May 14, 2024

MALNAD TV

HEART OF COFFEE CITY

ಮಾ.28,29 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

1 min read

ಅಜ್ಜಂಪುರ: ಬೀರೂರು ರಸ್ತೆಯಲ್ಲಿರುವ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.28, 29ರಂದು ನಡೆಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಕೈಲಾಸಂ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಬಾಳೆಹೊನ್ನೂರಿನಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರಮಿಸಿದ ಕನ್ನಡದ ಕಟ್ಟಾಳುಗಳಿಗೆ ಅಭಿನಂದನೆ ಮತ್ತು ಅಜ್ಜಂಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾರ್ಯಕಾರಿ ಮಂಡಳಿಯಲ್ಲಿ ತೀರ್ಮಾನಿಸಲಾಗುವುದು. ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಮತಯಾಚನೆ ಸಂದರ್ಭ ನಾನು ಗೆದ್ದರೆ, ಅಜ್ಜಂಪುರದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಭವನ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ ನಾನು ನಡೆದುಕೊಂಡಿದ್ದೇನೆ. ನನ್ನ ಹುಟ್ಟೂರಾದ ಅಜ್ಜಂಪುರದಲ್ಲಿ ಸಮ್ಮೇಳನ ಮಾಡುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಮತ್ತು ಹುಟ್ಟೂರಿನ ಋಣ ತೀರಿಸಲು ಅಜ್ಜಂಪುರದಲ್ಲಿ ಹಮ್ಮಿಕೊಂಡಿದ್ದೇನೆ ಎಂದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಕೇವಲ ಒಂದೇ ವಾರದಲ್ಲಿ ಇನ್ನೊಂದು ಬೃಹತ್ ಸಾಹಿತ್ಯ ಸಮ್ಮೇಳನ ಮಾಡುವ ಸಾಹಸಕ್ಕೆ ಕೈ ಹಾಕಿದ್ದೇವೆ. ಇದಕ್ಕೆ ಸ್ಥಳೀಯರ ಸಹಕಾರ ಮುಖ್ಯ ಎಂದರು.ಇದೇ ಸಂದರ್ಭ ಸಮ್ಮೇಳನಕ್ಕೆ ವಿವಿಧ ಸ್ವಾಗತ ಸಮಿತಿ ರಚನೆ ಮಾಡಲಾಯಿತು.
ಸಾಹಿತ್ಯ ಸಮ್ಮೇಳನ ಸಂದರ್ಭ ಶಿವಕಲಾಮೃತ ಸ್ಮರಣ ಸಂಚಿಕೆ ಹೊರತರಲಾಗುವುದು. ಜಿಲ್ಲೆಯ ಲೇಖಕರು ತಕ್ಷಣ ಲೇಖನ ಕಳಿಸಬೇಕೆಂದು ವಿನಂತಿಸಲಾಯಿತು.
ಸ್ಮರಣ ಸಂಚಿಕೆಗೆ ಯೋಗ್ಯ ಹೆಸರನ್ನು ಸೂಚಿಸಿದ ಚಿಂತಕ ಇಮ್ರಾನ್ ಬೇಗ್ ಮತ್ತು ಕಲಾವಿದ ಮೋಹನ್ ಅವರಿಗೆ ಅಭಿನಂದಿಸಲಾಯಿತು.

ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಿ.ಶಿವಮೂರ್ತಿ, ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ, ಅಜ್ಜಂಪುರ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಹೆಚ್.ರಾಜಣ್ಣ, ಮುಖಂಡ ಎ.ಸಿ.ಚಂದ್ರ್ರಪ್ಪ, ಅಕಾಡೆಮಿ ಸದಸ್ಯೆ ಮುಗಳಿ ಲಕ್ಷ್ಮೀ ದೇವಮ್ಮ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್, ಎಸ್. ಪರಮೇಶ್, ರವಿ ದಳವಾಯಿ ಇದ್ದರು. ಕನ್ನಡಶ್ರೀ ಭಗವಾನ್ ಪ್ರಾರ್ಥಿಸಿ, ಇಮ್ರಾನ್ ನಿರೂಪಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!