April 29, 2024

MALNAD TV

HEART OF COFFEE CITY

ಹರ್ಷನ ಅಸ್ಥಿ ಶ್ರೀರಂಗಪಟ್ಟಣದಲ್ಲಿ ವಿಸರ್ಜನೆ * ಕಾಳಿಮಠದ ಋಷಿಕುಮಾರಸ್ವಾಮೀಜಿ

1 min read

 

ಚಿಕ್ಕಮಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷಹತ್ಯೆಯಾಗಿದ್ದು, ಆತನ ಅಸ್ಥಿಯನ್ನು ಧರ್ಮರಥದಲ್ಲಿ ಶ್ರೀರಂಗಪಟ್ಟಣಕ್ಕೆ ಕೊಂಡೊಯ್ದು ವಿಸರ್ಜಿಸಲಾಗುವುದು ಎಂದು ಕಾಳಿಮಠದ ಋಷಿಕುಮಾರಸ್ವಾಮೀಜಿ ತಿಳಿಸಿದರು.

ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಅವರು ಈ ಘಟನೆಯಿಂದ ಕುಟುಂಬ ಚೇತರಿಸಿಕೊಳ್ಳುವುದೇ ಕಷ್ಟವಾಗಿದೆ. ಶ್ರೀರಂಗಪಟ್ಟಣದಲ್ಲಿ ಅಸ್ಥಿವಿಸರ್ಜನೆ ಕುರಿತು ಕುಟುಂಬದೊಂದಿಗೆ ಮಾತುಕತೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಿಂದ ಫೆ.24 ರಂದು ಬೆಳಿಗ್ಗೆ 6 ಗಂಟೆಗೆ ಹೊರಡುವ ಧರ್ಮರಥ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಬಾಣಾವರ, ಅರಸೀಕೆರೆ, ಚನ್ನರಾಯಪಟ್ಟಣ, ಕೆ.ಆರ್.ಪೇಟೆ ಮೂಲಕ ಸಂಜೆ 4ಗಂಟೆಗೆ ಶ್ರೀರಂಗಪಟ್ಟಣ ತಲುಪುತ್ತಿದ್ದು, ಅಪಮೃತ್ಯು ಆಗಿರುವುದರಿಂದ ಭಾನುಪ್ರಕಾಶಶರ್ಮ ಅವರ ನೇತೃತ್ವದಲ್ಲಿ ನಾರಾಯಣ ಬಲಿ ಮೂಲಕ ಅಸ್ಥಿ ವಿಸರ್ಜಿಸಲಾಗುವುದು ಎಂದರು.

ಶಿವಮೊಗ್ಗದಲ್ಲಿ ವಾತಾವರಣ ಸರಿಯಾಗಿಲ್ಲದ್ದರಿಂದ ಅನೇಕ ಹಿಂದುಪರ ಕಾರ್ಯಕರ್ತರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ, ಧರ್ಮರಥದಲ್ಲಿ ಅಸ್ಥಿಯನ್ನು ಕೊಂಡೊಯ್ಯುವಾಗ ಅದಕ್ಕೆ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ನುಡಿದರು.

ಹರ್ಷನನ್ನು ಕೊಲೆ ಮಾಡಿರುವ ಆರೋಪಿಗಳನ್ನು ಆದಷ್ಟುಬೇಗ ಬಂಧಿಸಿ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕೆಂದು ಮನವಿ ಮಾಡಿದರು. ಧರ್ಮರಥ ಸಾಗುವ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಅಸ್ಥಿಯ ದರ್ಶನಕ್ಕೆ ಅವಕಾಶಮಾಡಿಕೊಡುವುದರೊಂದಿಗೆ ಕಾನೂನು ಚೌಕಟ್ಟಿನಲ್ಲಿ ರಕ್ಷಣೆ ನೀಡಬೇಕೆಂದು ಕೋರಿದರು.

ಐದನೇ ದಿನಕ್ಕೆ ಅಸ್ಥಿ ವಿಸರ್ಜಿಸಬೇಕಾಗಿರುವುದರಿಂದ ಅದಕ್ಕಾಗಿ ಕುಟುಂಬ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪಶ್ಚಿಮವಾಹಿನಿಯಲ್ಲಿ ವಿಸರ್ಜನೆಯಾಗಬೇಕೆಂಬ ಸಂಕಲ್ಪ ಮಾಡಲಾಗಿದೆ. ರಕ್ಷಣೆ ಕೊಡಲಾಗದು ಎಂದು ಸರ್ಕಾರ ಹೇಳಲಾಗದು ಎಂದು ತಿಳಿಸಿದರು.

ವಿವಿಧ ಹಿಂದೂ ಪರ ಸಂಘಟನೆಗಳು ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಿದ್ದಾರೆ. ಬೆಂಬಲ ಸಿಗುತ್ತದೆ ಎಂಬ ಅಚಲ ನಂಬಿಕೆ ಇದೆ ಎಂದರು.

ಕೊಲೆ ಪ್ರಕರಣ ದೊಡ್ಡಮಟ್ಟದ ತನಿಖೆಯಾಗಬೇಕು. ಮುಂದಿನ ದಿನಗಳಲ್ಲಿ ಯಾರೂ ಇಂತಹ ಕೃತ್ಯ ಎಸಗದಂತೆ ಪಾಠ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.

ಜೀವಬೆದರಿಕೆ:

ಇಂದು ಬೆಳಿಗ್ಗೆ ಜೀವ ಬೆದರಿಕೆ ಕರೆಯೊಂದು ಬಂದಿದ್ದು, ಏನಾದರೂ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಬಂದ ಕರೆನಂಬರನ್ನು ಸಖರಾಯಪಟ್ಟಣ ಠಾಣೆಗೆ ನೀಡಲಾಗಿದೆ. ಕರೆ ಕೆಟ್ಟದಾಗಿದ್ದರಿಂದ ಕೂಡಲೇ ಕಟ್ ಮಾಡಲಾಯಿತು ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಧರ್ಮ ರಕ್ಷಣೆಗೆ ನ್ಯಾಯಬದ್ಧ ಹೋರಾಟ ಮಾಡಲಾಗುವುದು ಎಂದರು.

ಶ್ರೀರಾಮಸೇನೆಯ ಮುಖಂಡರಾದ ವಿನೋದ್‍ಕುಮಾರ್, ಜ್ಞಾನೇಂದ್ರ, ಪುನೀತ್, ಜಗದೀಶ್, ದುರ್ಗಾಸೇನೆಯ ತಾಲೂಕು ಅಧ್ಯಕ್ಷೆ ನವಿನಾ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!