May 17, 2024

MALNAD TV

HEART OF COFFEE CITY

ಅಕ್ರಮ ಕಸಾಯಿಖಾನೆ ಮೇಲೆ ದಾಳಿ

1 min read

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ತೆರವು ಮುಂದೂವರೆ ದಿದ್ದು,  ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಟಿಪ್ಪುನಗರ ಬಡಾವಣೆಯಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ ಗೋಮಾಂಸವನ್ನು ವಶಕ್ಕೆ ಪಡೆದು ಶೆಡ್‍ಗಳಿಗೆ ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಿ ದರು.
ನಗರದ ಟಿಪ್ಪುನಗರದಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತ ಬಿ.ಸಿ.ಬಸವರಾಜ್, ನಗರ ಸಭೆ ಸಿಬ್ಬಂದಿ ಹಾಗೂ ನಗರ ಪೊಲೀಸ್ ಠಾಣೆ ಪೊಲೀಸರೊಂದಿಗೆ ಕಸಾಯಿಖಾನೆ ಅಕ್ರಮ ಮೂರು ಶೆಡ್‍ಗಳ ಮೇಲೆ ಬಿಸಿಬಿಯೊಂದಿಗೆ ದಾಳಿ ನಡೆಸಿದರು. ಈ ವೇಳೆ ಶೆಡ್‍ವೊಂದರಲ್ಲಿ ಅಂದಾಜು 250ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು, ನಗರಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣದ ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಅಕ್ರಮ ಕಸಾಯಿಖಾನೆ ಶೆಡ್‍ಗಳನ್ನು ನೆಲಸಮಗೊಳಿಸಲು ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಜೆಸಿಬಿಯೊಂದಿಗೆ ತೆರಳಿದ್ದರು. ಶೆಡ್ ಹಾಗೂ ಕಟ್ಟಡ ಅಕ್ರಮವೋ ಸಕ್ರಮ ವೋ ಎಂಬ ಗೊಂದಲ ಉಂಟಾಗಿದ್ದರಿಂದ ಶೆಡ್ ಮತ್ತು ಕಟ್ಟಡ ನೆಲಸಮಗೊಳಿಸಲು ಹಿಂ ದೇಟು ಹಾಕಿದರು.
ಗೋಮಾಂಸ ಪತ್ತೆಯಾದ ಕಟ್ಟಡ ಈ ಹಿಂದೆ ವಾಸದ ಮನೆಯಾಗಿದ್ದು, ಮಾಲೀಕರು ಬೆಂಗಳೂರಿನಲ್ಲಿ ನೆಲೆಸಿದ್ದಾರಂಬ ಮಾಹಿತಿ ಮೇರೆಗೆ ನಗರಸಭೆ ಸಿಬ್ಬಂದಿಗಳು 1 ಶೆಡ್ ಮತ್ತು ಎರಡು ಕಟ್ಟಡಗಳಿಗೆ ನೋಟಿಸ್ ಅಂಟಿಸಿ ಹಿಂದುರಿಗಿದರು.
ಕಸಾಯಿಖಾನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಕಟ್ಟಡ ನೆಲಸಮಗೊಳಿಸ ಲಾಗುವುದು ಎಂಬ ಎಚ್ಚರಿಕೆಯನ್ನು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಸಂತೆಮಾಕೇರ್ಟ್ ಬಡಾವಣೆಯಲ್ಲಿ ಅಕ್ರಮ ಕಸಾಯಿಖಾನೆ ಶೆಡ್ ತೆರವು ಗೊಳಿಸಲಾ ಗಿತ್ತು. ಇಂದು ದಾಳಿ ನಡೆಸಿ ಕಸಾಯಿಖಾನೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

‘ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ದೂರಿನನ್ವಯ ದಾಳಿ ನಡೆಸಲಾಗಿದೆ. 250 ಕೆ.ಜಿ. ಗೋಮಾಂಸ ಪoತ್ತೆಯಾಗಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ದ್ದಾರೆ. ಕಟ್ಟಡ ಅಕ್ರಮವೋ ಸಕ್ರಮವೋ ಎಂಬ ಮಾಹಿತಿ ಪಡೆದು ಮುಂದಿನ ಕ್ರಮವಹಿ ಸಲಾಗುವುದು. ಸದ್ಯ ಅಕ್ರಮ ಕಸಾಯಿಖಾನೆ ಸ್ಥಗಿತಕ್ಕೆ ನೋಟಿಸ್ ನೀಡಲಾಗಿದೆ. ಮತ್ತೆ ಕಸಾಯಿಕಾನೆ ನಡೆಸಿದಲ್ಲಿ ಕಟ್ಟಡಗಳನ್ನೇ ತೆರವುಗೊಳಿಸಲಾಗುವುದು.’

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!