೇಷವಾದ ಆದ್ಯತೆ ನೀಡಿದೆ. ಮೈಸೂರಿನ ಎರಡೂ ಪ್ರಕರಣಗಳನ್ನ ಶಾರ್ಟ್ ಪಿರಿಯಡ್‍ನಲ್ಲಿ ಭೇದಿಸಿದ ಎಲ್ಲಾ ಪೊಲೀಸ್ ತಂಡಕ್ಕೆ ನನ್ನ ಕೃತಜ್ಞತೆ ಎಂದರು. ಯಾರು ಅಪರಾಧ ಮಾಡುತ್ತಾರೋ ಅವರಿಗೆ ದೊಡ್ಡ ಸಂದೇಶ ಹೋಗಿದೆ. ಏನಾದರೂ ಮಾಡಿ ಹೇಗಾದರೂ ಬಚಾವ್ ಆಗಬಹುದು ಅನ್ನೋದು ಆಗಲ್ಲ. ಪೊಲೀಸರು ಅದರ ಹಿಂದೆ ಬೀಳುತ್ತಾರೆ. ಅದನ್ನ ಯಶಸ್ವಿಯಾಗಿ ಭೇದಿಸುತ್ತಾರೆ ಎಂದರು. ಸಂತ್ರಸ್ಥೆ ಈಗ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಂತಹಾ ಸಮಯದಲ್ಲಿ ಹೆಚ್ಚು ಒತ್ತಡ ಹಾಕುವುದು ಸರಿಯಲ್ಲ. ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಿದರು. ಸ್ವಲ್ಪ ಸಮಯದ ನಂತರ ಹೇಳಬಹುದು. ಮಣಿಪಾಲ್ ಘಟನೆಯಲ್ಲಿ ಹೇಳಿಕೆ ಕೊಡುವುದಿಲ್ಲ ಎಂದವರು ಮೂರು ತಿಂಗಳ ಬಳಿಕ ಹೇಳಿಕೆ ನೀಡಿದ್ದರು. ಮನವೋಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!