May 20, 2024

MALNAD TV

HEART OF COFFEE CITY

ಚಿಕ್ಕಮಗಳೂರು ಶಾಮಿಯಾನ ಡೆಕೋರೇಷನ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಜಿ.ಸದಾಶಿವ ಮರು ಆಯ್ಕೆ

1 min read

 ಚಿಕ್ಕಮಗಳೂರು ಶಾಮಿಯಾನ ಡೆಕೋರೇಷನ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಜಿ.ಸದಾಶಿವ ಮೂರನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಡೆಕೋರೇಷನ್ ಶಾಮಿಯಾನ ಸೌಂಡ್ಸ್ ಮತ್ತು ಲೈಟಿಂಗ್ ಮಾಲೀಕರ ಸಂಘದ ಅಧ್ಯಕ್ಷ ಸಿ.ಜಿ.ಸದಾಶಿವ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ ಎಲ್ಲಾ ಸದಸ್ಯರು ಸಂಘಟನೆಯಲ್ಲಿ ತೋಡಗಿಸಿಕೊಂಡಾಗ ಮಾತ್ರ ನಮ್ಮ ಸಂಘವು ಮಾತ್ರ ಬಲಿಷ್ಠವಾಗುತ್ತದೆ ಎಂದರು.ನಮ್ಮ ಸಂಘಕ್ಕೆ ನಿವೇಶನ ನೀಡುವಂತೆ ಸ್ಥಳಿಯ ಶಾಸಕರಿಗೆ ಮನವಿ ಮಾಡಲಾಗುವುದು ಜಿಲ್ಲಾ ಡೆಕೋರೇಷನ್ ಸಂಘದ ಸದಸ್ಯರು ಕಡುಬಡತನದಿಂದ ಬಂದವರಾಗಿದ್ದು ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಾದ ಆಶ್ರಯ ಮನೆ, ಸಾಲಸೌಲಭ್ಯದಂತಹ ಸವಲತ್ತುಗಳನ್ನು ನೀಡುವ ಮೂಲಕ ಅಭಿವೃದ್ಧಿ ಹೋಂದಲು ಸಹಕಾರ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ತಿಳಿಸಿದರು.ಹಲವು ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದು, ನಮ್ಮ ಸಂಘದ ಹಿತದೃಷ್ಟಿಯಿಂದ ಕಾರ್ಯಗಾರ ಸಮಿತಿ ಸದಸ್ಯರೆಲ್ಲರು ಒಗ್ಗಟ್ಟಿನಿಂದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತೇನೆ ಎಂದರು.

ಸಂಘದ ಗೌರವಾಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ರಾತ್ರಿ-ಹಗಲು, ಮಳೆ ಬಿಸಿಲೆನ್ನದೇ ಶುಭ ಸಮಾರಂಭದಿಂದ ಹಿಡಿದು ಸಾವಿನ ಮನೆವರೆಗೂ ಶಾಮಿಯಾನ ಹಾಕುತ್ತೇವೆ, ಕೊರೋನಾದಂತಹ ಸಂಕಷ್ಟದ ದಿನಗಳಲ್ಲಿ ಡೆಕೋರೇಷನ್, ಲೈಟಿಂಗ್, ಶಾಮಿಯಾನದವರಿಗಾಗಲಿ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ದೋರೆಯಲಿಲ್ಲ, ನಗರ, ಹಳ್ಳಿ, ಗುಡ್ಡಗಾಡೆನ್ನದೇ ಕೆಲಸವನ್ನು ಮಾಡುವ ನಾವು ಇರಲು ಮನೆ ಇಲ್ಲದೆ ಕಷ್ಟದ ದಾರಿಯಲ್ಲಿಯೇ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಸರ್ಕಾರ ಸವಲತ್ತುಗಳು ನೀಡಬೇಕೆಂದು ಜಿಲ್ಲೆಯ ಶಾಮಿಯಾನ ಒಕ್ಕೂಟದ ವತಿಯಿಂದ ಸರ್ಕಾರಕ್ಕೆ ವಿನಂತಿ ಮಾಡಿದರು.ಸರ್ಕಾರದ ಕೆಲಸ ದೇವರ ಕೆಲಸವೆಂದು ತಮ್ಮಲ್ಲಿರು ಅಲ್ಪಸ್ವಲ್ಪ ಬಂಡವಾಳದ ಜೊತೆಗೆ ಸಾಲವನ್ನು ಮಾಡಿಕೊಂಡು ಕೆಲಸವನ್ನು ಮಾಡುವ ನಮಗೆ ಹಲವು ವರ್ಷಗಳಿಂದ ಉಳಿಸಿಕೊಂಡಿರುವ ಬಾಕಿ ಹಣವನ್ನು ನೀಡಬೇಕೆಂದು ಸಂಘದ ಪರವಾಗಿ ಮನವಿ ಮಾಡಿದರು.ಕಾರ್ಯದರ್ಶಿ ಎ.ಆನಂದ್ ಮಾತನಾಡಿ 2020ರಲ್ಲಿ ನಮ್ಮ ಸಂಘವು ಪ್ರಾರಂಭವಾಗಿದ್ದು, 350 ಸದಸ್ಯರನ್ನು ಹೊಂದಿರುವ ನಮ್ಮ ಸಂಘಕ್ಕೆ ಯಾವುದೇ ರೀತಿಯ ಸರ್ಕಾರಿ ಸವಲತ್ತು ದೋರೆಯದ ಕಾರಣ ಎಲ್ಲಾ ಸದಸ್ಯರು ಒಗ್ಗೂಡಿ ಸಂಘಕ್ಕೆ ನಿವೇಶನ ನೀಡುವಂತೆ ಶಾಸಕರಿಗೆ ಮನವಿಯನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಮಸ್ಯೆಗೆ ಸ್ಪÀಂದಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಜೇಗೌಡ, ಸಹಕಾರ್ಯದರ್ಶಿ ಜೆ.ಕೆ.ರವಿಕುಮಾರ್, ಖಜಾಂಚಿ ವಿವಿಲ್‍ಬೆನ್ನಿಸ್, ಸಲಹೆಗಾರರಾದ ಸಿ.ಪುನೀತ್‍ಕುಮಾರ್, ಸಂಚಾಲಕರಾದ ವೈ.ರಮೇಶ್, ನಿರ್ದೇಶಕರುಗಳಾದ ಟಿ.ಆರ್.ಕೊದಂಡರಾಮ, ಪಿ.ಆರ್.ಕುಮಾರ್, ಪರಶುರಾಮ್ ಜೋಷಿ, ತಬ್ರೇಜ್, ಮಂಜುನಾಥ, ಹೆಚ್.ಎಂ.ನಟರಾಜ, ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!