May 6, 2024

MALNAD TV

HEART OF COFFEE CITY

ಮೇಕೆ ಮರಿ ನುಂಗಿ ಗಡದ್ದಾಗಿ ಮಲಗಿದ್ದ ಹೆಬ್ಬಾವು ಸೆರೆ

1 min read

 

ಚಿಕ್ಕಮಗಳೂರು: ನಗರದ ಕಾಫಿ ಮಂಡಳಿ ಸಮೀಪದ ಮೇಕೆ ಶೆಡ್ ಗೆ ನುಗ್ಗಿ ಮೇಕೆ ಮರಿ ನುಂಗಿದ ಸುಮಾರು 12 ಅಡಿ ಉದ್ದದ್ದ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.

ಗುರುವಾರ ಬೆಳಿಗ್ಗೆ ನಗರದ ಕಾಫಿ ಮಂಡಳಿ ಸಮೀಪದ ವೆಂಕಟಪ್ಪ ಎಂಬುವರ ಶೆಡ್ ಗೆ ಕಳ್ಳನಂತೆ ನುಗ್ಗಿದ ಹೆಬ್ಬಾವು ಮಾಲೀಕನ ಎದುರೇ ಮೇಕೆ ಮರಿಯನ್ನು ನುಂಗಿತ್ತು. ಇದನ್ನು ಕಂಡು ಮಾಲೀಕ ಗಾಬರಿಗೊಂಡು ಕೂಗಾಡುತ್ತಲೇ ಹೆಬ್ಬಾವು ಅದೇ ಶೆಡ್ ಕೋಣೆಯೊಳಗೆ ನುಗ್ಗಿ ಕಡದ್ದಾಗಿ ನಿದ್ರೆಗೆ ಜಾರಿತ್ತು. ಗಾಬರಿಗೊಂಡ ಮಾಲೀಕ ಸ್ಥಳೀಯರ ಸಹಕಾರದಿಂದ ಸ್ಥಳೀಯ ಉರಗತಜ್ಞ ಸ್ನೇಕ್ ನರೇಶ್ ಗೆ ಕರೆ ಮಾಡಿ ವಿಷಯ ತಿಳಿಸಿದ್ರು, ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಜಾಕಚಕ್ಯತೆಯಿಂದ ಸಣ್ಣ ಕೊಣೆಯೊಳಗಿದ್ದ ಹೆಬ್ಬಾವನ್ನು ಹರಸಾಹಸ ಪಟ್ಟು ಹಿಡಿದರು. ಹೆಬ್ಬಾವನ್ನು ನೋಡಿ ಸ್ಥಳೀಯರು ಆಶ್ಚರ್ಯ ಚಕಿತರಾದ್ರು. ಬಳಿಕ ಹಾವನ್ನು ಸುರಕ್ಷಿತವಾಗಿ ಸ್ಥಳೀಯ ಚುರ್ಚೆ ಗುಡ್ಡ ಅರಣ್ಯಕ್ಕೆ ಬಿಡಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!