April 29, 2024

MALNAD TV

HEART OF COFFEE CITY

ನಗರಸಭೆ ಸದಸ್ಯ ಲಕ್ಷ್ಮಣ್ ಮೇಲಿನ ಹಲ್ಲೆ ಖಂಡನೀಯ_ಡಾ.ಅಂಶುಮಂತ್

1 min read

 

ಚಿಕ್ಕಮಗಳೂರು: ನಗರಸಭೆ ಸದಸ್ಯ ಲಕ್ಷ್ಮಣ್ ಅವರ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಬೇಕು, ಇಂತಹ ಘಟನೆಗಳು ಮತ್ತೆ ಮರುಕಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಅಂಶುಮಂತ್ ಹೇಳಿದರು

ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಗರದ 25ನೇ ವಾರ್ಡಿನ ಸದಸ್ಯ ಸಿ.ಪಿ.ಲಕ್ಷ್ಮಣ್ ಸೋಮವಾರ ವಾರ್ಡಿನ ವಿಜಯಪುರ ಮುಖ್ಯರಸ್ತೆಯ ಗೃಹ ನಿರ್ಮಾಣ ಸಹಕಾರ ಸಂಘದ ಎದುರಿನಲ್ಲಿ ಹಾನಿಗೊಂಡ ಕುಡಿಯುವ ನೀರಿನ ಪೈಪ್ ತುರ್ತು ದುರಸ್ತಿಗೊಳಿಸುತ್ತಿದ್ದ ಸಂದರ್ಭದಲ್ಲಿ ಅದೇ ವಾರ್ಡಿನ ಧನಂಜಯಗೌಡ ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸಿದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ದುರಸ್ತಿ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಧನಂಜಯಗೌಡ ಮತ್ತು ಅವರ ಬೆಂಬಲಿ ಗರಾದ ಶ್ಯಾಮ್, ಜೀವನ್ ಅವಾಚ್ಯ ಶಬ್ಧಗಳಿಂದ ನಿಧಿಸಿದ್ದಾರೆ. ಈ ಸಂದರ್ಭದಲ್ಲಿ ಸಿ.ಪಿ. ಲಕ್ಷ್ಮಣ್ ಅವರ ಮಗ ಆರ್.ಎಲ್.ನಟರಾಜ್ ಸ್ಥಳಕ್ಕೆ ಬಂದಿದ್ದು, ಆಗ ಸಿ.ಪಿ.ಲಕ್ಷ್ಮಣ್ ಮತ್ತು ಆರ್.ಎಲ್.ನಟರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯನ ಮೇಲೆ ಹಲ್ಲೆ ನಡೆಸಿರುವುದನ್ನು ಪಕ್ಷ ಖಂಡಿಸುತ್ತದೆ. ಇದರ ಹಿಂದೆ ಶಾಸಕ ಸಿ.ಟಿ.ರವಿಯವರ ಪರೋಕ್ಷ ಬೆಂಬಲವಿರುವ ಬಗ್ಗೆ ಅನುಮಾನವಿದೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಸಕ ಸಿ.ಟಿ.ರವಿ ಎಚ್ಚರ ವಹಿಸಬೇಕು. ಮತ್ತೇ ಇಂತಹ ಘಟನೆಗಳು ಮರುಕಳಿಸಿದರೇ, ಶಾಸಕ ಮನೆ ಮುಂದೇ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಮ್ಮ ವಾರ್ಡಿನ ಜನರ ಪರವಾಗಿ ಕೆಲಸ ಮಾಡಲು ಮುಂದಾದ ಸದಸ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ನಾಗರಿಕರು ತಲೆ ತಗ್ಗಿಸುವ ವಿಚಾರ. ಚುನಾಯಿತ ಪ್ರತಿನಿಧಿ ಜನಪರ ಕೆಲಸ ಮಾಡುವುದು ಸಂವಿಧಾನ ನೀಡಿರುವ ಹಕ್ಕು. ಆ ಹಕ್ಕಿಗೆ ಚ್ಯುತಿಯಾಗಿದೆ. ಈ ಘಟನೆಯನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!