May 17, 2024

MALNAD TV

HEART OF COFFEE CITY

ಭಾರೀ ಮಳೆ ಮನೆ ಮೇಲೆ ಬೃಹತ್ ಮರ ಬಿದ್ದು ಇಬ್ಬರು ಸಾವು

1 min read

 

 

ಚಿಕ್ಕಮಗಳೂರಿನಲ್ಲಿ ವರುಣನ ಅಟ್ಟಹಾಸ ಮುಂದುವರಿದಿದೆ, ಮೂಡಿಗೆರೆಯ ಕೆ.ತಲಗೂರು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಕಳೆದ ರಾತ್ರಿ ಇಬ್ಬರು ಬಲಿಯಾಗಿದ್ದಾರೆ.

 

ಬಾಳೂರು ವ್ಯಾಪ್ತಿಯ ಕೆ ತಲಗೂರು ಗ್ರಾಮದಲ್ಲಿ ಮನೆ ಮೇಲೆ ಬೃಹದಾಕಾರದ ಮರ ಬಿದ್ದು ಸುಖನಿದ್ರೆ ಮಲಗಿದ್ದ ಇಬ್ಬರು ಜೀವ ಬಿಟ್ಟಿದ್ದಾರೆ, ಮನೆಯಲ್ಲಿ ಮಲಗಿದ್ದ ಚಂದ್ರಮ್ಮ ಹಾಗೂ ಸರಿತಾ ದುರಂತ ಸಾವು ಕಂಡಿದ್ದಾರೆ, ಸುನಿಲ್ ಹಾಗೂ ದೀಕ್ಷಿತ್ ಎಂಬ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ, ತಮ್ಮ ಮನೆ ಮಳೆಗೆ ಶಿಥಿಲಗೊಂಡಿದ್ದರಿಂದ ಪಕ್ಕದ ಮನೆಯ ಸಂಬಂಧಿಕರ ಮನೆಗೆ ಮಲಗಲು ಬಂದಿದ್ದ ಸರಿತಾ ಹಾಗೂ ಚಂದ್ರಮ್ಮ ದುರಂತ ಸಾವು ಕಂಡಿದ್ದಾರೆ, ತಡರಾತ್ರಿ ನಡೆದಿರುವ ಘಟನೆ ಸ್ಥಳೀಯರಿಗೆ ಗಾಬರಿ ಹುಟ್ಟಿಸಿದೆ. ಮನೆ ಮೇಲೆ ಬಿದ್ದಿರುವ ಬೃಹತ್ ಮರ ಘಟನೆಯ ಭೀಕರತೆ ಬಿಚ್ಚಿಡುವಂತಿದೆ ಬಾರೀ ಗಾಳಿ ಅನಾಹುತ ತಂದೊಡ್ಡಿದೆ.

 

 

 

 

ಇದರೊಂದಿಗೆ ಮಳೆಗೆ ಕಾಫಿನಾಡಲ್ಲಿ ಈವರೆಗೂ ಐದು ಬಲಿಯಾದಂತಾಗಿದೆ, ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!