April 28, 2024

MALNAD TV

HEART OF COFFEE CITY

ಒಂದು ಭಾಷೆ ನಾಶವಾದ್ರೆ, ಸಂಸ್ಕøತಿ ನಾಶವಾದಂತೆ_ವಿರೇಶ್ ಕೌಲಗಿ 

1 min read

 

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಶಾಲೆ ಉಳಿಸಿ ಕನ್ನಡ ಬೆಳೆಸಿ ಶೀರ್ಷಿಕೆ ಅಡಿಯಲ್ಲಿ ಕನ್ನಡದ ಅಭಿಮಾನ ದಿನ ಕಾರ್ಯಕ್ರಮ ನಡೆಸಲಾಯಿತು. 

ನಗರದ ಬಿಇಓ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಪ್ರಧಾನ ಕಾರ್ಯದರ್ಶಿ ವಿರೇಶ್ ಕೌಲಗಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಒಂದು ಭಾಷೆ ನಾಶವಾದ್ರೆ ಒಂದು ಸಂಸ್ಕøತಿ ನಾಶವಾದಂತೆ, ಈ ಹಿನ್ನೆಲೆಯಲ್ಲಿ ಮಾತೃ ಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡಿದರೆ ಅರ್ಥಪೂರ್ಣವಾದ ಕಲಿಕೆ ಉಂಟಾಗುತ್ತದೆ. ಭಾಷೆಯ ಬಗ್ಗೆ ಅಭಿಮಾನ ಇರಬೇಕು ದುರಭಿಮಾನ ಇರಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಿಸ್ಲೆಹಳ್ಳಿ ಸೋಮಶೇಖರ್ ಮಾತನಾಡಿ, ರಾಜ್ ಕುಮಾರ್ ಗೋಕಾಕ್ ಚಳುವಳಿಯ ನೃತೃತ್ವವಹಿಸಿಕೊಂಡು ಬೆಳಗಾವಿಯಿಂದ ಬೆಂಗಳೂರಿನ ವರೆಗೆ ಚಳುವಳಿ ಮಾಡಿ ಸರ್ಕಾರದ ಮೇಲೆ ಒತ್ತಡ ತಂದು ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಲು ಕಾರಣವಾಗಿದ್ದನ್ನು ನೆನಪಿಸಿದರು.

ಆಂಗ್ಲಭಾಷಾ ಮಾಧ್ಯಮದ ಶಾಲೆಗಳು ನಗರದಲ್ಲಿ ಹೆಚ್ಚಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳು ಮುಚ್ಚುವಂತಾಗಿರುವ ಈ ಸಂದರ್ಭದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡವನ್ನು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಜಿ. ಈಶ್ವರಪ್ಪ ಮಾತನಾಡಿ, ರಾಜ್ ಕುಮಾರ್ ಅವರು ಮೇರು ನಟನಾಗಿದ್ದು ಕನ್ನಡ ಚಲನಚಿತ್ರ ಬಿಟ್ಟು ಬೇರೆ ಯಾವುದೇ ಭಾಷೆಗಳಲ್ಲಿ ನಟಿಸದಿರುವುದು ವಿಶೇಷ ಎಂದು ತಿಳಿಸಿದರು.

ಶಿಕ್ಷಕ ಕಾಂತರಾಜ್ ಡಾ. ರಾಜ್ ಕುಮಾರ್ ಗೀತೆಗಳನ್ನು ಹಾಡಿದರು. ಈ ವೇಳೆ ಹಾಲಪ್ಪ, ಶ್ರೀಧರಾಚಾರ್, ಓಂಕಾರಪ್ಪ, ಕುಮಾರಪ್ಪ, ಮಂಜುನಾಥ್, ಸಚಿನ್ ಸೇರಿದಂತೆ ಹಲವರು ಇದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!