May 15, 2024

MALNAD TV

HEART OF COFFEE CITY

ಮಾವಿನಕೆರೆ ಸರ್ಕಾರಿ ಕನ್ನಡಮಾಧ್ಯಮ ಶಾಲೆಗೆ ಮಹಿಳಾಜಾಗೃತಿ ಸಂಘದಿಂದ ಟಿ.ವಿ.ಕೊಡುಗೆ

1 min read
mahila-jagriti-sangh-donates-tv-to-mavinakere-government-kannada-media-school

ಚಿಕ್ಕಮಗಳೂರು : ಮಾವಿನಕೆರೆ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಮಹಿಳಾ ಜಾಗೃತಿ ಸಂಘದಿಂದ ದೂರದರ್ಶಕ(ಟಿವಿ)ವನ್ನು ಕೊಡುಗೆ ನೀಡಿದೆ.
ಕೆ.ಆರ್.ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯಪ್ರಾಥಮಿಕ ಶಾಲೆಗೆ ಗೀತಾಸುಂದ್ರೇಶ್ ನೇತೃತ್ವದ ಮಹಿಳಾ ಜಾಗೃತಿ ಸಂಘದ ತಂಡ ಅಂದಾಜು ೧೮,೦೦೦ರೂ. ಟಿ.ವಿ.ಯನ್ನು ನೀಡುವ ಮೂಲಕ ಮಕ್ಕಳ ಶಿಕ್ಷಣದ ಉನ್ನತಿಗೆ ಸಹಕಾರ ನೀಡಲಾಗಿದೆ.
ಶಾಲಾವರಣದಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಂ. ಪರಮೇಶ್ ಮತ್ತು ಮುಖ್ಯಶಿಕ್ಷಕ ಬಿ.ಟಿ.ಲಕ್ಷö್ಮಣ್ಣಯ್ಯ ಅವರಿಗೆ ಟಿ.ವಿ.ಹಸ್ತಾಂತರಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕರ‍್ಯದರ್ಶಿ ಗೀತಾಸುಂದ್ರೇಶ್ ೧೯೮೪ರಲ್ಲಿ ಪ್ರಾರಂಭವಾದ ಮಹಿಳಾ ಜಾಗೃತಿ ಸಂಘ ನಿರಂತರವಾಗಿ ಮಹಿಳೆಯರನ್ನು ಸಂಘಟಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಮಹಿಳಾದೌರ್ಜನ್ಯ ಸಂದರ್ಭಗಳಲ್ಲಿ ಧ್ವನಿಯೆತ್ತಿ ನೊಂದವರ ಪರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಇದರ ಜೊತೆ ಜೊತೆಗೆ ಸದಸ್ಯರ ತಂಡಗಳನ್ನು ರಚಿಸಿಕೊಂಡು ಸಣ್ಣಪುಟ್ಟ ಕೊಡುಗೆಗಳನ್ನು ಸಮಾಜಕ್ಕೆ ನೀಡುವ ಮೂಲಕ ಉತ್ತಮ ಸಂಪ್ರದಾಯವನ್ನು ಪರಿಪಾಲಿಸುತ್ತಿದೆ ಎಂದರು.
ಶಿಕ್ಷಣ ಇಂದು ಅತ್ಯಗತ್ಯ. ವಿದ್ಯೆ ಯಾರೂ ಕದಿಯಲಾಗದ, ಕರಗದ, ಕುಂದದ, ಭಾಗಮಾಡಿಕೊಳ್ಳಲಾಗದ ಅಪೂರ್ವ ಸಂಪತ್ತು. ವಿದ್ಯೆ ಮಾತ್ರ ಹಂಚಿದಷ್ಟು ಹೆಚ್ಚುತ್ತಾ ಹೋಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹೊಣೆಗಾರಿಕೆ ಪೋಷಕರು, ಸಮಾಜ ಹಾಗೂ ಸರ್ಕಾರದ್ದಾಗಿದೆ. ವಿವಿಧೆಡೆ ಸರ್ಕಾರಿ ಕನ್ನಡಮಾಧ್ಯಮ ಶಾಲೆಗಳ ಸಬಲೀಕರಣಕ್ಕೆ ಮಹಿಳಾಜಾಗೃತಿ ಸಂಘ ಹಿಂದಿನಿAದಲೂ ನೆರವಾಗುತ್ತಾ ಬಂದಿದೆ ಎಂದರು.

Mahila Jagriti Sangh donates TV to Mavinakere Government Kannada Media School
ಮಹಿಳಾ ಜಾಗೃತಿ ಸಂಘದ ಖಜಾಂಚಿ ಸುಲೋಚನಮ್ಮಶ್ರೀನಿವಾಸಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಗ್ರಾಮೀಣಪ್ರದೇಶ ಜಿಲ್ಲೆಯ ಗಡಿಭಾಗದ ಮಾವಿನಕೆರೆ ಶಾಲೆಯಿಂದ ಬಂದ ಬೇಡಿಕೆಯನ್ನು ಪರಿಗಣಿಸಿ ಸದಸ್ಯರ ತಂಡದ ನೆರವಿನೊಂದಿಗೆ ಟಿ.ವಿ.ನೀಡಲಾಗುತ್ತಿದೆ. ಮಕ್ಕಳು ಇದರ ಸದ್ಭಳಕೆ ಮಾಡಿಕೊಂಡರೆ ದಾನ ಸಾರ್ಥಕವಾಗುತ್ತದೆ. ಇನ್ನಷ್ಟು ನೆರವು ನೀಡಲು ಪ್ರೇರಕವಾಗುತ್ತದೆ ಎಂದರು.
ಶಾಲಾಮುಖ್ಯಶಿಕ್ಷಕ ಬಿ.ಟಿ.ಲಕ್ಷ್ಮಣಯ್ಯ ಮಹಿಳಾ ಜಾಗೃತಿ ಸಂಘಕ್ಕೆ ಕೃತಜ್ಞತೆಸಲ್ಲಿಸಿ ಮಾತನಾಡಿ ೧೯೪೭ರಲ್ಲಿ ಪ್ರಾರಂಭಗೊAಡ ಶಾಲೆ ೧ರಿಂದ ೫ನೆಯ ತರಗತಿಯವರೆಗೆ ಕನ್ನಡಮಾಧ್ಯಮದಲ್ಲಿ ಬೋಧಿಸುತ್ತಿದೆ. ಪರಿಶಿಷ್ಟ ಜಾತಿ-ವರ್ಗದ ಮಕ್ಕಳೆ ಅಧಿಕವಾಗಿ ಕಲಿಯುತ್ತಿದ್ದಾರೆ. ಪಾಠಬೋಧನೆ, ಸಾಂಸ್ಕೃತಿಕ ಕರ‍್ಯಕ್ರಮ ವೀಕ್ಷಣೆಯ ಜೊತೆಗೆ ಸ್ಮಾರ್ಟ್ ಕ್ಲಾಸ್ ನಡೆಸಲು ಟಿ.ವಿ.ಸಹಕಾರಿ. ಕರೋನಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಿದ್ಧಪಡಿಸಿದ ಆನ್‌ಲೈನ್ ಪಠ್ಯವನ್ನು ಮಕ್ಕಳಿಗೆ ಬೋಧಿಸಲು ಅನುಕೂಲವಾಗುತ್ತಿದೆ. ಗ್ರಾಮದ ಪ್ರಮುಖರಾಗಿದ್ದ ನಟರಾಜ್ ಹಾಗೂ ಮೂಗ್ತಿಹಳ್ಳಿ ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಕುಮಾರ್ ಡಿಶ್ ಸೌಲಭ್ಯ ಸೇರಿದಂತೆ ಸ್ಮಾರ್ಟ್ ಕ್ಲಾಸ್‌ಗೆ ಕೈಜೋಡಿಸಿದ್ದಾರೆಂದರು.
ಮಹಿಳಾ ಜಾಗೃತಿ ಸಂಘದ ನಿರ್ದೇಶಕರಾದ ಗುಣರತ್ನನಂದೀಶ್, ಯಶೋಧಶಿವಪ್ಪ, ಸದಸ್ಯರಾದ ಚನ್ನಮ್ಮಸತೀಶ್, ಸತ್ಯಭಾಮಾಶ್ರೀನಿವಾಸ, ಶೈಲಜಾನಾರಾಯಣಮೂರ್ತಿ, ಸುಮಿತ್ರಾಶಾಸ್ತಿç ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸದಸ್ಯರುಗಳಾದ ಶೋಭಾಮಂಜುನಾಥ್, ಶ್ರೀವಳ್ಳಿಶೇಖರ್, ಲಕ್ಷಿö್ಮÃಮಂಜುನಾಥ ಸುಜಾತ, ಬಿ.ಎಚ್.ಲಕ್ಷಿö್ಮ, ರಾಧಿಕಾ, ಶೈಲಜಾ, ಭಾಮಾ, ವಿಜಯಾ, ಜಯಂತಿ ಸೇವಾ ಯೋಜನೆಯಲ್ಲಿ ಒಳಗೊಂಡಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!