May 18, 2024

MALNAD TV

HEART OF COFFEE CITY

ಕರವೇ ಜಿಲ್ಲಾ ಘಟಕದಿಂದ ಜಯಚಾಮರಾಜ ಒಡೆಯರ್ ರವರ 102ನೇ ಜಯಂತ್ಯೋತ್ಸವ

1 min read

 

ಚಿಕ್ಕಮಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕರವೇ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ಅರಸ್ ರವರ ಅಧ್ಯಕ್ಷತೆಯಲ್ಲಿ
ಜಯಚಾಮರಾಜ ಒಡೆಯರ್ ರವರ 102 ನೇ ಜಯಂತ್ಯೋತ್ಸವ ಆಚರಿಸಲಾಯಿತ್ತು.

ಭಾರತ ದೇಶದ ರಾಜಮನೆತನಗಳಲ್ಲಿ ಅತಿಹೆಚ್ಚು ಸಾಧನೆ ಮಾಡಿರುವ ಮೈಸೂರು ಸಂಸ್ಥಾನದ 25 ನೇ ಮಹಾರಾಜರಾದ ಕರ್ನಾಟಕದ ಜನತೆಯ ಹೃದಯ ಸಿಂಹಾಧೀಶರಾಗಿದ್ದ ಭಾರತದ ಸಾಂಸ್ಕೃತಿಕ ರಾಯಭಾರಿಗಳು ಕರ್ನಾಟಕ ಹಾಗೂ ಮದ್ರಾಸ್ ಪ್ರಾಂತ್ಯದ ಮೊದಲ ರಾಜ್ಯಪಾಲರಾಗಿದ್ದ ಮಹಾರಾಜ ಶ್ರೀ ಶ್ರೀ ಜಯಚಾಮರಾಜ ಒಡೆಯರ್ ರವರ 102 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್ ಕಾರಣದಿಂದ ಸರಳವಾಗಿ ಆಚರಣೆ ಮಾಡಲಾಯಿತು.

ಇದೇ ವೇಳೆ ಮಾತಮಾಡಿದ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ಅರಸ್ , ಜಯಚಾಮರಾಜ ಒಡೆಯರ್ ಅವರ ಸಾಧನೆಗಳು ಕಲೆ,ಸಾಹಿತ್,ಯ ಸಂಗೀತಕ್ಕೆ ಹೆಚ್ಚು ಒತ್ತು ನೀಡುತಿದ್ದರು. ಕನ್ನಡದಲ್ಲಿ ಸುಮಾರು 67 ಹೆಚ್ಚು ಕೀರ್ತನೆಗಳನ್ನು ಹಾಡಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಆಡಳಿತದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜರು. ರಾಜ್ಯಭಾರ ಮಾಡಿದ ಕೇವಲ ಏಳು ವರ್ಷಗಳಲ್ಲಿ ನೂರಾರು ವರ್ಷಗಳು ಉಳಿಯುವಂತ ಸಾಧನೆಗಳನ್ನು ಮಾಡಿದ್ದಾರೆ. ಜಲವಿದ್ಯುತ್, ಗ್ರಂಥಗಳನ್ನು, ಶಿಕ್ಷಣ, ನೀರಾವರಿ ಯೋಜನೆ ಹಾಗೂ ರಾಜಪದವಿ ಹೋದರು ಚಿಂತೆಯಿಲ್ಲ ಕರ್ನಾಟಕ ಏಕೀಕರಣವಾಗಬೇಕೆಂದು ಸಮರ ಸಾರಿದ ಮೊದಲ ಮಹಾರಾಜ ಇವರ ಸಾಧನಗಳ ಪಟ್ಟಿ ದೊಡ್ಡದಿದೆ.

ಒಂದು ದುರಂತವೆಂದರೆ ನಮ್ಮ ಸರ್ಕಾರಗಳು ಇಂತಹ ಕೊಡುಗೆಗಳನ್ನು ನೀಡಿದ ಮಹಾರಾಜರ ಜಯಂತ್ಯೋತ್ಸವವನ್ನು ರಾಜ್ಯಾದ್ಯಂತ ಆಚರಣೆ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಈಗಲಾದರೂ ರಾಜ್ಯ ಸರ್ಕಾರ ಪ್ರತಿವರ್ಷ ಇವರ ಜಯಂತ್ಯೋತ್ಸವವನ್ನು ಎಲ್ಲಾ ಜಿಲ್ಲಾ ಕೇಂದ್ರ ಹಾಗು ತಾಲ್ಲೂಕು ಕೇಂದ್ರಗಳಲ್ಲಿ ಜಿಲ್ಲಾಡಳಿತದ ಮೂಲಕ ಆಚರಣೆ ಮಾಡಬೇಕು ಇವರ ಸಾಧನೆಗಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದು ಕ ರ ವೇ ಯು ಆಗ್ರಹಿಸುತ್ತದೆ

ಕಾರ್ಯಕ್ರಮದಲ್ಲಿ ಕರವೇ ಉಪಾಧ್ಯಕ್ಷರಾದ ಶ್ರೀ ದಶರಥರಾಜು ತಾಲ್ಲೂಕು ಕಾರ್ಯದರ್ಶಿ ಇರ್ಷಾದ್ ಅಹಮದ್, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಭರತ್ ರಾಜ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!