May 15, 2024

MALNAD TV

HEART OF COFFEE CITY

ಉಬ್ಬಿದ ರಕ್ತನಾಳಗಳ ಬೃಹತ್ ಉಚಿತ ತಪಾಸಣಾ ಶಿಬಿರ

1 min read
Massive Free Varicose Veins Checkup Camp

ಚಿಕ್ಕಮಗಳೂರು : ರೋಟರಿ ಕಾಫಿ ಲ್ಯಾಂಡ್ ಹಾಗೂ ಎಐವಿಎಸ್ ಆಸ್ಪಿಟಲ್ ಹೈದರಾಬಾದ್ ಇವರ ವತಿಯಿಂದ ಉಬ್ಬಿದ ರಕ್ತನಾಳಗಳ ಬೃಹತ್ ಉಚಿತ ತಪಾಸಣಾ ಶಿಬಿರವನ್ನು ಶನಿವಾರ ನಗರದ ರೋಟರಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಯಿತು.
ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಕಾಫಿ ಲ್ಯಾಂಡ್ ಹಾಗೂ ಎಐವಿಎಸ್ ಆಸ್ಪಿಟಲ್ ಹೈದ್ರಬಾದ್ ಇವರ ಸಹಭಾಗಿತ್ವದಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ನರಗಳ ಗಂಟಿನ ತಪಾಸಣೆ ಮಾಡುವುದು ಈ ಶಿಬಿರದ ವಿಶೇಷವಾಗಿದೆ, ಹಲವಾರು ರೋಗಿಗಳು ಶಿಬಿರಕ್ಕೆ ಆಗಮಿಸಿದ್ದು ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಸಾರ್ವಜನಿಕರ ಉಪಯೋಗಕ್ಕಾಗಿ ಈ ತಪಾಸಣೆಯನ್ನು ಮಾಡಲಾಗುತ್ತಿದೆ ಎಂದರು.
ರೋಟರಿ ಕಾಫಿ ಲ್ಯಾಂಡ್ ಅಂತರಾಷ್ಟಿçÃಯ ಸಂಸ್ಥೆಯಾಗಿದ್ದು, ನಮ್ಮ ಸಂಸ್ಥೆಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಮೊದಲ ಆದ್ಯತೆಯನ್ನು ನೀಡಲಾಗುವುದು, ಪೋಲಿಯೋ ಹನಿ ರೋಟರಿ ಕಾಫಿ ಲ್ಯಾಂಡ್ ಸಂಸ್ಥೆಯಿAದ ಬರುವ ಹನಿ, ಇದೇ ರೀತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ನಡೆಸಿಕೊಂಡು ಬಂದಿದೆ ಎಂದರು.
ಎಐವಿಎಸ್ ಆಸ್ಪಿಟಲ್ ಡಾ. ಯೋಗೀಶ್ ಮಾತನಾಡಿ ವರಿಕೋಸ್‌ವೆಯ್ನ್÷್ಸ ಎಂಬುದು ಬಹಳ ಸಮಯದವರೆಗೆ ನಿಂತು ಕೆಲಸವನ್ನು ಮಾಡುವುದರಿಂದ, ಮಹಿಳೆಯರಲ್ಲಿ ಗರ್ಭಧಾರಣೆ ಸಮಯದಲ್ಲಿ ಹಾಗೂ ಅನುವಂಶಿಕವಾಗಿ ಬರುತ್ತದೆ, ವರಿಕೋಸ್ ವೆಯ್ನ್÷್ಸನಿಂದ ರಕ್ತ ಸಂಚಾರ ಸರಿಯಾಗಿ ಆಗದೆ ಕಾಲಿನಲ್ಲಿ ಸುತ್ತಿಕೊಂಡಿರುತ್ತದೆ, ಇದಕ್ಕೆ ಯಾವುದೇ ರೀತಿಯ ಔಷದಿಗಳು ದೋರೆಯುವುದಿಲ್ಲ, ಶಸ್ತçಚಿಕಿತ್ಸೆ ಅಥವಾ ಲೇಸರ್ ಚಿಕಿತ್ಸೆಯಿಂದ ಮಾತ್ರ ಗುಣಪಡಿಸಲು ಸಾದ್ಯ ಎಂದರು.
ಉರಿ, ಕಡಿತ ಮತ್ತು ಕಾಲು ಊತಗೊಳ್ಳುವುದು ವರಿಕೋಸ್ ವೆಯ್ನ್÷್ಸನ ಲಕ್ಷಣಗಳಾಗಿದೆ, ಕೆಲವು ಔಷಧಿ ಮತ್ತು ಸಾಕ್ಸ್ ಹಾಕುವುದರ ಮೂಲಕ ತಾತ್ಕಾಲಿಕವಾಗಿ ತಡೆಯಬಹುದಾಗಿದೆ, ಕಾಲ್ನಡಿಗೆ, ತುಂಬ ಸಮಯದ ವರೆಗೆ ನಿಂತು ಕೆಲಸ ಮಾಡುವುದನ್ನು ನಿಲ್ಲಿಸುವುದರಿಂದ ವರಿಕೋಸ್ ವೆಯ್ನ್÷್ಸನ ತಡೆಯಬಹುದು ಎಂದರು.
ರೋಟರಿ ಕಾಫಿ ಲ್ಯಾಂಡ್ ಸದಸ್ಯ ಸುರೇಶ್ ಮಾತನಾಡಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಹೆಚ್ಚು ಒತ್ತನ್ನು ನೀಡಿತ್ತಾ ಬಂದಿದ್ದೇವೆ, ಬೆಂಗಳೂರಿನ ಅವಿಸ್ ಆಸ್ಪತ್ರೆ ಮತ್ತು ರೋಟರಿ ಕಾಫಿ ಲ್ಯಾಂಡ್ ಸಂಸ್ಥೆವತಿಯಿAದ ಇಂದು ಲೆಗ್ ಅಲ್ಸರ್, ವರಿಕೋಸ್ ವೆಯ್ನ್÷್ಸ ಬಗ್ಗೆ ಉಚಿತ ತಪಾಸಣೆಯನ್ನು ನಡೆಸಲಾಗುತ್ತಿದ್ದು ಹೆಚ್ಚಿನ ಚಿಕಿತ್ಸೆಬೇಕಾದಲ್ಲಿ ಬೆಂಗಳೂರಿನ ಅವಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ, 150 ಜನರಿಗೆ ಚಿಕಿತ್ಸೆ ನೀಡುವ ಗುರಿಯನ್ನಿಟ್ಟುಕೊಂಡು ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎ.ಜಿ.ಗುರುಮೂರ್ತಿ, ಮಂಜುನಾಥ್, ನೀಲೇಶ್, ಜಯೇಶ್, ಶಾಂತರಾಮ್ ಶೆಟ್ರು, ಆನಂದ್, ದಯಾನಂದ್, ಗುರುಪ್ರಸಾದ್, ತನೋಜ್ ನಾಯ್ಢು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!