May 16, 2024

MALNAD TV

HEART OF COFFEE CITY

ಸಂಬಂಧಗಳನ್ನು ಗಟ್ಟಿಗೊಳಿಸಲು ರಕ್ತದಾನ ಶ್ರೇಷ್ಟ ಸಾಧನ_ನಟರಾಜ್

1 min read

 

ಚಿಕ್ಕಮಗಳೂರು: ಸಮಾಜದಲ್ಲಿ ಸಂಬಂಧಗಳನ್ನು ಸೃಷ್ಟಿಮಾಡಲು ಅಥವಾ ಆ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳಲು ಯಾವುದಾದ್ರು ಸಾಧನ ಇದ್ದರೆ ಅದು ರಕ್ತ. ಈ ಹಿನ್ನೆಲೆಯಲ್ಲಿ ಎಲ್ಲರೂ ಕನಿಷ್ಟ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ಜೀವಧಾರೆ ಟ್ರಸ್ಟ್ ಅಧ್ಯಕ್ಷ ಜೀವಧಾರೆ ನಟರಾಜ್ ತಿಳಿಸಿದರು.ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಸೋಮವಾರ ಕಂದಾಯ ಇಲಾಖೆ ನೌಕರರ ಸಂಘ, ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯ, ಜೀವಧಾರೆ ಟ್ರಸ್ಟ್ ಮಂಡ್ಯ ಹಾಗೂ ರಕ್ತನಿಧಿ ಕೇಂದ್ರ ಚಿಕ್ಕಮಗಳೂರು, ಜಿಲ್ಲಾಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದೇಹದ ಪ್ರತಿ ಅಂಗವನ್ನು ಕೃತಕವಾಗಿ ತಯಾರು ಮಾಡದಬಹುದು. ಆದರೆ ರಕ್ತವನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ. ರಕ್ತ ನೀಡಿದರೆ ಸಣ್ಣ ಆಗುತ್ತೇವೆ ಅಥವಾ ದಪ್ಪ ಆಗುತ್ತೇವೆ ಎಂಬ ಕಲ್ಪನೆ ಇದೆ ಇದು ತಪ್ಪು. ನಮ್ಮ ದೇಹವನ್ನು ಪರಿಶುದ್ಧ ಮಾಡಬೇಕಾದರೆ ಕನಿಷ್ಟ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.ಒಮ್ಮೆ ಒಬ್ಬರಿಗೆ ರಕ್ತದಾನ ಮಾಡಿದರೆ ಅದು ತಲೆಮಾರುಗಳ ವರೆಗೆ ಆ ರಕ್ತ ಜೀವಂತವಾಗಿರುತ್ತದೆ ಎಂದ ಅವರು, ಈಗಲೂ ರಕ್ತದಾನದ ಕುರಿತಾಗಿ ಕೆಲ ಗೊಂದಲಗಳಿವೆ ಈ ಬಗ್ಗೆ ಜಾಗೃತಿ ಮುಡಿಸುವ ಅಗತ್ಯ ಇದ್ದು ರಕ್ತಕೆ ಜಾತಿ,ಧರ್ಮ, ಪಕ್ಷ, ಹೆಣ್ಣು, ಗಂಡು ಎಂಬ ಬೇಧಭಾವ ಇಲ್ಲ ಎಂದರು.

ಜಿಲ್ಲಾಸ್ಪತ್ರೆ ಸರ್ಜನ್ ಮೋಹನ್ ಕುಮಾರ್ ಮಾತನಾಡಿ, ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಎಂದರು. ಸತ್ತಮೇಲೂ ಸಹ ದೇಹವನ್ನು ದಾನ ಮಾಡುವ ಮೂಲಕ ಹಲವರಿಗೆ ಆಸರೆಯಾಗಬಹುದು ಎಂದು ತಿಳಿಸಿದರು. ಜೀವನ್ ಸಾರ್ಥಕತೆ ಎಂಬ ವೆಬ್‍ಸೈಟ್ ಮೂಲಕ ದಾಖಲಾಗುವ ಮೂಲಕ ನಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಬಹುದು ಎಂದು ತಿಳಿಸಿದ ಅವರು ಈ ಮಾಹಿತಿಯನ್ನು ನಾವು ಮನೆ ಮನೆಗೆ ತಲುಪಿಸಿದರೆ ನಮ್ಮ ದೇಶದ ಎಲ್ಲಾ ಡಯಾಲಿಸಿಸ್ ಸೆಂಟರ್‍ಗಳನ್ನು ಮುಚ್ಚಬಹುದು, ಹಲವರಿಗೆ ದೃಷ್ಟಿಯನ್ನು ನೀಡಬಹುದು ಎಂದು ಸಲಹೆ ನೀಡಿದರು.

ಚಿಕ್ಕಮಗಳೂರು ಹಿರಿಯ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್ ಮಾತನಾಡಿ, ಮಂಡ್ಯದ ಜೀವಧಾರೆ ತಂಡ ಹಾಗೂ ನನ್ನೊಡನೆ ಕೆಲಸ ಮಾಡುವ ಸದಸ್ಯರಿಂದ ನನಗೂ ಸ್ವಲ್ಪ ತ್ಯಾಗ ಮನೋಭಾವ ಬಂದಿದೆ. ಇಲಾಖೆಯ ಎಲ್ಲಾ ಸಿಬ್ಬಂದಿಗಳು ರಕ್ತದಾನದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಡಾ.ಕೃಷ್ಣೇಗೌಡ ಮಾತನಾಡಿ, ಸರ್ಕಾರಿ ನೌಕರರಿಗೆ ಹಿರಿಯ ಉಪವಿಭಾಗಾಧಿಕಾರಿ ಡಾ,ಎಚ್.ಎಲ್ ನಾಗರಾಜ್ ಮಾದರಿ ಎಂದು ತಿಳಿಸಿದರು.

ತಹಶೀಲ್ದಾರ್ ಡಾ.ಕಾಂತರಾಜ್ ಮಾತನಾಡಿ, ನಮ್ಮಂತಹ ಯುವಕರಿಗೆ ಉಪವಿಭಾಗಾಧಿಕಾರಿಗಳು ಮಾದರಿಯಾಗಿದ್ದಾರೆ. ಈ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ ವಾಗಿದ್ದು ರಕ್ತದಾನಕ್ಕೆ ಯಾವುದೇ ಜಾತಿ,ಧರ್ಮ,ಬೇಧಭಾವವಿಲ್ಲ ಇಂತಹ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿರುವುದು ಪುಣ್ಯದ ಕೆಲಸದಲ್ಲಿ ನಮ್ಮ ಪಾತ್ರ ಇದೆ ಎಂಬುದು ಸಂತೋಷದ ಸಂಗತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿದೇರ್ಶಕಿ ಡಾ. ಮಂಜುಳಾ ಹುಲ್ಲಹಳ್ಳಿ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಮುರುಳಿ, ಜಿಲ್ಲಾ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಎಂ.ಎಸ್ ಹೇಮಂತ್ ಕುಮಾರ್, ಸತ್ಯನಾರಯಣ್. ವಿಷನ್ ಚಿಕ್ಕಮಗಳೂರು ಟ್ರಸ್ಟ್‍ನ ಸದಸ್ಯರು ಹಾಗೂ ಇನ್ನೀತರರು ಇದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!