April 27, 2024

MALNAD TV

HEART OF COFFEE CITY

ಶಾಸಕ ರಾಜೇಗೌಡ ತಪ್ಪಾಯ್ತು ಕ್ಷಮಿಸಿ, ಅಂದ್ರು ನಿಲ್ಲದ ಆಕ್ರೋಶ

1 min read

 

ಚಿಕ್ಕಮಗಳೂರು : ತಾಲೂಕಿನ ದತ್ತಪೀಠ ಹಾಗೂ ಅಯೋಧ್ಯೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ತಮ್ಮ ಹೇಳಿಕೆ ವಿರುದ್ಧ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಆದರೆ, ಶಾಸಕರ ರಾಜೇಗೌಡ ಕ್ಷಮೆ ಕೇಳಿದರೂ ಜಿಲ್ಲೆಯಲ್ಲಿ ಶಾಸಕ ರಾಜೇಗೌಡ ವಿರುದ್ಧ ಆಕ್ರೋಶ ನಿಂತಿಲ್ಲ. ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದ ಶಾಸಕ ಟಿ.ಡಿ. ರಾಜೇಗೌಡ ಅಲ್ಲಿಂದಲೇ ವಿಡಿಯೋ ಮೂಲಕ ತಮ್ಮ ಹೇಳಿಕೆ ವಿರುದ್ಧ ಕ್ಷಮೆಯಾಚಿಸಿದ್ದಾರೆ. ಹಳ್ಳಿಗಳಲ್ಲಿ ರೂಢಿಯಿರುವ ಪದಬಳಕೆ ಮಾಡಿದ್ದೇನೆ. ಆ ಶಬ್ದ ಬಳಸಬಾರದಿತ್ತು. ಆ ಪದದ ಬಳಕೆ ಯಾರ ಸಂಸ್ಕೃತಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆಂದು ಆಕ್ರೋಶವಾಗಿ ಮಾತನಾಡಿದೆ. ದತ್ತಮಾಲೆ ಹಾಕಲಿಲ್ಲ ಎಂದು ದಲಿತ ವಿದ್ಯಾರ್ಥಿಗೆ ಹಲ್ಲೆ ಮಾಡಿದರು. ಹಲ್ಲೆ ವಿಷಯವಾಗಿ ಬುದ್ಧಿ ಹೇಳುವ ಕೆಲಸವನ್ನು ಮಾಡಿದ್ದೇನೆ ಎಂದರು. ಶಾಸಕರ ವಿವಾದಾತ್ಮಕ ಹೇಳಿಕೆ ವಿರುದ್ಧ ಮಲೆನಾಡಲ್ಲಿ ಶಾಸಕ ರಾಜೇಗೌಡರ ವಿರುದ್ದ ಸಾಲು-ಸಾಲು ಪ್ರತಿಭಟನೆಗಳು ನಡೆದಿವೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಶಾಸಕರ ಹೇಳಿಕೆಗೆ ವ್ಯಾಪಾಕ ಟೀಕೆ ವ್ಯಕ್ತವಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರಿನಲ್ಲಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕೈ ಶಾಸಕ ಹೇಳಿಕೆಯನ್ನು ಖಂಡಿಸಿ, ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಶಾಸಕರ ವಿವಾದಾತ್ಮಕ ಆಡಿಯೋವನ್ನ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಎನ್.ಆರ್.ಪುರದ ಅಂಬೇಡ್ಕರ್ ವೃತ್ತದ ಬಳಿಯಿರುವ ಶಾಸಕ ಟಿ.ಡಿ. ರಾಜೇಗೌಡ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಶಾಸಕರ ಕಛೇರಿಗೆ ಮುತ್ತಿಗೆ ಯತ್ನ ನಡೆಸಿದ ಹಿನ್ನೆಲೆ ನೂರಾರು ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗೊಳಿಸಿದರೆ. ಇದೇ ವೇಳೆ, ಶಾಸಕ ಟಿ.ಡಿ. ರಾಜೇಗೌಡರ ಕಛೇರಿಗೆ ಮುತ್ತಿಗೆ ಯತ್ನ ನಡೆಸುವ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಪ್ರತಿಕೃತಿಗೆ ಚಪ್ಪಲಿ ಹಾಕಿ ಅದನ್ನು ದಹಿಸುವ ಮೂಲಕ ಭಜರಂಗದಳದ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದರು. ಪ್ರತಿಭಟನೆಯಲ್ಲಿ ನೂರಾರು ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!