May 9, 2024

MALNAD TV

HEART OF COFFEE CITY

ಪಿಪಿಇ ಕಿಟ್ ಧರಿಸಿಕೊಂಡು ಕೊರೋನಾ ವಾರಿಯರ್ಸ್ ಪ್ರತಿಭಟನೆ

1 min read

 

ಚಿಕ್ಕಮಗಳೂರು..:ನಮ್ಮ ಸೇವೆಯನ್ನ ಮುಂದುವರೆಸಿ ಎಂದು ಆಗ್ರಹಿಸಿ ಆರೋಗ್ಯ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಗರದ ಆಜಾದ್ ಪಾರ್ಕ್ ವೃತ್ತದ ಬಳಿ 50ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಸರ್ಕಾರ ನಮ್ಮ ಸೇವೆಯನ್ನ ಮುಂದುವರಿಸಬೇಕೆಂದು ಮನವಿ ಮಾಡಿದ್ದಾರೆ. ಸರ್ಕಾರ ನಮ್ಮನ್ನ ಆರು ತಿಂಗಳಿಗೆ ಎಂದೇ ನೇಮಕ ಮಾಡಿಕೊಂಡಿತ್ತು. ಆದರೆ, ಈಗ ನಮಗೆ ಬೇರೆ ಯಾವುದೇ ಕೆಲಸವಿಲ್ಲ. ನಮ್ಮನ್ನ ಖಾಯಂ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ. ಆದರೆ, ನಮ್ಮ ಸೇವೆಯನ್ನ ಮುಂದುವರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ, ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಮ್ಮನ್ನ ಬಳಸಿಕೊಳ್ಳಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಜೀವದ ಭಯ ಬಿಟ್ಟು ಕೆಲಸ ಮಾಡಿದ್ದೇವೆ. ಹಲವರಿಗೆ ಪಾಸಿಟಿವ್ ಕೂಡ ಬಂದಿತ್ತು. ಆದರೂ ಸೇವೆ ಸಲ್ಲಿಸಿದ್ದೇವೆ. ಹಾಗಾಗಿ, ಸರ್ಕಾರ ನಮಗೆ ಖಾಯಂ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ. ನಮ್ಮ ಸೇವೆಯನ್ನ ಮುಂದುವರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಮೆಡಿಕಲ್ ವಲಯದಲ್ಲಿ ಮುವತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯಾದ್ಯಂತ ಕೊರೋನಾ ವಾರಿಯರ್ಸ್‍ಗಳು ಇರೋದು ಕೇವಲ ಆರೂವರೆ ಸಾವಿರ ಸಿಬ್ಬಂದಿಗಳು. ಹಾಗಾಗಿ, ಸರ್ಕಾರ ನಮ್ಮಗಳ ಸೇವೆಯನ್ನ ಉಳಿಸಿಕೊಂಡು, ಬಳಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲಾಸ್ಪತ್ರೆ ಬಳಿಯಿಂದ ಪಿಪಿಇ ಕಿಟ್ ಧರಿಸಿಕೊಂಡೆ ಮೆರವಣಿಗೆ ಮೂಲಕ ಬರುವ ಸಿಬ್ಬಂದಿಗಳು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ಕೂತು ಸರ್ಕಾರದ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ. ನಗರದ ಸುಡುಬಿಸಿಲನ್ನೂ ಲೆಕ್ಕಿಸದೆ ಪಿಪಿಇ ಕಿಟ್ ಧರಿಸಿಕೊಂಡೇ ಧರಣಿ ಕೂತು ಸರ್ಕಾರ ನಮ್ಮನ್ನ ಇಲಾಖೆಯಲ್ಲೇ ಉಳಿಸಿಕೊಂಡು ನಮ್ಮಗಳ ಸೇವೆಯನ್ನ ಬಳಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!