May 15, 2024

MALNAD TV

HEART OF COFFEE CITY

೨ನೇ ದಿನವೂ ಮಂಜುನಾಥ್‌ಗೌಡ ಅವರಿಂದ ಏಕಾಂಗಿ ಧರಣಿ

1 min read

 

ಚಿಕ್ಕಮಗಳೂರು: ತನ್ನ ಜಮೀನಿಗೆ ಸಂಬoಧಿಸಿದ ಎಲ್ಲಾ ದಾಖಲಾತಿ ಪಡೆಯುವ ಸಲುವಾಗಿ ತಹಸೀಲ್ದಾರ್ ಕೊಠಡಿ ಮುಂದೆ ಗುರುವಾರದಿಂದ ಆರಂಭಿಸಿದ ಏಕಾಂಗಿ ಧರಣಿಯನ್ನು ರೈತ ಮುಖಂಡ ಎಂ.ಮoಜುನಾಥ್‌ಗೌಡ ಶುಕ್ರವಾರವೂ ಮುಂದುವರೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಕಾಯಿದೆ ಅಧಿನಿಯಮ ೧೩೩ರಲ್ಲಿ ಸರಕಾರಿ ಅಧಿಕಾರಿಳು ಒಂದು ಬಾರಿ ದಾಖಲೆ ನಮೂದಿಸಿದರೆ ಅದೇ ಸತ್ಯವೆಂದು ಪರಿಗಣಿಸಲಾಗುತ್ತದೆ. ತಪ್ಪಾಗಿ ನಮೂದಿಸಿದ್ದರೂ ನ್ಯಾಯಾಲಯಕ್ಕೆ ಹೋಗುವಂತಿಲ್ಲ ಎಂದು ಕಾಯಿದೆಯಲ್ಲಿ ಇದೆ. ಆದರೆ ಅಧಿಕಾರಿಗಳು ಮಾಡಿದ ತಪ್ಪನ್ನು ಖಂಡಿಸುವ ಅಧಿಕಾರವೂ ಜನರಿಗೆದೆ. ದಾಖಲೆಗಳು ತಪ್ಪಾಗಿದ್ದರೆ ಅದನ್ನು ಸರಿಪಡಿಸುವ ಅಧಿಕಾರವೂ ಅಧಿಕಾರಿಗಳಿಗಿದೆ ಎಂದು ಕಾಯಿದೆಯಲ್ಲಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ರೈತರಿಗೆ ನ್ಯಾಯ ದೊರಕುತ್ತದೆ ಎಂದು ಹೇಳಿದರು.
ಕಾಯಿದೆ ೧೩೬ರಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ ಅದು ಸದುದ್ದೇಶದಿಂದ ಮಾಡಿದ್ದಾರೆ ಎಂದು ಹೇಳುತ್ತದೆ. ಹೀಗೆ ತಪ್ಪು ಮಾಡಿ ರೈತರನ್ನು ಪೀಡಿಸಿ ಜೀವನವೇ ನಾಶಪಡಿಸುವಂತಾಗಬಾರದು. ಈ ಕಾಯಿದೆ ಜನವಿರೋಧಿಯಲ್ಲ. ಆದರೆ ದುರುಪಯೋಗ ತುಂಬಾ ಆಗುತ್ತಿದೆ. ಇದರಿಂದಲೇ ತನಗೆ ಸತಾಯಿಸುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿದ್ದರೆ ಇದು ಸಮಸ್ಯೆಯೆ ಅಲ್ಲ. ಪಹಣಿ ಒಟ್ಟುಗೂಡಿಸುವ ಸುತ್ತೋಲೆ ಕೇಳಿದರೆ ಅದು ಕೊಡುತ್ತಿಲ್ಲ. ಇದಕ್ಕೆ ೨ ತಿಂಗಳಿoದ ಸತಾಯಿಸುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!