May 20, 2024

MALNAD TV

HEART OF COFFEE CITY

ಮಂಕಿ ರಿಟನ್ಸ್ ಟು ಫಾರೆಸ್ಟ್

1 min read

ಸೆರೆ ಹಿಡಿದು 22 ಕಿ.ಮೀ. ದೂರದ ಅರಣ್ಯಕ್ಕೆ ಬಿಟ್ಟಿ ಬಂದಿದ್ದರೂ ಗೊಬ್ಬರ ಲಾರಿ ಏರಿ ಮತ್ತೆ ಬಂದಿದ್ದ ಕೋತಿಗೆ ಅರವಳಿಕೆ ಮದ್ದು ನೀಡಿ ಮತ್ತೆ ಅರಣ್ಯಕ್ಕೆ ಬಿಟ್ಟಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಕಳೆದ ವಾರ ರೇಗಿಸಿದ ಆಟೋ ಚಾಲಕ ಮೇಲೆ ದಾಳಿ ಮಾಡಿದ್ದ ಕೋತಿ ಅವನ ಆಟೋವಿನ ಟಾಪ್ ಕಿತ್ತು ಹಾಕಿ ಆಕ್ರೋಶ ಹೊರಹಾಕಿತ್ತು. ಸ್ಥಳಿಯರು ಮೇಲೂ ದಾಳಿ ಮಾಡಿದ್ದರಿಂದ ಅರಣ್ಯ ಇಲಾಖೆ 18 ಗಂಟೆ ಕಾರ್ಯಾಚರಣೆ ನಡೆಸಿ 22 ಕಿ.ಮೀ. ದೂರದ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿ ಬಂದಿದ್ದರು. ಆದರೆ, ಕೋತಿ ಕಳೆದ ರಾತ್ರಿ ಗೊಬ್ಬರದ ಲಾರಿ ಏರಿ ಮತ್ತೆ ಕೊಟ್ಟಿಗೆಹಾರಕ್ಕೆ ಬಂದಿತ್ತು. ಇದರಿಂದ ಸ್ಥಳಿಯರ ಆತಂಕ ಮತ್ತೆ ಇಮ್ಮಡಿಗೊಂಡಿತ್ತು. ಇಂದು ಬೆಳಗ್ಗೆಯಿಂದ ಮತ್ತೆ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆ ಮಂಗನಿಗೆ ಮತ್ತೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಸುಮಾರು ಮೂರ್ನಾಲ್ಕು ಗಂಟೆ ಆಟವಾಡಿಸಿದ ಕೋತಿಯನ್ನ ಕೊಟ್ಟಿಗೆಹಾರದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಸೆರೆಯಾದ ಕೋತಿಯನ್ನ ಹೊರಜಿಲ್ಲೆಯ ಅರಣ್ಯಕ್ಕೆ ಬಿಡಲು ಕೊಂಡೊಯ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!