May 3, 2024

MALNAD TV

HEART OF COFFEE CITY

ಸಾರ್ವಜನಿಕ ಕೆಲಸ ವಿಳಂಭವಾದ್ರೆ ಕಾನೂನು ಕ್ರಮ_ ವರಸಿದ್ಧಿ ವೇಣುಗೋಪಾಲ್

1 min read

 

ಚಿಕ್ಕಮಗಳೂರು: ಸಾರ್ವಜನಿಕ ಕೆಲಸ-ಕಾರ್ಯಗಳನ್ನು ಮಾಡಿಕೊಡಲು ಅನಗತ್ಯ ವಿಳಂಭ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎಚ್ಚರಿಸಿದರು. ನಗರಸಭೆ ಸಭಾಂಗಣದಲ್ಲಿ ಸಿಬ್ಬಂದಿಗಳ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ನಗರವನ್ನು ಸುಂದರ, ಸ್ವಚ್ಛ, ಪ್ಲಾಸ್ಟಿಕ್ ಮುಕ್ತ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಕಂದಾಯ ವಿಭಾಗದಲ್ಲಿ ಇ-ಖಾತೆ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕೆಲವು ದೂರುಗಳಿವೆ. ಈ ಕುರಿತು ಇಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದ್ದು, ಯಾವುದೇ ಕಾರಣಕ್ಕೆ ಅನಗತ್ಯವಾಗಿ ವಿಳಂಭ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇವೆ ಎಂದರು.
ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಈವರೆಗೆ ನಗರಸಭೆಯನ್ನ ನರಕಸಭೆ ಎಂದು ಕರೆಯುತ್ತಿದ್ದರು. ಅದನ್ನು ಸಂಪೂರ್ಣ ಬದಲಿಸಿ ಜನಸ್ನೇಹಿಯಾಗಿಸಬೇಕು ಎಂದು ತಿಳಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಸೂಚನೆಗಳಿಗೆ ಸ್ಪಂದಿಸದೆ ಇದ್ದಲ್ಲಿ ಅಧಿಕಾರಿಗಳನ್ನು ಅಮಾನತುಪಡಿಸಲು ಸಹ ಪೌರಾಯುಕ್ತರಿಗೆ ಹೇಳಲಾಗಿದೆ. ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದೇವೆ ಎಂದರು.
ನಾಗರೀಕರು ಸಹ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ ಎನ್ನುವ ದೂರುಗಳಿವೆ ಈ ಬಗ್ಗೆ ನಗರಸಭೆ ಮತ್ತು ನಿರ್ಮಲ ಭಾರತಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಹಯೋದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ. ನಾಗರೀಕರೂ ಸಹ ನಗರಸಭೆಯೊಂದಿಗೆ ಸಹಕರಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಬಿಡಬೇಕು. ಇದು ಮುಂದುವರಿದಲ್ಲಿ ಅಂತಹ ಮನೆಗಳಿಗೆ ನಲ್ಲಿ ನೀರು, ಯುಜಿಡಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.

ಪೌರ ಕಾರ್ಮಿಕರ ಸಭೆಯನ್ನು ಸಧ್ಯದಲ್ಲೇ ಪ್ರತ್ಯೇಕ ಸಭೆ ಕರೆಯಲಾಗುವುದು ಅರ ಸಮಸ್ಯೆಗಳನ್ನು ಆಲಿಸಿ ಅಗತ್ಯವಿರುವ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡುವವರು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಅವರದ್ದೇ ಒಂದು ಸಂಘವೂ ಇದೆ ಅವರನ್ನೂ ಕರೆದು ಮಾತನಾಡುತ್ತೇವೆ ಎಂದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ನಗರದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು, ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವ ಕುರಿತು ನೂತನ ಅಧ್ಯಕ್ಷ-ಉಪಾಧ್ಯಕ್ಷರಿಬ್ಬರೂ ಅಧಿಕಾರಿ, ಸಿಬ್ಬಂದಿಗಳಿಗೆ ಮನಮುಟ್ಟುವಂತೆ ಹೇಳಿದ್ದಾರೆ ಎಂದರು.
ಸಾರ್ವಜನಿಕರನ್ನು ಅನಗತ್ಯ ಅಲೆಸುವುದರಿಂದ ಅವರು ಅನುಭವಿಸುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ನಾಳೆಯಿಂದ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಅವರಿಗೆ ವಹಿಸಿರುವ ಜವಾಬ್ದಾರಿಗಳನ್ನು ನಿಗಧಿತ ಅವಧಿಯಲ್ಲು ಪೂರ್ಣಗೊಳಿಸಬೇಕು ಎಂದು ಸೂಚಿಲಾಗಿದೆ ಎಂದು ತಿಳಿಸಿದರು.

ಇದುವರೆಗೆ ನೀಡುತ್ತಿದ್ದ ಸೇವೆಗಿಂತಲೂ ವೇಗವಾಗಿ ಕೆಲಸ ಕಾರ್ಯಕಗಳನ್ನು ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ. 7 ದಿನಗಳ ಒಳಗಾಗಿ ಇ ಸ್ವತ್ತು ದಾಖಲೆ ನೀಡಬೇಕಿದೆ. ಈ ವರೆಗೆ ನೀಡಲಾಗುತ್ತಿತ್ತು. ಮಧ್ಯೆ ಕೆಲವು ದಿನ ಚುನಾವಣೆ ಇನ್ನಿತೆರೆ ಕಾರಣಗಳಿಗೆ ವಿಳಂಭವಾಗುತ್ತಿತ್ತು. ನಾಳೆಯಿಂದ ಅರ್ಜಿ ನೀಡಿದ 7 ದಿನಗಳಲ್ಲಿ ಇಸ್ವತ್ತು ನೀಡುವುದು, 40 ದಿನಗಳ ಒಳಗಾಗಿ ಖಾತೆ, ಕಟ್ಟಡ ನಿರ್ಮಾಣ ಪರವಾನಗಿ ನೀಡುವುದು ಹೀಗೆ ಸರ್ಕಾರ ನಿಗಧಿ ಮಾಡಿದ ದಿನಕ್ಕಿಂತ ಐದು ದಿನಗಳ ಮೊದಲೇ ಸಾರ್ವಜನಿಕರ ಕೆಲಸ ಮಾಡಿಕೊಡಬೇಕೆಂದು ತಿಳಿಸಿಸಲಾಗಿದೆ ಎಮದು ತಿಳಿಸಿದರು.

ನಾಳೆಯಿಂದಲೇ ಸ್ವಚ್ಛತೆ ಪೂರ್ಣ ಆಧ್ಯತೆ ನೀಡಲಾಗುವುದು. ಬೆಳಗಿನ 5.30 ರಿಂದಲೇ ವಾರ್ಡ್‍ವಾರು ಭೇಟಿ ನೀಡಿ ಶ್ರಮಪಟ್ಟು ಕೆಲಸ ಮಾಡುತ್ತೇವೆ. ಹೊಸ ಸದಸ್ಯರುಗಳನ್ನು ಜೊತೆಯಲ್ಲಿಟ್ಟುಕೊಂಡು ಜನತೆಯ ಆಶೋತ್ತರಗಳನ್ನು ಪೂರೈಸುತ್ತೇವೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷೆ ಉಮಾವತಿ ಕೃಷ್ಣಪ್ಪ,sಸದಸ್ಯ ರಾಜು ಇಂಜಿನೀಯರುಗಳಾದ ಚಂದನ್, ರಶ್ಮಿ, ಸೇರಿದಂತೆ ಇತರರು ಉಪಸ್ಥಿತಿತರಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!