April 30, 2024

MALNAD TV

HEART OF COFFEE CITY

ಪಠ್ಯಕ್ರಮ ಪರಿಷ್ಕರಣೆ ವಿಚಾರದಲ್ಲಿ ಪ್ರತಿಪಕ್ಷಗಳ ಅಡ್ಡಿ ಕೋಟಾ ಶ್ರೀನಿವಾಸ್ ಪೂಜಾರಿ

1 min read

ಚಿಕ್ಕಮಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಪ್ರತಿಪಕ್ಷಗಳು ಮತ್ತು ಇತರರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾ ಯಣಗುರುಗಳ ಮತ್ತು ಭಗತ್‍ಸಿಂಗ್ ಪಠ್ಯದಲ್ಲಿ ಸೇರ್ಪಡೆ ಸಂಬಂಧ ಸ್ಪಷ್ಠೀಕರಣ ನೀಡಲಾ ಗಿದೆ. ನಿರ್ಮಲಾನಂದನಾಥ್ ಸ್ವಾಮೀಜಿಯವರನ್ನು ಶಿಕ್ಷಣ ಸಚಿವ ಬಿ.ನಾಗೇಶ್ ಅವರು ಭೇಟಿಮಾಡಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಏನೇನು ಅಪಾದನೆ ಬಂದಿದೆ ಅದೆಲ್ಲದಕ್ಕೂ ಉತ್ತರ ನೀಡಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಸರ್ಕಾರ ಎಲ್ಲವನ್ನೂ ಬಗೆಹರಿಸಲಿದೆ ಎಂದು ತಿಳಿಸಿದ ಅವರು, ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರ ಸಂಬಂಧ ವ್ಯಕ್ತಿ ಆಧಾರ ಮೇಲೆ ನೋಡದೆ ವಿಷಯ ಆಧಾರದ ಮೇಲೆ ಮಾತನಾಡಬೇಕು ಎಂದು ತಿಳಿಸಿದರು.
ರೋಹಿತ್ ಚಕ್ರತೀರ್ಥ ಸೇರಿದಂತೆ ಅನೇಕರು ಸಮಿತಿಯಲ್ಲಿದ್ದಾರೆ. ಹಿಂದಿನ ಸರ್ಕಾರ ಅವರಿಗೆ ಬೇಕಾದವರನ್ನು ಸೇರಿಸಿ ಸಮಿತಿ ರಚಿಸಿತ್ತು. ಪಠ್ಯ ಪರಿಷ್ಕರಣೆ ಯಾರು ಮಾಡಿದ್ದಾರೆ ಎನ್ನುವು ದಕ್ಕಿಂತ ವಿಷಯಾಧಾರಿತವಾಗಿ ಮಾತನಾಡಬೇಕು ಎಂದರು.

ಮಸೀದಿಗಳಲ್ಲಿ ಹಿಂದೂ ದೇವಾಲಯ ಕುರುಹು ಸಂಬಂಧ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಮತೀಯ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿಗಳನ್ನು ಕಟ್ಟಲಾಗಿದೆ. ನಂತರ ಕಾಲಘಟ್ಟದಲ್ಲಿ ದೇವಾಲಯ ಕುರುಹುಗಳು ಕಾಣಿಸುತ್ತಿವೆ ಎನ್ನುವ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ಬಿಟ್ಟುಕೊಡಬೇಕು ಎನ್ನುವುದು ಹಿಂದೂಗಳ ಭಾವನೆ ಸತ್ಯಶೋಧನೆ ಸಂಬಂಧ ಸರ್ಕಾರ ಮತ್ತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ 34ಸಾವಿರ ದೇವಸ್ಥಾನಗಳು ಇದ್ದು, ನಿತ್ಯಪೂಜೆ ದೇವಸ್ಥಾನ ಅಭಿವೃದ್ಧಿ ಸರ್ಕಾರ ಅನುದಾನ ನೀಡುತ್ತಿದೆ. ಕೆಲವು ದೇವಸ್ಥಾನಗಳು ಶಿಥಿಲ ವಸ್ಥೆಯಲ್ಲಿದ್ದು ಹಂತ ಹಂತವಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.
ಆರ್‍ಎಸ್‍ಎಸ್ ಬಗ್ಗೆ ಮಾತನಾಡಿದರೇ ಬಿಜೆಪಿಯವರು ಎದೆ ಬಿಡಿದುಕೊಳ್ಳುತ್ತಾರೆಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್‍ಎಸ್‍ಎಸ್ ಬಗ್ಗೆ ಸಿದ್ಧರಾಮಯ್ಯ ಅವರು ಲಘು ವಾಗಿ ಮಾತನಾಡಬಾರದು ಅವರ ಪಕ್ಷದ ಹಿರಿಯರೇ ಆರ್‍ಎಸ್‍ಎಸ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಆರ್‍ಎಸ್‍ಎಸ್ ರಾಷ್ಟ್ರಪ್ರೇಮದ ಬಗ್ಗೆ ಸಿದ್ಧರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!