April 30, 2024

MALNAD TV

HEART OF COFFEE CITY

ಹಳ್ಳಿ ಹಳ್ಳಿಗೂ ವ್ಯಾಪಿಸಿದ ಕೊರೋನ ಹೆಮ್ಮಾರಿ : ಕೊರೋನ ನಿಯಂತ್ರಣಕ್ಕೆ ಅಧಿಕಾರಗಳ ಹರ ಸಾಹಸ

1 min read

ಚಿಕ್ಕಮಗಳೂರು : ಒಂದೆಡೆ ಸರ್ಕಾರ ಕೊರೋನ ಮಹಾಮಾರಿಯ ವೇಗವನ್ನು ನಿಯಂತ್ರಣಕ್ಕೆ ತರಲು ಲಾಕ್‌ಡೌನ್ ನಂತಹ ಕಠಿಣ ಕ್ರಮಕ್ಕೆ ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿಗೆ ನೀಡಿ ಇಂದಿಗೆ ವಾರಗಳೆ ಕಳೆಯುತ್ತ ಬಂದಿದೆ. ಸರ್ಕಾರ ರೂಪಿಸಿರುವ ನಿಯಮವನ್ನು ಪಾಲಿಸುವಲ್ಲಿ ಜನಸಾಮಾನ್ಯನ ಉಪೇಕ್ಷೆಯಿಂದ ಕೊರೋನ ತನ್ನ ಅಟ್ಟಹಾಸವನು ಹಳ್ಳಿ ಹಳ್ಳಿಗಳಲ್ಲಿ ತೋರಿಸುತ್ತಿದೆ.

ಕಾಫಿನಾಡ ಹಳ್ಳಿಗಳಲ್ಲಿ ಕೊರೋನಾ ಅಬ್ಬರ ಮಿತಿ ಮೀರಿದ್ದು, ಗ್ರಾಮೀಣಾ ಭಾಗದಲ್ಲಿ ಕೊರೋನಾ ಸ್ಫೋಟವೆ ಆದಂತಿದೆ. ಅಧಿಕಾರಿಗಳು ತಮ್ಮ ಹಾಗೂ ತಮ್ಮ ಕುಟುಂಬದ ಪ್ರಾಣದ ಹಂಗು ತೊರೆದು ಜನ ಸಾಮಾನ್ಯನ ಜೀವ ಉಳಿಸಲು ಹೈರಾಣಾಗುತ್ತಿದ್ದರೆ. ಇತ್ತ ಜನ ಸಾಮಾನ್ಯ ಮಾತ್ರ ಬೇಜಾವಾಬ್ದಾರಿಯನ್ನು ಬಿಟ್ಟಂತೆ ಕಾಣುತ್ತಿಲ್ಲ. ಇದರ ಫಲವಾಗಿ ಚಿಕ್ಕಮಗಳೂರು ತಾಲೂಕಿನ ಕೊಳ್ಳಿಕೊಪ್ಪ ಒಂದೇ ಗ್ರಾಮದಲ್ಲಿ 75 ಜನರಲ್ಲಿ ಕೊರೋನಾ ಸೋಂಕು ದೃಡಪಟ್ಟಿದೆ. ಇನ್ನೂ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಅಂಬಳೆ ಹೋಬಳಿಯ ಕೋಡಿ ಹಳ್ಳಿ ಗ್ರಾಮದ ಜನರು ಸಾವಿಗೆ ಹೋಗಿದ್ದಾರೆ. ಸಾವಿಗೆ ಹೋದವರಲ್ಲಿ ಕೊರೋನದ ಲಕ್ಷಣ ಕಂಡು ಬಂದಿದೆ. ಪ್ರಾರ್ಥಮಿಕ  ಸಂಪರ್ಕಕ್ಕೆ ಸಿಕ್ಕ 30 ಜನರಿಗೆ ಕೊರೋನ ಪರೀಕ್ಷೆ ನಡೆಸಿದ್ದು, ಇವರುಗಳಲ್ಲಿ 22 ಜನರಿಗೆ ಕೊರೋನ ಪಾಸಿಟಿವ್ ಧೃಡಪಟ್ಟಿದೆ. ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮನೆಯಿಂದ ಯಾರು ಹೊರ ಬರದಂತೆ ಮನವಿ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ಉಪ ವಿಭಾಗದಿಕಾರಿ ನಾಗರಾಜ್ ಹಾಗೂ ತಹಶೀಲ್ದಾರ್ ಕಾಂತರಾಜ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ-ಮನೆಗೆ ಪಡಿತರ ವಿತರಿಸುವುದಾಗಿ ಹೇಳಿದ್ದು, ಗ್ರಾಮವನ್ನ ಸೀಲ್ ಡೌನ್ ಮಾಡಿದ್ದಾರೆ. ಅಲ್ಲದೆ ಗ್ರಾಮಸ್ಥರಿಗೆ ಸರ್ಕಾರ ರೂಪಿಸಿರುವ ಕೊರೋನ ನಿಯಮಾವಳಿಗಳಾದ ಮಾಸ್ಕ್, ಸಾಮಾಜಿಕ ಅಂತರ, ಮನೆ ಬಿಟ್ಟು ಬರದಂತೆ ಮಾಹಿತಿ ನೀಡಲಾಯಿತು.

ಜನ ಸಾಮಾನ್ಯನ ಬೇಜವಾಬ್ದಾರಿ ತನದಿಂದ ನಿಯಮವನ್ನು ಉಲ್ಲಂಘಿಸಿರುವುದೇ ಕೊರೋನಾ ಹಳ್ಳಿ ಹಳ್ಳಿಗೂ ಹರಡಲು ಕಾರಣವಾಗಿದೆ. ಸರ್ಕಾರವೊಂದೆ ಏನು ಮಾಡಲು ಸಾಧ್ಯವಿಲ್ಲ. ಜನ ಸಾಮಾನ್ಯನ ಪಾತ್ರ ಬಹಳ ಮುಖ್ಯವಾಗಿರುತ್ತದೆ. ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು, ಕೊರೋನ ನಮ್ಮಿಂದ ನಾಲ್ಕು ಜನರ ಸಾವಿಗೆ ಕಾರಣವಾಗುವ ಮುನ್ನ ಎಚ್ಚೆತ್ತು ಕೊರೋನ ನಿಯಮವನ್ನು ಅನುಸರಿಸಿ ನಮ್ಮ ಕುಟುಂಬವನ್ನು ರಕ್ಷಿಸಿ, ನಮ್ಮ ಸುತ್ತಲಿನವರನ್ನು ರಕ್ಷಿಸೋಣ. ಕೊರೋನಾ ಹೆಮ್ಮಾರಿ ತಡೆಯೋಣ.

ಮನೆಯಲ್ಲೇ ಇರಿ! ಸುರಕ್ಷಿತವಾಗಿರಿ!

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!