April 29, 2024

MALNAD TV

HEART OF COFFEE CITY

ಇದು ಸೈನಿಕರಿಗೆ ಶೂ-ಬಂದೂಕು ಕೊಡದ ರಾಹುಲ್ ಗಾಂಧಿ ಮುತ್ತಾತನ ಕಾಲದ ಭಾರತವಲ್ಲ : ಸಿ.ಟಿ.ರವಿ

1 min read

ಚಿಕ್ಕಮಗಳೂರು. ಈಗ ಇರೋದು ಸೈನಿಕರಿಗೆ ಹಿಮದಲ್ಲಿ ಓಡಾಡಲು ಅಗತ್ಯವಿರುವ ಶೂ ಹಾಗೂ ಬಂದೂಕನ್ನೂ ಕೊಡದ ರಾಹುಲ್ ಗಾಂಧಿ ಮುತ್ತಾತನ ಕಾಲದ ಭಾರತವಲ್ಲ. ಒಂದು ಇಂಚು ಜಾಗಕ್ಕೂ ಸ್ವಾಭಿಮಾನದಿಂದ ಹೋರಾಡುವ ಭಾರತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. ನಗರದ ಕುವೆಂಪು ಕಲಾ ಮಂದಿರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿದ್ದನ್ನೇ ಬಿಲಾವಲ್ ಭುಟ್ಟೋ ಹೇಳೋದು, ಬಿಲಾವಲ್ ಭುಟ್ಟೋ ಹೇಳೋದನ್ನೇ ರಾಹುಲ್ ಗಾಂಧೀ ಹೇಳೋದು, ಇದು ಬಹು ದೊಡ್ಡ ಅಪಾಯಕಾರಿ ಸಂಗತಿ. ಇವರಿಬ್ಬರ ನಡುವಿನ ಹೊಂದಾಣಿಕೆ ಏನೆಂದು ನನಗೆ ಅರ್ಥ ಆಗುತ್ತಿಲ್ಲ. ಆದರೆ, ಇಬ್ಬರೂ ಕೂಡ ವಂಶಪಾರಂಪರ್ಯದ ಕುಡಿಗಳು ಅಲ್ಲಿರುವ ಪಾಕಿಸ್ತಾನದ ಆ ತುಂಡು ಹಾಗೂ ಇದು ಕೂಡ ವಂಶ ಪಾರಂಪರ್ಯದ ಕುಡಿ ಅನ್ನೋದಂತು ಸತ್ಯ ಎಂದು ವ್ಯಂಗ್ಯವಾಡಿದ್ದಾರೆ.

ಮಂಗಳೂರಲ್ಲಿ ಕುಕ್ಕರ್ ಸ್ಫೋಟಗೊಂಡಿದ್ದು ಸತ್ಯ. ಆಟೋ ಚಾಲಕ ಕುಕ್ಕರ್ ಬಾಂಬ್ ತಯಾರಿಸಿ ಮುಖ್ಯಮಂತ್ರಿ ಹಾಗೂ ಅವರ ಸಭೆಯನ್ನ ಟಾರ್ಗೆಟ್ ಮಾಡಿ ಈಗ ಆಸ್ಪತ್ರೆಯಲ್ಲಿದ್ದಾನೆ. ಬಾಂಬ್ ಇಲ್ಲದಿದ್ದರೆ ಸಾಮಾನ್ಯ ಕುಕ್ಕರ್ ಬ್ಲಾಸ್ಟ್ ಆಗಲು ಸಾಧ್ಯವೆ ಎಂದು ಪ್ರಶ್ನಿಸಿದರು. ಇಂತಹಾ ಸಂದರ್ಭದಲ್ಲಿ ಆರೋಪಿಗಳ ಪರವಾಗಿರುವ ಮಾನಸಿಕತೆ ಪ್ರದರ್ಶನ ಮಾಡಿದರೆ ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ. ಹೊರಗಿನ ಶತ್ರುಗಳನ್ನ ನಿಗ್ರಹಿಸುವುದು ಸುಲಭ. ಆದರೆ, ಆಂತರಿಕ ಶತ್ರುಗಳನ್ನ ಬೆಂಬಲಿಸುವ ಮಾನಸಿಕತೆ ಬಹಳ ಅಪಾಯಕಾರಿ. ಕಾಂಗ್ರೆಸ್ ಅಧ್ಯಕ್ಷರು ತೋರಿದ್ದು ಅಂತಹ ಅಪಾಯಕಾರಿ ವರ್ತನೆಯನ್ನ ಎಂದರು. ಅವರು ಬೇಷರತ್ ಕ್ಷಮೆಯಾಚಿಸುತ್ತಾರೆ ಎಂದು ಭಾವಿಸಿದ್ದೇವು. ಆದರೆ, ಅವರು ಮೊಂಡು ಸಮರ್ಥನೆ ಗಿಳಿದಿರುವುದು ಮತ್ತು ಅವರ ಸಮರ್ಥನೆಗೆ ಉಳಿದವರು ನಿಂತಿರುವುದು ಕಾಂಗ್ರೆಸ್ಸಿನ ಇಂದಿನ ಮಾನಸಿಕತೆ ತೋರಿಸುತ್ತದೆ ಎಂದರು. 2000 ಇಸವಿಯ ಹಾಸುಪಾಸು. ಚರ್ಚ್‍ಗಳಲ್ಲಿನ ಸರಣಿ ಬಾಂಬ್ ಸ್ಫೋಟದ ವಿಷಯದಲ್ಲಿ ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ್ ಖರ್ಗೆ ತನಿಖೆಗೂ ಮೊದಲೇ ಈ ಕೃತ್ಯದ ಹಿಂದೆ ಆರ್.ಎಸ್.ಎಸ್ ಕೈವಾಡವಿದೆ ಎಂದಿದ್ದರು. ಬಾಂಬ್ ಒಯ್ಯುವ ವೇಳೆ ರಸ್ತೆ ಹಂಪ್ ಹತ್ತುವಾಗ ವಾಹನದಲ್ಲಿದ್ದ ಬಾಂಬ್ ಸ್ಫೋಟವಾಗಿದ್ದ ಪ್ರಕರಣದ ಜಾಡು ಹಿಡಿದ ಪೊಲೀಸ್ ಸತ್ಯ ತಿಳಿದಿತ್ತು. ಪಾಕಿಸ್ತಾನದ ಪ್ರಚೋದನೆ ಪಡೆದ ಹುಬ್ಬಳ್ಳಿ ಮೂಲದ ಸಂಘಟನೆ ಇಡೀ ಬಾಂಬ್ ಸ್ಫೋಟವನ್ನು ಮಾಡಿತ್ತು. ಅಂದು ಎಲ್ಲರನ್ನೂ ಬಂಧಿಸುವ ಕೆಲಸವನ್ನ ಪೊಲೀಸ್ ಇಲಾಖೆ ಮಾಡಿತ್ತು, ಅಂದು ವಿವೇಚನೆ ಇಲ್ಲದೆ ಹೇಳಿಕೆ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ, ಇಂದು ವಿವೇಚನೆ ಇಲ್ಲದೆ ಅವರ ಅಧ್ಯಕ್ಷರನ್ನು ಸಮರ್ಥನೆ ಮಾಡುತ್ತಿರುವುದು ಪ್ರಿಯಾಂಕ್ ಖರ್ಗೆ ಎಂದು ತಿರುಗೇಟು ನೀಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!