May 15, 2024

MALNAD TV

HEART OF COFFEE CITY

ಹೇಮಾವತಿ ನದಿಮೂಲ ದೇವಸ್ಥಾನದ ಅಭಿವೃದ್ದಿಗೆ 5 ಲಕ್ಷ ಅನುದಾನ

1 min read

ಕೊಟ್ಟಿಗೆಹಾರ:ಹೇಮಾವತಿ ನದಿಮೂಲ ದೇವಸ್ಥಾನದ ಅಭಿವೃದ್ದಿಗೆ 5 ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ ಹೇಳಿದರು.
ಜಾವಳಿಯ ಹೇಮಾವತಿ ನದಿಮೂಲದಲ್ಲಿ ಜೆಡಿಎಸ್ ವತಿಯಿಂದ ನಡೆದ ಜನತಾ ಜಲಧಾರೆ ಕಾರ್ಯಕ್ರ,ಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದಿನ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಕಾವೇರಿ ಉಗಮ ಸ್ಥಾನದಂತೆ ಹೇಮಾವತಿ ನದಿ ಉಗಮ ಸ್ಥಾನವನ್ನು ಅಭಿವೃದ್ದಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು. ನಾಡಿನಾದ್ಯಂತ ಇರುವ ಎಲ್ಲಾ ಜಲಧಾರೆಗಳನ್ನು ಒಗ್ಗೂಡಿಸಿ 94 ಸ್ಥಳಗಳಲ್ಲಿ ಏಕಕಾಲದಲ್ಲಿ ನದಿಗಳ ಪವಿತ್ರ ಜಲವನ್ನು ಸಂಗ್ರಹಿಸುವ ಜಲಧಾರೆ ಕಾರ್ಯಕ್ರಮ ಇದಾಗಿದೆ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಜನತಾ ಜಲಧಾರೆ ಯಾತ್ರೆಯೂ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ, ಬಣಕಲ್, ಫಲ್ಗುಣಿ, ಬೆಟ್ಟಗೆರೆ, ದಾರದಹಳ್ಳಿ ಬಿಳ್ಳೂರು ಮಾರ್ಗವಾಗಿ ಮೂಡಿಗೆರೆ ಪಟ್ಟಣ ತಲುಪಲಿದೆ. ಭಾನುವಾರ ಮಾಕೋನಹಳ್ಳಿ, ನಂದಿಪುರ, ಕನ್ನಾಪುರ, ಬಸ್ಕಲ್, ಒಳಗೆರೆಹಳ್ಳಿ, ಆಲ್ದೂರು , ಮಾಗುಂಡಿ ಮೂಲಕ ಸಾಗಿ ಕಳಸ ತಲುಪಲಿದೆ. ಏಪ್ರಿಲ್ 18 ರಂದು ಎಚ್.ಡಿ.ಕುಮಾರಸ್ವಾಮಿ ಅವರು ಕಳಸ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಾಳೂರು ಹೋಬಳಿಯಲ್ಲಿ ಅತಿ ಹೆಚ್ಚು ಸಾಲಮನ್ನಾವಾಗಿದೆ. ಕಳಸ ತಾಲ್ಲೂಕು ರಚನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರ ಅಪಾರವಾದದ್ದು ಎಂದರು.
ಹೇಮಾವತಿ ನದಿಮೂಲ ದೇವಸ್ಥಾನ ಸಮಿತಿ ಹೇಮಾವತಿ ನದಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾರ್ಯದರ್ಶಿ ಎಂ.ವಿ.ಜಗದೀಶ್ ಮಾತನಾಡಿದರು.
ಹೇಮಾವತಿ ನದಿಮೂಲ ದೇವಸ್ಥಾನ ಸಮಿತಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್‍ಗೌಡ, ಜೆಡಿಎಸ್ ಮುಖಂಡರಾದ ಲಕ್ಷ್ಮಣಗೌಡ, ಸತೀಶ್ ಮರ್ಕಲ್, ತಿಮ್ಮಶೆಟ್ಟಿ, ದೇವಿಪ್ರಸಾದ್, ಪ್ರೇಮ್‍ಕುಮಾರ್, ಸುಬ್ರಮಣ್ಯ, ಪ್ರವೀಣ್, ಸುಧಾಮಂಜುನಾಥ್, ಆದರ್ಶ್ ಬಾಳೂರು, ಮಂಜಪ್ಪ, ಸೋಮೇಶ್ ಮರ್ಕಲ್, ಜ್ಯೋತಿವಿಠಲ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಬಿ.ಎಂ,ಸುರೇಶ್, ಶಶಿಧರ್, ಕೇಶವೆಗೌಡ, ಚನ್ನಕೇಶವಗೌಡ, ಉಮೇಶ್‍ಗೌಡ ಮುಂತಾದವರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!