May 17, 2024

MALNAD TV

HEART OF COFFEE CITY

ವಿದ್ಯಾರ್ಥಿಗಳು ಸಾಧನೆಯತ್ತಾ ಮುಖಮಾಡಬೇಕು: ನಿರ್ಮಲಾನಂದನಾಥ ಸ್ವಾಮೀಜಿ

1 min read

ಚಿಕ್ಕಮಗಳೂರು: ವಿದ್ಯಾರ್ಥಿಗಳು ಪುಸ್ತಕದ ಹೊರತಾಗಿ ಜೀವನ ಕಲಿಸುವ ಪಾಠವನ್ನು ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಜಗದ್ಗುರು ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶಾರದ ಪೂಜಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಸಿ ಆಶೀ ರ್ವಾಚನ ನೀಡಿದರು.ವಿದ್ಯಾಭ್ಯಾಸ ಮಳೆಗಾಲವಿದಂತೆ ಶಕ್ತಿ ಇರುವಾಗ ಸದುಪಯೋಗಪಡಿಸಿಕೊಂಡು ಮುಂದೇ ಬರಬೇಕು. ತಂದೆ ತಾಯಂದಿರ ಭವಿಷ್ಯದ ಭರವಸೆ ನೀವಾಗಬೇಕು. ಅವಕಾಶ ವಂಚಿತ ರಾಗದೇ ಸದುಪಯೋಗಪಡಿಸಿಕೊಂಡು ಸಮಚಿತ್ತದಿಂದ ಸಾಧನೆ ಮಾಡಬೇಕು ಎಂದು ತಿಳಿಸಿದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದಾಲಯ ಮಾಜಿ ನಿರ್ದೇಶಕ, ಲೇಖಕ, ಚಿಂತಕ ಡಾ| ಕೆ.ಪಿ.ಪುತ್ತುರಾಯ ಮಾತನಾಡಿ, ವಿದ್ಯಾರ್ಥಿಗಳೆಂದರೇ ಅವರವರ ಮನೆಯ ನಂದಾ ದೀಪಗಳು, ಹೆತ್ತವರ ಕನಸುಗಳು ಮತ್ತು ಈ ಸಂಸ್ಥೆಯ ಸೊಬಗು, ಸೌಂದರ್ಯ, ಸಮಾಜದ ಆಸ್ತಿ, ದೇಶದ ಭರವಸೆ ಮತ್ತು ಭವಿಷ್ಯ ಎಂದರು.
ವಿದ್ಯಾರ್ಥಿಗಳಿಗೆ ಜವಬ್ದಾರಿ ಇದೆ. ನಾಲ್ಕರಿಂದ ಆರು ವರ್ಷಗಳ ಅಭ್ಯಾಸ ತಪಸ್ಸು ಮತ್ತು ತ್ಯಾಗದಂತೆ ಅಳವಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆರೋಗ್ಯ, ಏಕಾಗ್ರತೆ, ತ್ಯಾಗ, ಕನಸು, ಕಾರ್ಯತಂತ್ರ, ತಾಳ್ಮೆ, ಆತ್ಮವಿಶ್ವಾಸ, ಭದ್ಧತೆ ವಿದಾರ್ಥಿಗಳಲ್ಲಿ ಇರಬೇಕು ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸಾಧನೆಮಾಡಿ ಸಮಾಜ ದಲ್ಲಿ ಹೆಸರುಗಳಿಸಬೇಕು. ನೀವು ಪಡೆಯುವ ಜ್ಞಾನಾರ್ಜನೆ ಯಾವಾಗಲೂ ಅಕ್ಷಯಪಾತ್ರೆ ಇದ್ದಂತೆ ಎಂದಿಗೂ ಖಾಲಿಯಾಗುವುದಿಲ್ಲಾ ಹಾಗಾಗಿ ಹೆಚ್ಚಿನ ಜ್ಞಾನ ಸಂಪಾದಿಸಿ ಅತ್ಯುತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಹೆಸರುಗಳಿಸಬೇಕೆಂದು ಕರೆ ನೀಡಿದರು.
ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತಾನಾಡಿ, ನಾವುಗಳು ಪಶುಪಕ್ಷಿ ಆಗುವ ಬದಲು ಮನುಷ್ಯರಾಗಿ ಹುಟ್ಟಿದ್ದು ನಮ್ಮ ಪುಣ್ಯ. ಮನುಷ್ಯ ಜನ್ಮ ಸಾರ್ಥಕ. ವಿದ್ಯಾರ್ಥಿಗಳು ತಂದೆ ತಾಯಿಯರ ಕನಸ್ಸು ನನಸು ಮಾಡಬೇಕು. ಉತ್ತಮ ಪ್ರಜೆಗಳಾಗಿ ಬದುಕಬೇಕೆಂದು ತಿಳಿಸಿ ದರು.

ಜಿ.ಪಂ. ಸಿಇಓ ಜಿ.ಪ್ರಭು ಮಾತನಾಡಿ, ಅಮೆರಿಕಾ ಜಗತ್ತಿಗೆ ಮಾದರಿ ರಾಷ್ಟçವಾಗಲು ಎರಡು ಮುಖ್ಯ ಕಾರಣದಿಂದ ಅಂದಋಏ ಇಲ್ಲಿರುವ ಆಧುನಿಕ ಸೇವಾ ಮನೋಭಾವ ಮತ್ತು ನೂತನ ತಂತ್ರಜ್ಞಾನದಲ್ಲಾಗುತ್ತಿರುವ ಆವಿಷ್ಕಾರಗಳ ಅಳವಡಿಕೆ. ಈ ಅಳವಡಿಕೆಯು ಶೇ. ೫೦ ರಿಂದ ೬೦ ಇದೆ. ನಮ್ಮ ದೇಶದ ಇಂದಿನ ಯುವಪೀಳಿಗೆ ಪ್ರಸ್ತುತ ವಿಶ್ವವನ್ನು ಆಳುವ ತಂತ್ರಜ್ಞಾನದ ಕಡೆ ವಾಲಬೇಕು. ವಿಧ್ಯೆ ಮತ್ತು ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ|ಸಿ.ಟಿ.ಜಯದೇವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ಶೃಂಗೇರಿ ಶಾಖೆಯ ಶ್ರೀ ಗುಣನಾಥ ಸ್ವಾಮೀಜಿ, ಎಐಟಿ ನಿರ್ದೇಶಕ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ|ಸಿ.ಕೆ.ಸುಬ್ಬರಾಯ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್ ಇದ್ದರು. ಪ್ರಾಧ್ಯಾಪಕಿ ಬಿ.ವಿ.ಅಂಜಲಿ ನಿರೂಪಿಸಿದರು. ಪ್ರಾಧ್ಯಾಪಕ ಡಾ|ಎನ್.ಡಿ.ದಿನೇಶ್ ವಂದಿಸಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!