May 16, 2024

MALNAD TV

HEART OF COFFEE CITY

ಅನೈತಿಕ ಸಂಬಂಧ, ಇಬ್ಬರ ಜೀವ ಬಲಿ, ವೇದಾನದಿಗೆ ಬಿದ್ದು ಆತ್ಮಹತ್ಯೆ

1 min read

 

ಚಿಕ್ಕಮಗಳೂರು: ಕಡೂರು ತಾಲೂಕಿನ ಯಗಟಿಪುರ ಬಳಿಯ ವೇದಾ ನದಿ ಚೆಕ್ ಡ್ಯಾಂ ಬಳಿ  ಮಹಿಳೆ ಶವ ಪತ್ತೆಯಾದ ಸ್ಥಳದಲ್ಲಿ ಗುರುವಾರ ಯುವಕನ ಶವವನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದಗದು. ಮಹಿಳೆ ಮತ್ತು ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದ್ದು ಅಕ್ರಮ ಸಂಬಂಧ ಇಬ್ಬರ ನಡುವೆ ಇತ್ತು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಲತಾ(36)ಮತ್ತು ಬೆಲಗೂರಿನ ಗಾಲಧಿನಗರದ ಲಕ್ಷ್ಮೀಕಾಂತ್(31) ಆತ್ಮಹತ್ಯೆ
ಮಾಡಿಕೊಂಡವರಾಗಿದ್ದಾರೆ.

ಲತಾಳ ಶವ ಪತ್ತೆಯಾದ ಸ್ಥಳದಲ್ಲಿ ಪುರುಷನ ಪಾದರಕ್ಷೆ ಹಾಗೂ ಧರ್ಮಸ್ಥಳದ ಪ್ರಸಾದದ ಬ್ಯಾಗ್‌ಗಳು ಪತ್ತೆಯಾಗಿದ್ದವು. ಹಾಗಾಗಿ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿ ಪೊಲೀಸರು ಬುಧವಾರವೇ ಅಗ್ನಿಶಾಮಕದಳ ಸಿಬ್ಬಂದಿಯನ್ನು ಕರೆಯಿಸಿದರೂ ಮತ್ತೊಂದು ಶವ ಪತ್ತೆಯಾಗಿರಲಿಲ್ಲ. ಹೀಗಾಗಿ ಮಲ್ಪೆಯ ತಜ್ಞ ಈಜುಗಾರರನ್ನು ಕರೆಸಲು ನಿರ್ಧರಿಸಿದರು.

 

ಗುರುವಾರ ಮಲ್ಪೆಯ ತಜ್ಞ ಈಜುಗಾರರಾದ ಈಶ್ವರ್, ಕಿಶೋರ್ ಕರ್ಕೇರ, ಕೃಷ್ಣ ಕರ್ಕೇರ ತಂಡವನ್ನು ಯಗಟಿ ಪಿಎಸ್‌ಐ ಶಶಿಕುಮಾರ್ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಕ್ಕೆ ಕರೆಯಿಸಿಕೊಂಡು ಬೆಳಗ್ಗೆ 7 ಗಂಟೆಗೆ ಶೋಧಕಾರ್ಯ ಆರಂಭಿಸಿದರು. ಸುಮಾರು 9 ಗಂಟೆಗೆ ನೀರಿನಡಿಯ ರಾಡ್‌ಗೆ ಸಿಲುಕಿಕೊಂಡಿದ್ದ ಲಕ್ಷ್ಮೀಕಾಂತನ ಶವವನ್ನು ಪತ್ತೆ ಹಚ್ಚಿದ ಈಜುಗಾರರು ಶವವನ್ನು ಹೊರತೆಗೆದರು. ಎರಡೂ ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಿದರು. ಶವಗಳ ಶೋಧ ಕಾರ್ಯಾಚರಣೆಯಲ್ಲಿ ಯಗಟಿ ಪೊಲೀಸ್ ಸಿಬ್ಬಂದಿ ಪ್ರದೀಪ್, ಶ್ರೀನಿವಾಸ್, ನಾಗರಾಜ್, ಶಾಹಿಸ್ತಾ ಇದ್ದರು.

ಇಬ್ಬರ ಆತ್ಮಹತ್ಯೆಗೆ ಅಕ್ರಮ ಸಂಬಂಧ ಕಾರಣ ಎಂದು ತಿಳಿದು ಬಂದಿದ್ದು ಮೃತ ಲತಾಳ ಪತ್ನಿ ಕೆ.ಎಂ.ಲೋಕೇಶ್ ಮತ್ತು ಲತಾ 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 13 ವರ್ಷದ ಮಗಳಿದ್ದಾಳೆ. ಲೋಕೇಶ್ ಪ್ಲಂಬಿಂಗ್ ಗುತ್ತಿಗೆದಾರನಾಗಿದ್ದು, ಇವರ ಜತೆ ಲಕ್ಷ್ಮೀಕಾಂತ್ ಕೆಲಸ ಮಾಡುತ್ತಿದ್ದ. ಅಲ್ಲದೆ ಅವರ ಮನೆಯಲ್ಲೇ 4 ವರ್ಷಗಳಿಂದ ವಾಸವಿದ್ದ ಲೋಕೇಶ್ ಅವರ ಪತ್ನಿ ಲತಾಳ ಜತೆ ಲಕ್ಷ್ಮೀಕಾಂತ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಲೋಕೇಶ್‌ಗೆ ತಿಳಿದಾಗ ಜಗಳವಾಗಿದ್ದು ನಂತರ ಲತಾ ತವರು ಮನೆ ಭಾಗಮಂಡಲಕ್ಕೆ ಜ.28ರಂದು ತೆರಳಿದ್ದಳು. ಮನೆಯಲ್ಲಿ ನಡೆದ ಘಟನೆಯನ್ನು ಲಕ್ಷ್ಮೀಕಾಂತನಿಗೆ ಫೋನ್‌ನಲ್ಲಿ ತಿಳಿಸಿದ್ದಳು.

ಲತಾ ಫೆ.7ರಂದು ವಾಪಸ್ ಗಂಡನ ಮನೆಗೆ ಹೋಗುತ್ತೇನೆಂದು ತವರು ಮನೆ ಯಿಂದ ಹೊರಟವಳು ಬೆಂಗಳೂರಿಗೆ ಹೋಗದೆ ಧರ್ಮಸ್ಥಳಕ್ಕೆ ತೆರಳಿದ್ದು, ಅಲ್ಲಿ ಲಕ್ಷ್ಮೀಕಾಂತ್ ಭೇಟಿಯಾಗಿದ್ದಾನೆ. ಇಬ್ಬರೂ ದೇವರ ದರ್ಶನ ಪಡೆದು ಕಡೂರು ಮಾರ್ಗವಾಗಿ ಬೆಲಗೂರಿಗೆ ಹೊರಟ್ಟಿದ್ದರು. ಆದರೆ ಇಬ್ಬರೂ ಕುಟುಂಬದವರಿಗೆ ಹೆದರಿ ಫೆ.8ರ ರಾತ್ರಿ ವೇದಾ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು ಘಟನೆ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!