May 15, 2024

MALNAD TV

HEART OF COFFEE CITY

ಜಾತಿ-ಧರ್ಮದ ಹೆಸರಲ್ಲಿ ಸಮಾಜದಲ್ಲಿ ಸಂಘರ್ಷ ಉಂಟು ಮಾಡುವ ಹುನ್ನಾರ : ಸಾಣೇಹಳ್ಳಿ ಶ್ರೀ ವಿಷಾದ

1 min read

ಚಿಕ್ಕಮಗಳೂರು: ನಾಡಿನಲ್ಲಿ ಶಾಂತಿ ಸೌಹಾರ್ದತೆಗೆ ಇದುವರೆಗೂ ಆದ್ಯತೆ ನೀಡಲಾಗುತ್ತಿತ್ತು. ಆದರೆ. ಇತ್ತೀಚೆಗೆ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಉಂಟು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.ತಾಲ್ಲೂಕಿನ ಎಸ್.ಕೊಪ್ಪಲು ಗ್ರಾಮದಿಂದ ನಿಡಘಟ್ಟ ಗ್ರಾಮದ ಗಾಂಧಿಗುಂಡಿವರೆಗೂ ರೋಹಿತ್ ಚಕ್ರ ತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿ ಕ್ಯಾತನಬೀಡು ಪ್ರತಿಷ್ಠಾನ, ಜನದನಿ ಸಂಘಟನೆ ಹಾಗೂ ಸಂಗಮ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಾಮರಸ್ಯದ ನಡಿಗೆ, ಜನಸಾಮಾನ್ಯರೆಡೆಗೆ ಜನಜಾಗೃತಿ ಪಾದಯಾತ್ರೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನನ್ನು ಮನುಷ್ಯನಂತೆ ಕಾಣುತ್ತಿಲ್ಲ, ಹೋರಾಟಗಾರರನ್ನು ಅನುಮಾನದಿಂದ ಕಾಣುವ ಸ್ಥಿತಿ ಇದೆ. ಇದೆ ಲ್ಲಕ್ಕೂ ಎದೆಯೊಡ್ಡಿ ಬದ್ಧತೆಯಿಂದ ಹೋರಾಟ ಮಾಡುವ ಅನಿವಾರ್ಯತೆ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೊಳ ಕು ತುಂಬಿಕೊಂಡಿದ್ದು, ಹೋರಾಟದ ಮೂಲಕ ಅಂಟಿರುವ ಕೊಳಕು ತೆಗೆಯಲು ಪ್ರತಿಯೊಬ್ಬರು ಕೈಜೋಡಿಸಬೇ ಕೆಂದು ತಿಳಿಸಿದರು.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಪಠ್ಯ ಪರಿಷ್ಕರಣೆ ಸಾಕಷ್ಟು ಗೊಂದಲಗಳಿಗೆ ಈಡಾಗಿದೆ. ಇದರ ವಿರುದ್ಧ ಅನೇಕರು ಧ್ವನಿ ಎತ್ತಿದ್ದಾರೆ. ವಿರೋಧ ವ್ಯಕ್ತವಾದ ಬಳಿಕ ಸರ್ಕಾರ ಪರಿಷ್ಕರಣೆ ಮಾಡಲು ಒಪ್ಪಿಕೊಂಡಿದೆ. ಪಠ್ಯದಲ್ಲಿರುವ ಅಷ್ಟು ತಪ್ಪುಗಳ ಪರಿಷ್ಕರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ ಏನು ಬೋಧನೆ ಮಾಡುತ್ತೇವೇ ಅದು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರಿಯಾದ ಇತಿಹಾಸ ಮತ್ತು ಚಾರಿತ್ಯವನ್ನು ಅವರಿಗೆ ಹೇಳಿಕೊಡಬೇಕು. ವಸ್ತು ನಿಷ್ಠ ಮತ್ತು ಸಮಾಜಮುಖಿಯಾಗಿರಬೇಕು. ಈ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಈ ಹೋರಾಟ ಯಾವುದೇ ಪಕ್ಷ, ವ್ಯಕ್ತಿಯ ವಿರುದ್ಧವಲ್ಲ, ಈ ನಾಡಿನ ಒಳತಿಗಾಗಿ, ಅನ್ಯಾಯದ ವಿರುದ್ಧ ಸರ್ಕಾರ ಎಚ್ಚೇತ್ತುಕೊಳ್ಳಬೇಕು ಎಂದರು.
ಹೊಳಲಕೆರೆ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, ಬಡತನ, ಅಸೂಯೆ ನಿವಾರಣೆಗೆ ಹೋರಾಡಿದಂತಹ ಬಸ ವಣ್ಣ, ಬುದ್ಧ, ಅಂಬೇಡ್ಕರ್ ಅಂತಹ ಮಹಾನೀಯರ ಸಾಧನೆಯನ್ನು ಪಠ್ಯದಿಂದ ತೆಗೆದು ಅವರಿಗೆ ಅವಮಾನ ಮಾಡು ವಂತಹ ಕೆಲಸ ಪ್ರಸ್ತುತ ನಡೆಯುತ್ತಿದ್ದು ಈ ವಿರುದ್ಧ ಸಮಾಜದ ಎಲ್ಲಾ ನಾಗೀಕರು ಒಗ್ಗಟ್ಟಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದರು.

ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಯಾವು ಪಕ್ಷವು ಮಕ್ಕಳ ಪಠ್ಯ ವಿಷಯದಲ್ಲಿ ಈ ರೀತಿಯ ಧ್ವಂದ್ವ ನಿಲುವುಗಳನ್ನು ಮಾಡಿರಲಿಲ್ಲ. ಪ್ರಜಾಪ್ರಭುತ್ವವಾಗಿ ಪಠ್ಯ ರಚನೆ ಮಾಡಿದ್ದರು. ಆದರೆ ಇಂದಿನ ಸರ್ಕಾರ ಬಂದಾಗಿನಿಂದ ಹಿಂದುತ್ವದ ಹೆಸರನ್ನು ಹೇಳಿಕೊಂಡು ಮಕ್ಕಳ ಪಠ್ಯದಲ್ಲೂ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿ ರುವುದು ವಿಷಾಧನಿಯ ಎಂದರು.
ಬೆಂಗಳೂರಿನ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಕ್ಕಳ ಪಠ್ಯದ ವಿಚಾರ ಹಾಗೂ ಸಮಾಜವನ್ನು ಸುಸ್ಥಿತಿ ಯಲ್ಲಿಡಲು ಮುಖ್ಯಮಂತ್ರಿಗಳು ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತರಾಗದಿದ್ದಲ್ಲಿ ಪರಿ ಷ್ಕರಣೆ ವಿರುದ್ಧ ಹೋರಾಟ ಮುಂದುವರೆಸಲು ಸಮಾಜ ನಾಗರಿಕರು ಪಣ ತೊಡಬೇಕಿದೆ ಎಂದರು.
ಪಾದಯಾತ್ರೆಯಲ್ಲಿ ಕ್ಯಾತನಬೀಡು ಪ್ರತಿಷ್ಟಾನದ ಗೌರವ ಕಾರ್ಯದರ್ಶಿ ರವೀಶ್ ಕ್ಯಾತನಬೀಡು, ಕಾರ್ಯದರ್ಶಿ ನಟ ರಾಜ್ ಎಸ್.ಕೊಪ್ಪಲು, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ನಿವೃತ್ತ ಅಧಿಕಾರಿ ರುದ್ರಪ್ಪ, ಸಾಹಿತಿ ಬಿ.ಚಂದ್ರೇ ಗೌಡ, ಗಾಯತ್ರಿ ಶಾಂತೇಗೌಡ, ವಿವಿಧ ಪಕ್ಷದ ಮುಖಂಡರಾದ ಎಚ್.ಎಚ್.ದೇವರಾಜ್, ಕೆ.ಟಿ.ರಾಧಾಕೃಷ್ಣ, ರೇಖಾಹುಲಿಯಪ್ಪಗೌಡ, ಬಿ.ಅಮ್ಜದ್, ಶಿವಾನಂದಸ್ವಾಮಿ, ರೇಣುಕಾರಾಧ್ಯ, ಮರ್ಲೆ ಅಣ್ಣಯ್ಯ, ಪಿ.ಸಿ.ರಾಜೇಗೌಡ ಸೇರಿದಂತೆ ಅನೇಕರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!