May 3, 2024

MALNAD TV

HEART OF COFFEE CITY

ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್

1 min read

 

ಚಿಕ್ಕಮಗಳೂರು. ಒಂದು ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗ ಸರ್ಪಗಳು ನಡೆಸುವ ಕೋಂಬ್ಯಾಕ್ ನೃತ್ಯದ ಅಪರೂಪದ ವಿಡಿಯೋ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಮಾರ್ಗದ ಭಗವತಿ ದೇವಸ್ಥಾನದ ಬಳಿ ಸೆರೆಯಾಗಿದೆ. ಈ ವಿಡಿಯೋ ಪ್ರಾಣಿ ಪ್ರಪಂಚದಲ್ಲಿ ತುಂಬಾ ಅಪರೂಪದ ವಿಡಿಯೋವಾಗಿದ್ದು, ಸೆರೆ ಸಿಗುವುದು ತೀರಾ ವಿರಳ. ಎರಡು ಕಾಳಿಂಗ ಸರ್ಪಗಳು ರಸ್ತೆ ಮಧ್ಯೆಯೇ ಸುಮಾರು ಅರ್ಧಗಂಟೆಗಳ ಕೋಂಬ್ಯಾಕ್ ಡ್ಯಾನ್ಸ್ ನಡೆಸಿದ್ದು ಪ್ರಯಾಣಿಕರು ಸುಮಾರು ಅರ್ಧಗಂಟೆಗಳ ಕಾಲ ನಿಂತಲ್ಲೇ ನಿಂತು ಪರದಾಡಿದ್ದಾರೆ. ಕಾಳಿಂಗ ಸರ್ಪಗಳು ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ಕೋಂಬ್ಯಾಕ್ ಡ್ಯಾನ್ಸ್ ನಡೆಸುತ್ತವೆ. ಅವು ಜನರ ಕಣ್ಣೆದುರು ಈ ರೀತಿ ನೃತ್ಯ ಮಾಡುವುದು ಅಪರೂಪದಲ್ಲಿ ಅಪರೂಪ. ಹಾಗಾಗಿ, ಈ ವಿಡಿಯೋವನ್ನ ಅಪರೂಪದ ವಿಡಿಯೋ ಎಂದೇ ಹೇಳಲಾಗಿದೆ.

ರಸ್ತೆ ಮಧ್ಯೆ ಎರಡು ಬೃಹತ್ ಸರ್ಪಗಳನ್ನ ಕಂಡು ಗಾಬರಿಯಾದ ಪ್ರಯಾಣಿಕರು ಕೂಡ ಹಾವುಗಳು ಹೋಗುವವರೆಗೂ ನಿಂತಲ್ಲೇ ನಿಂತಿದ್ದರು. ಒಂದು ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗ ಸರ್ಪಗಳು ನಡೆಸುವ ಕ್ರಿಯೆಯನ್ನ ಕೋಂಬ್ಯಾಕ್ ಡ್ಯಾನ್ಸ್ ಎಂದು ಪ್ರಾಣಿ ಪ್ರಪಂಚದಲ್ಲಿ ಕರೆಯುತ್ತಾರೆ. ಕೆಲವೊಮ್ಮೆ ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳು ಹೊಡೆದಾಡುತ್ತವೆ ಅಥವ ಕೋಂಬ್ಯಾಕ್ ಡ್ಯಾನ್ಸ್ ಮಾಡುತ್ತವೆ. ಈ ವಿಡಿಯೋವನ್ನೂ ಕೂಡ ಪರಿಸರವಾದಿಗಳು ಕೋಂಬ್ಯಾಕ್ ಡ್ಯಾನ್ಸ್ ಎಂದೇ ಬಣ್ಣಿಸಿದ್ದಾರೆ. ಈ ರೀತಿ ಎರಡು ಕಾಳಿಂಗಗಳ ನಡುವಿನ ಫೈಟಿಂಗ್ ಅಥವ ಕೋಂಬ್ಯಾಕ್ ನೃತ್ಯದಲ್ಲಿ ಗೆದ್ದ ಗಂಡು ಕಾಳಿಂಗ ಸರ್ಪ ಹೆಣ್ಣು ಕಾಳಿಂಗ ಸರ್ಪದ ಜೊತೆ ಮಿಲನ ಮಹೋತ್ಸವ ಕ್ರಿಯೆಯಲ್ಲಿ ತೊಡಗಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳಲಿವೆ. ಕಾಳಿಂಗ ಸರ್ಪಗಳು ಹುತ್ತದೊಳಗೂ ಫೈಟ್ ಮಾಡುತ್ತವೆ ಅಥವ ಕೋಂಬ್ಯಾಕ್ ನೃತ್ಯ ನಡೆಸುತ್ತವೆ. ಆದರೆ, ಕಳಸ ಭಾಗದಲ್ಲಿ ಸಂಜೆ ವೇಳೆ ಮಳೆ ಹಾಗೂ ಹಗಲಲ್ಲಿ ಭಾರೀ ಬಿಸಿಲಿರುವ ಕಾರಣ ಭೂಮಿಯೊಳಗೆ ಉಷ್ಟಾಂಶ ಹೆಚ್ಚಿರುವ ಘಟನೆ ಈ ರೀತಿ ಭೂಮಿಯ ಮೇಲ್ಭಾಗಕ್ಕೆ ಬಂದು ಹೊಡೆದಾಡುತ್ತವೆ ಅಥವ ಕೋಂಬ್ಯಾಕ್ ಡ್ಯಾನ್ಸ್ ಮಾಡುತ್ತವೆ ಎಂದು ಪ್ರಾಣಿ ಪ್ರಪಂಚದ ಬಗ್ಗೆ ಅರಿವಿರುವವರು ಹೇಳುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!