May 17, 2024

MALNAD TV

HEART OF COFFEE CITY

ಮಲೆನಾಡಲ್ಲಿ ನಿಲ್ಲದ ಕಾಡಾನೆ ಹಾವಳಿ, 16 ಆನೆಗಳ ಹಿಂಡಿನಿಂದ ದಾಂಧಲೆ

1 min read

ಕಾಫಿನಾಡ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಆನೆ ಹಾವಳಿ ಮಿತಿ ಮೀರುತ್ತಿದೆ. ಮೊನ್ನೆಯಷ್ಟೆ ಕಾಡಾನೆಗಳ ಹಿಂಡು ಮರಿಯನ್ನ ಕಾಫಿತೋಟದಲ್ಲಿ ಬಿಟ್ಟು ಹೋಗಿತ್ತು. ಇಂದು ಮತ್ತೊಂದು ತಂಡ ತನ್ನ ವಂಶದ ಜೊತೆ ಮೂಡಿಗೆರೆ ತಾಲೂಕಿನ ಕಾಫಿತೋಟದಲ್ಲಿ ದಾಂದಲೆ ನಡೆಸಿವೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಹೊಸಳ್ಳಿ ಗ್ರಾಮದ ಟಾಟಾ ಎಸ್ಟೇಟ್‍ನಲ್ಲಿ 16 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಆನೆಗಳ ಹಿಂಡು ಕಾಫಿತೋಟದಲ್ಲಿ ಸಾಲಾಗಿ ಸಾಗುತ್ತಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಜನ ಭಯಗೊಂಡಿದ್ದಾರೆ. ಗೋಣಿಬೀಡು ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಜಿ.ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ, ಮಲಸಾವರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಸುತ್ತು ಹೊಡೆಯುತ್ತಿವೆ. 16 ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಇದ್ದು ಕೆಲವೊಮ್ಮೆ ಜನಗಳ ಮೇಲೂ ಎಗರಿ ಬರುತ್ತಿವೆ. ಕಾಡಾನೆಗಳ ಹಿಂಡಿನಿಂದ ಈ ಭಾಗದಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ಸಂದರ್ಭದಲ್ಲಿ ಎಲ್ಲಿ ಆನೆಗಳು ಪ್ರತ್ಯಕ್ಷವಾಗುತ್ತವೋ… ದಾಳಿ ಮಾಡುತ್ತವೋ ಎಂದು ಕಂಗಾಲಾಗಿದ್ದಾರೆ. ಈಗಾಗಲೇ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವನ್ನು ಉಂಟುಮಾಡುತ್ತಿವೆ. ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಪೆÇೀರ್ಸ್ ಸಿಬ್ಬಂದಿಗಳು ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಅವು ಸ್ಥಳವನ್ನ ಬಿಟ್ಟು ಕದಲುತ್ತಿಲ್ಲ. ಅಲ್ಲಿಂದ ಇಲ್ಲಿಗೆ-ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಾ ಕಾಫಿ ತೋಟಗಳನ್ನು ಪುಡಿ ಮಾಡುತ್ತಿವೆ. ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಕಾಫಿ ತೋಟಗಳಿಗೆ ಹೋಗಲು ಭಯಪಡುವಂತಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!