ದೇವನೂರು ಕೆರೆಗೆ ಹರಿದ ಬೆಳವಾಡಿ ದೊಡ್ಡ ಕೆರೆ ಕೋಡಿ ನೀರು
1 min readಚಿಕ್ಕಮಗಳೂರು : ಬೆಳವಾಡಿಯ ಐತಿಹಾಸಿಕ ದೊಡ್ಡ ಕೆರೆ ಕೋಡಿ ಬಿದ್ದ ಹಿನ್ನೆಲೆ ದೊಡ್ಡಕೆರೆ ಕೆಳ ಭಾಗದ ಕೆರೆಯಾದ ದೇವನೂರಿನ ಕೆರೆಯು ದಶಕಗಳ ನಂತರ ತುಂಬಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಸಂತೋಷ ಮನೆ ಮಾಡಿದೆ.
ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ಬಯಲು ಸೀಮೆ ಭಾಗಗಳಿಗೆ ನೀರುಣಿಸುವ ದೃಷ್ಠಿಯಿಂದ ಕೈಗೊಂಡ ಬಹು ನಿರೀಕ್ಷಿತ, ಬಹು ಕೋಟಿಯ, ಧೀರ್ಘ ಕಾಲದ ಯೋಜನೆಯಾದ ಕರಗಡ ಏತ ಕುಡಿಯುವ ನೀರಾವರಿಯ ಯೋಜನೆ ತಾಂತ್ರಿಕ ದೋಷಗಳಿಂದ ವಿಫಲವಾದ ಹಿನ್ನೆಲೆ ಮೋಟಾರ್ ಯಂತ್ರದ ಮೂಲಕ ಕೆರೆಗಳಿಗೆ ನೀರು ಹರಿಸಲು ಯೋಜನೆ ಕೈಗೊಳ್ಳಲಾಯಿತು. ಇದರ ಹಾಗೂ ಈ ಬಾರಿ ಆಷಾಡ ಮಾಸದಲ್ಲಿ ಉತ್ತಮ ಮಳೆಯಾದ ಕಾರಣ ದಶಕಗಳಿಗೂ ಹೆಚ್ಚು ಕಾಲ ನೀರಿಲ್ಲದೆ ಬಾಯಿಬಿಟ್ಟಿದ ಬೆಳವಾಡಿ ಕೆರೆ ತುಂಬಿ ಕೋಡಿ ಬಿದ್ದಿದೆ. ಕೋಡಿ ಬಿದ್ದ ನೀರು ಸರಾಗವಾಗಿ ಮುಂದಿನ ಕೆರೆಗಳಿಗೆ ಸಾಗುವ ಮುಂದಲೋಚನೆಯಿಂದ ಬೆಳವಾಡಿ ದೊಡ್ಡ ಕೆರೆಯ ಕೋಡಿ ಕಾಲುವೆಗಳನ್ನು ಜೆ.ಸಿ.ಬಿ ಯಂತ್ರಗಳಿಂದ ಸ್ವಚ್ಚಗೊಳಿಸಿರುವ ಕಾರಣ ನೀರು ಸರಾಗವಾಗಿ ಹರಿದು ಕೆಳಭಾಗದ ದೇವನೂರು ಕೆರೆಯು ಭಾಗಷಃ ತುಂಬಿದೆ. ಹದಿಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ನೀರಿಲ್ಲದೆ ಇದ್ದ ದೇವನೂರು ಕೆರೆಯಲ್ಲಿ ನೀರನ್ನು ಕಂಡು ಸುತ್ತಮುತ್ತಲ ಗ್ರಾಮಗಳ ಜನರು ಹರ್ಷಚಿತ್ತರಾಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g