May 2, 2024

MALNAD TV

HEART OF COFFEE CITY

*ಕಾಫಿನಾಡ ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಕಾರ್ಯಾಚರಣೆ*

1 min read

 

 

ಚಿಕ್ಕಮಗಳೂರು: ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಮಟ್ಟದ ಗಾಂಜಾ ದಾಳಿ ನಡೆದಿದ್ದು, ಬೃಹತ್ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಸೇರಿದಂತೆ 102 ಕೆಜಿ ಗಾಂಜಾವನ್ನ ಕಾಫಿನಾಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೆರೆಗೆ ಸೆನ್ ಪೊಲೀಸ್ ಇನ್ಸ್ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ದಾಳಿ ನಡೆಸಿದ ಖಾಕಿ ಪಡೆ, ಚಿಕ್ಕಮಗಳೂರು ತಾಲೂಕಿಕ ಕರ್ತಿಕೆರೆ ಬಳಿ ಆರೋಪಿಗಳನ್ನ ಲಾಕ್ ಮಾಡಿದೆ. ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಮಟ್ಟದ ಕಾರ್ಯಾಚರಣೆ ಇದಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರನ್ನ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಶ್ಲಾಘಿಸಿದ್ದಾರೆ..

*ಆಂಧ್ರ ಪ್ರದೇಶದಿಂದ ಮಾಲು ತರುತ್ತಿದ್ದ ಖದೀಮರು*

ಈ ರೀತಿಯ ಗಾಂಜಾ ರೇಡ್ ಇದು ಮೊದಲೆನಲ್ಲ. ಈ ಹಿಂದೆಯೂ ಹಲವಾರು ದಾಳಿ ನಡೆಸಿ ಪೊಲೀಸರು ಗಾಂಜಾ ಮಾಲು ಸಮೇತ ಆರೋಪಿಗಳನ್ನ ಬಂಧಿಸಿದ್ದರು. ಆದರೆ ಇದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಈ ಹಿಂದೆ ಬಂಧನ ಮಾಡಿದ ಆರೋಪಿಗಳಿಂದ ಪಡೆದ ಮಾಹಿತಿ ಹಾಗೂ ಈ ಗಾಂಜಾ ಖರೀದಿಯಲ್ಲಿ ಯಾರ್ಯಾರು ಭಾಗಿಯಾಗುತ್ತಾರೆ ಅನ್ನೋ ಮಾಹಿತಿಯನ್ನ ಪಡೆದ ಪೊಲೀಸರು ಆ ವ್ಯಕ್ತಿಗಳ ಚಲನ ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಚಿಕ್ಕಬಳ್ಳಾಪುರದ ಇಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾವನ್ನ ದೊಡ್ಡ ಮಟ್ಟದಲ್ಲಿ ಡೀಲ್ ಮಾಡಿಕೊಂಡು ಅದನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನ ಅರಿತ ಪೊಲೀಸರು ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನಿನ್ನೆ ಕೂಡ ವಿಶಾಖಪಟ್ಣಣದಿಂದ ಗಾಂಜಾ ಲೋಡ್ ಆಗಿ ಬರುತ್ತಿದ್ದ ಮಾಹಿತಿಯನ್ನ ಖಚಿತ ಪಡಿಸಿಕೊಂಡು ಆರೋಪಿಗಳ ಸಮೇತ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.

*ತರಕಾರಿ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಖತರ್ನಾಕ್ ಗಳು*

ಆಂಧ್ರಪ್ರದೇಶದಿಂದ ಗಾಂಜಾವನ್ನ ನಮ್ಮ ರಾಜ್ಯಕ್ಕೆ ಸಾಗಿಸುವುದು ಅಷ್ಟು ಸುಲಭವಲ್ಲ. ಆದ್ರೆ ಈ ಖತರ್ನಾಕ್ ಗ್ಯಾಂಗ್ ಆಂಧ್ರದ ವಿಶಾಖಪಟ್ಟಣದಿಂದ ತುಂಬಾ ಸಲೀಸಾಗಿ ಗಾಂಜಾವನ್ನ ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು. ತರಕಾರಿ ಗಾಡಿಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಗೆ ಗಾಂಜಾ ಸಫ್ಲೈ ಆಗ್ತಿತ್ತು. ಪಿಕ್ ಆಪ್ ವಾಹನದಲ್ಲಿ ಕೆಳಗಡೆ ಗಾಂಜಾವನ್ನ ಇಟ್ಟು, ಈ ಖತರ್ನಾಕ್ಗಳು ತರಕಾರಿಯನ್ನ ಮೇಲೆ ಲೋಡ್ ಮಾಡುತ್ತಿದ್ದರು. ಇದರಿಂದ ಚೆಕಿಂಗ್ ಸ್ಥಳಗಳಲ್ಲೂ ಪೊಲೀಸರು ಸೇರಿದಂತೆ ಯಾರಿಗೂ ಕೂಡ ಡೌಟೇ ಬರ್ತಾ ಇರಲಿಲ್ಲ. ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗದ ಅನೇಕ ಗಾಂಜಾ ಪಾಯಿಂಟ್ಗಳಿಗೆ ಈ ಮಾಲು ಹಂಚಿಕೆಯಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ಇತ್ತು. ಹಾಗಾಗೀ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾಗುವ ಮುನ್ನವೇ ತಾಲೂಕಿನ ಕರ್ತಿಕೆರೆ ಬಳಿ ಪೊಲೀಸರು ದಾಳಿ ಆರೋಪಿಗಳನ್ನ ಹೆಡಮುರಿಕಟ್ಟುವುದರ ಜೊತೆಗೆ ದೊಡ್ಡಮಟ್ಟದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.

*ಕಾಲೇಜು ಹುಡುಗರು, ಕೂಲಿ ಕಾರ್ಮಿಕರನ್ನ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ*

ಹೀಗೆ ಮೂಟೆಗಟ್ಟಲ್ಲೇ ಬರುತ್ತಿದ್ದ ಗಾಂಜಾವನ್ನ ಚಿಕ್ಕ ಚಿಕ್ಕ ಪಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಹೊರಗಡೆ ಯಿಂದ ಗಾಂಜಾವನ್ನ ತರುತ್ತಿದ್ದ ವ್ಯಕ್ತಿಗಳು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಪ್ರತಿ ಜಿಲ್ಲೆಗಳಲ್ಲೂ ಹೀಗೆ ಹೊರಗಡೆಯಿಂದ ಬಂದ ಗಾಂಜಾವನ್ನ ಮಾರಾಟ ಮಾಡಲು ನಿರ್ದಿಷ್ಟ ವ್ಯಕ್ತಿಗಳು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ನೆಟ್ವರ್ಕ್ನ ವ್ಯಕ್ತಿಗಳಿಗೆ ಗಾಂಜಾವನ್ನ ನೀಡಿ ಡೀಲ್ ಮುಗಿಸಿಕೊಂಡು ಹೊರಗಡೆಯಿಂದ ಬಂದ ವ್ಯಕ್ತಿಗಳು ಕೈತೊಳೆದುಕೊಳ್ಳುತ್ತಿದ್ದರು. ಹೀಗೆ ಆಂಧ್ರದಿಂದ ಬಂದ ಗಾಂಜಾ ಸ್ಥಳೀಯ ವ್ಯಕ್ತಿಗಳ ಕೈ ಸೇರುತ್ತಿತ್ತು. ಆ ವ್ಯಕ್ತಿಗಳ ಕೂಡ ಕೆಲವು ತಂಡಗಳನ್ನ ಮಾಡಿಕೊಂಡು ಗಾಂಜಾವನ್ನ ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರನ್ನ ಗುರಿಯಾಗಿಸಿ ಮಾರಾಟ ಮಾಡುತ್ತಿರೋದನ್ನ ಪೊಲೀಸರು ಪತ್ತೆ ಹಚ್ಚಿದ್ದರು.

*ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಕಾರ್ಯಾಚರಣೆ- ಎಸ್ಪಿ ಅಕ್ಷಯ್ ಶ್ಲಾಘನೆ*

ಈ ಹಿಂದೆ 1ಕೆಜಿ, 2 ಕೆಜಿ ಗಾಂಜಾವನ್ನ ಕೆಲವೆಡೆ ವಶಪಡಿಸಿಕೊಳ್ಳುತ್ತಿದ್ದ ಪೊಲೀಸರು, ಸಿಕ್ಕಿಬಿದ್ದ ಆರೋಪಿಗಳಿಂದ ಮಾಹಿತಿ ಪಡೆದು ಕಿಂಗ್ ಪಿನ್ಗಳನ್ನ ಬೇಟೆಯಾಡೋಕೆ ಸಿದ್ದತೆ ನಡೆಸಿದ್ದರು. ಈ ಹಿಂದೆ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಬಂಧನವಾಗಿದ್ದರೂ ಕೂಡ ಹೀಗೆ ಲಾಕ್ ಆದ ಅನೇಕರು ಮಾಹಿತಿಯನ್ನ ಬಿಟ್ಟುಕೊಡದೇ ಇದ್ದಿದ್ದು ಪೊಲೀಸರ ದೊಡ್ಡ ಮಟ್ಟದ ಕಾರ್ಯಾಚರಣೆಗೆ ತೊಡಕಾಗಿತ್ತು. ಈ ಮಧ್ಯೆಯೂ ಗಾಂಜಾದ ಬೆನ್ನು ಬಿಡದ ಖಾಕಿ ಪಡೆ, ಬೃಹತ್ ಕಾರ್ಯಾಚರಣೆಗೆ ಸದ್ದಿಲ್ಲದೇ ತಯಾರಿ ನಡೆಸಿತ್ತು. ಆ ಬಳಿಕ ಖಚಿತ ಮಾಹಿತಿ ಪಡೆದುಕೊಂಡು ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಲು ಸೆನ್ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ರಕ್ಷಿತ್, ಸಬ್ ಇನ್ಸ್ಪೆಕ್ಟರ್ಗಳಾದ ರಫೀಕ್, ನೀತು ಗುಡೆ ಹಾಗೂ ಸಿಬ್ಬಂದಿಗಳು ತುಂಬಾ ಶ್ರಮವಹಿಸಿದ್ದರು. ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡಮಟ್ಟದ ಕಾರ್ಯಾಚರಣೆ ಇದಾಗಿದ್ದು, ಎಸ್ಪಿ ಅಕ್ಷಯ್ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡವನ್ನ ಶ್ಲಾಘಿಸಿದ್ದು ನಗದು ಬಹುಮಾನವನ್ನ ನೀಡಿದ್ದಾರೆ. ಅಲ್ಲದೇ ಇಲಾಖೆಯಿಂದ ಪ್ರಶಸ್ತಿ ಕೊಡಿಸಲು ಶಿಫಾರಸ್ಸು ಮಾಡಲು ಸೂಚಿಸುತ್ತೇನೆ ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ತಿಳಿಸಿದ್ದಾರೆ.

 

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!