May 4, 2024

MALNAD TV

HEART OF COFFEE CITY

ಕಾಫಿನಾಡಿನಲ್ಲಿ ಸಂಭ್ರಮದ ಮಹಾಶಿವರಾತ್ರಿ ಆಚರಣೆ

1 min read

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಹಾಶಿವರಾತ್ರಿಯನ್ನ ಭಕ್ತಿ,ಭಾವ ಸಡಗರದಿಂದ ಆಚರಣೆ ಮಾಡಲಾಯಿತು. ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕಗಳು ನಡೆದವು. ಮಂಗಳವಾರ ಬೆಳಿಗ್ಗೆಯಿಂದ ಭಕ್ತರು ನಿರಂತರವಾಗಿ ದೇವರ ದರ್ಶನ ಪಡೆದರು.

ಜಿಲ್ಲೆಯ ಬಹುತೇಕ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯನ್ನು ಸಡಗರದಿಂದ ಆಚರಣೆ ಮಾಡಲಾಯಿತು. ನಗರದ ಭೋಳರಾಮೇಶ್ವರ ದೇವಸ್ಥಾನ, ಹಳ್ಳರ ರಾಮೇಶ್ವರ, ಒಂಕಾರೇಶ್ವರ ದೇವಸ್ಥಾನಗಳು ಸೇರಿದಂತೆ ಖಾಂಡ್ಯದ ಮಾರ್ಕಂಡೆಶ್ವರ, ಅಮೃತಾಪುರದ ಅಮೃತೇಶ್ವರ, ಸೋಮನಾಥಪುರದ ಸೋಮನಾಥೇಶ್ವರ, ಕಳಸದ ಕಳಸೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಹಲವು ಶಿವನ ದೇವಸ್ಥಾನಗಳಲ್ಲಿ ಶಿವರಾತ್ರಿ ಸಂಭ್ರಮ ಮೇಲೈಸಿತ್ತು. ಆಡಳಿತ ಮಂಡಳಿ ಹಾಗೂ ಭಕ್ತರು ಸೋಮವಾರ ಸಂಜೆಯಿಂದಲೇ ದೇವಸ್ಥಾನಗಳನ್ನು ಸ್ವಚ್ಛತೆಗೊಳಿಸಿ ಅಲಂಕಾರ ಮಾಡಲಾಗಿತ್ತು. ಮಂಗವಾರ ಬೆಳಿಗ್ಗೆಯಿಂದಲೇ ಚಿಕ್ಕಮಗಳೂರು ನಗರ ಸೇರಿದಂತೆ ಜಿಲೆಯ ಬಹುತೇಕ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆದವು. ಶಿವರಾತ್ರಿ ಹಿನ್ನೆಲೆ ಮಾಮೂಲಿಗಿಂತ ಹೆಚ್ಚು ಭಕ್ತರು ದೇವಸ್ಥಾನಗಳಲ್ಲಿ ಕಂಡು ಬಂದರು.

* ಕೇದಾರನಾಥ ಹಿಮಲಿಂಗ ದರ್ಶನ

ನಗರದ ಒಂಕಾರೇಶ್ವರ ದೇವಸ್ಥಾನಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಾಗೂ ದೇವಸ್ಥಾನ ಆಡಳಿತ ಮಂಡಳಿ ನೇತೃತ್ವದಲ್ಲಿ ಕೇದಾರನಾಥ ಹಿಮಲಿಂಗ ದರ್ಶನವನ್ನು ಏರ್ಪಡಿಸಲಾಗಿದ್ದು ಭಕ್ತರು ದರ್ಶನ ಪಡೆದು ಪುನೀತರಾದ್ರು. ಒಂಕಾರೇಶ್ವರನಿಗೆ ನಿರಂತರವಾಗಿ ಬೆಳಿಗ್ಗೆಯಿಂದಲೂ ಸಹ ವಿಶೇಷ ಪೂಜೆ, ಅಭಿಷೇಕಗಳನು ನಡೆದವು. ಹಿಮಲಿಂಗ ದರ್ಶನಕ್ಕೆ ಭಕ್ತರ ದಂಡು ಹರಿದುಬಂದಿತ್ತು.

 

 

 

* ಭೋಳರಾಮೇಶ್ವರಿನಿಗೆ ವಿಶೇಷ ಅಭಿಷೇಕ

ನಗರದ ಐತಿಹಾಸಿಕ ದೇವಾಲಯವಾದ ಭೋಳರಾಮೇಶ್ವರ ದೇವಸ್ಥಾನದಲ್ಲಿ ನಿರಂತರ ಮಂಗಳವಾರ ಸಂಜೆಯಿಂದ ನಿರಂತರವಾಗಿ ಸೂರ್ಯೋದಯದ ವರೆಗೆ ಅಭಿಷೇಕ ವಿಶೇಷ ಪೂಜೆ. ದೇವರಿಗೆ ಅಲಂಕಾರ ಇನ್ನೀತರ ಪೂಜಾ ಕೈಂಕರ್ಯಗಳನ್ನು ನೇರವೇರಿಸಲಾಯಿತು. ಸಂಜೆ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದ ವತಿಯಿಂದ 86ನೇ ಶಿವಜಯಂತಿ ಕಾರ್ಯಕ್ರಮ ನಡೆಸಲಾಯಿತು.

* ಮಾರ್ಕಂಡೇಶ್ವರನ ದರ್ಶನ ಪಡೆದ ಭಕ್ತರು

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಖಾಂಡ್ಯದ ಮಾರ್ಕಂಡೆಶ್ವರ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಇನ್ನೀತರ ಸೇವೆಗಳನ್ನು ಮಂಗಳವಾರ ನೇರವೇರಿಸಲಾಯಿತು. ಬೆಳಿಗ್ಗೆಯೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕವನ್ನು ನೇರವೇರಿಸಲಾಯಿತು. ಬಳಿಕ ಸುತ್ತಮುತ್ತಲಿನ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಇನ್ನು ಮಂಗಳವಾರ ಸಂಜೆ ದೇವಾಲಯದಲ್ಲಿ ಜಾಗರಣೆಯ ಹಿನ್ನೆಲೆ ನಿರಂತರ ಅಭಿಷೇಕ ಹಾಗೂ ಪೂಜೆಯನ್ನು ನೇರವೇರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥರು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!