May 14, 2024

MALNAD TV

HEART OF COFFEE CITY

ಗ್ರಾ.ಪಂ.ಸದಸ್ಯರ ಗೌರವ ಹೆಚ್ಚಿಸಲು ಪ್ರಯತ್ನಿಸುವೆ: ಪ್ರಾಣೇಶ್

1 min read

ಕಡೂರು: ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ವಿಧಾನಪರಿಷತ್‌ನ ಉಪಸಭಾಪತಿ ಹಾಗೂ ವಿಧಾನಪರಿಷತ್ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ತಿಳಿಸಿದರು.ತಾಲೂಕಿನ ಖಂಡುಗದಹಳ್ಳಿ ಶ್ರೀ ಸೋಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರ ವೇತನ ರೂ ೧ ಸಾವಿರ ಇದ್ದು. ಇದನ್ನು ರೂ ೨೫೦೦ಕ್ಕೆ ಹೆಚ್ಚಳ ಮಾಡುವುದು ಮತ್ತು ಗ್ರಾಪಂ ಅಧ್ಯಕ್ಷರ ವೇತನ ರೂ ೫ ಸಾವಿರ ಹಾಗೂ ಉಪಾಧ್ಯಕ್ಷರ ವೇತನ ರೂ ೩ ಸಾವಿರದವರೆಗೆ ಹೆಚ್ಚಳ ಮಾಡಲು ಈಗಾಗಲೇ ಸರಕಾರದ ಮಟ್ಟದಲ್ಲಿ ತಮ್ಮ ಮನವಿಯ ಮೇರೆಗೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತಾವು ವಿ.ಪ ಸದಸ್ಯರಾಗಿದ್ದಾಗ ಈ ವೇತನ ಹೆಚ್ಚಳದ ಬಗ್ಗೆ ಮನವಿ ಮಾಡಿದ್ದರೂ ಅದಕ್ಕೆ ಸಿದ್ದರಾಮಯ್ಯ ಅವರು ಯಾವುದೇ ಸ್ಪಂದನೆ ವ್ಯಕ್ತಪಡಿಸಲಿಲ್ಲ. ಇದೀಗ ತಮ್ಮದೇ ಪಕ್ಷದ ಸರ್ಕಾರವಿದ್ದು ವೇತನ ಹೆಚ್ಚಳದ ಪ್ರಕ್ರಿಯೆ ಸುಲಭವಾಗಿ ನಡೆಯಲಿದೆ ಕೊರೋನದಿಂದ ಕುಸಿದಿದ್ದ ಆರ್ಥಿಕ ಚಟುವಟಿಕೆಗಳು ಪೂರ್ಣಚೇತನಗೊಂಡಿದ್ದು ವೇತನ ಹೆಚ್ಚಳ ಸುಲಭ ಸಾಧ್ಯ ಎಂದರು.
ವಿಧಾನ ಪರಿಷತ್ ಚುನಾವಣೆ ಮತದಾರರೊಂದಿಗಿನ ಪರಿಚಯ ಮತ್ತು ವಿಶ್ವಾಸದ ಮೇಲೆ ನಡೆಯಲಿದೆ ತಾವು ಸ್ಥಳೀಯ ಜನಪ್ರತಿನಿಧಿಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿ, ತಾ.ಪಂ.ಜಿ.ಪo ಹಾಗೂ ಪುರಸಭೆ, ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸದಸ್ಯರ ಹಿತವನ್ನು ಕಾಪಾಡುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂಧಿಸುವುದು ತಮ್ಮ ಧರ್ಮ ಎಂದರು.
ವಿರೋಧ ಪಕ್ಷದ ಜನರು ತಮ್ಮನ್ನು ವೈಟ್ ಕಾಲರ್ ರಾಜಕಾರಣಿ ಎಂದು ಅಲ್ಲಲ್ಲಿ ಬಣ್ಣಿಸುತ್ತಿದ್ದು ಇದು ಅವರ ಸೋಲಿನ ಹತಾಶೆಯಿಂದ ಬರುತ್ತಿರುವ ಮಾತುಗಳಾಗಿವೆ ಜನಸಾಮಾನ್ಯರಿಗೆ ಸುಲಭವಾಗಿ ಸಿಕ್ಕುವ ರಾಜಕಾರಣಿ ಸರಳತೆಯನ್ನು ಸದಾ ಮೈಗೂಡಿಸಿಕೊಂಡಿದ್ದೇನೆ ತಮಗೆ ಮತ್ತು ತಮ್ಮ ಪತ್ನಿಗೆ ಕೊರೊನಾ ಬಂದ ಸಂದರ್ಭ ಅವಕಾಶ ಇದ್ದರು ತಾವು ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಮೇಲ್ಪಂಕ್ತಿ ಹಾಕಿದ್ದೇನೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯು ಮುಂದಿನ ಜಿ.ಪಂ.ತಾ.ಪo ಚುನಾವಣೆಗೆ ದಿಕ್ಸೂಚಿ ಎಂದು ಬಣ್ಣಿಸಿದ ಅವರುಕಡೂರು ಕ್ಷೇತ್ರದಲ್ಲಿ ನೇರ ನಡೆಗೆ ಹೆಸರಾದ ಶಾಸಕ ಬೆಳ್ಳಿಪ್ರಕಾಶ್ ಈ ಚುನಾವಣೆಗೆ ಅಹನಿರ್ಷಿ ದುಡಿಯುತ್ತಿದ್ದು ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಮತ್ತು ರಾಜ್ಯ ಹಾಗೂ ಕೇಂದ್ರದಲ್ಲಿ ಅಭಿವೃದ್ಧಿ ಕೆಲಸಗಳು ತಮ್ಮ ಗೆಲುವಿಗೆ ಪೂರಕವಾಗಿ ಕೈ ಹಿಡಿಯಲಿವೆ ಎಂದರು.
ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಮೂರು ವರ್ಷ ಏಳು ತಿಂಗಳ ತಮ್ಮ ಅಧಿಕಾರ ಅವಧಿಯಲ್ಲಿ ಪಕ್ಷಪಾತಕ್ಕೆ, ಜಾತಿಗೆ, ಧರ್ಮಕ್ಕೆ ಎಂದಿಗೂ ಬೆಲೆ ಕೊಟ್ಟಿಲ್ಲ. ಸರ್ವ ಜನರ ಸುಂದರ ತೋಟ ಕಡೂರು ಕ್ಷೇತ್ರ ಎನ್ನುವಂತೆ ದುಡಿಯುತ್ತಿದ್ದು ಅನೇಕ ಅಭಿವೃದ್ಧಿ ಕೆಲಸಗಳನ್ನು ಪ್ರತಿ ಗ್ರಾ.ಪಂ ಮಟ್ಟದಲ್ಲಿಯೂ ಕೈಗೊಳ್ಳಲಾಗಿದೆ ತಮ್ಮ ಅವಧಿಯಲ್ಲಿ ೧೬೦ ಕೋಟಿ ಮೌಲ್ಯದ ರಾಷ್ಟರಾಷ್ಟಿoಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ನಡೆಸಲಾಗಿದೆ ಇದು ಹೆಮ್ಮೆಯ ಸಂಗತಿ, ಬಯಲುಸೀಮೆ ರಾಜಕಾರಣ ವಿಶಿಷ್ಟವಾದದ್ದು, ಪ್ರಾಣೇಶ್ ಅವರ ಗೆಲುವಿಗೆ ಪಕ್ಷದ ಬೆಂಬಲಿತ ಎಲ್ಲಾ ಸದಸ್ಯರು ಕಟ್ಟಾಳುಗಳ ರೀತಿ ದುಡಿಯುತ್ತಿದ್ದಾರೆ. ಕ್ಷೇತ್ರಕ್ಕೆ ಮಂಜೂರಾಗಿ ಕಾಮಗಾರಿಯ ಹಂತದಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆ, ಭದ್ರಾ ಉಪಕಣಿವೆ ಯೋಜನೆ ಹಾಗೂ ಮತ್ತಿತರ ಅಭಿವೃದ್ದಿ ಕಾಮಗಾರಿಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಪ್ರಾಣೇಶ್ ಅವರ ಕೊಡುಗೆಯು ಅನನ್ಯವಾಗಿದೆ ಎಂದು ಸ್ಮರಿಸಿದರು.ಪ್ರಾಸ್ತವಿಕವಾಗಿ ಟಿ.ಆರ್.ಲಕ್ಕಪ್ಪ ಅವರು ಮಾತನಾಡಿದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಳ್ಳಂಬಳಸೆ ಮಹಾಶಕ್ತಿ ಕ್ಷೇಂದ್ರದ ಮಹೇಶ್ವರಪ್ಪ ವಹಿಸಿದ್ದರು. ಹೆಚ್.ಸಿ.ಕಲ್ಮರುಡಪ್ಪ, ಹೆಚ್.ಎಂ.ತಮ್ಮಯ್ಯ, ರವೀಂದ್ರ
ಬೆಳವಾಡಿ,ಎo.ಪಿ.ಸುದರ್ಶನ್, ಬಿ.ಪಿ.ದೇವಾನಂದ್, ಕೆ.ಆರ್.ಮಹೇಶ್‌ಒಡೆಯರ್, ಹೆಚ್.ಎಂ.ರೇವಣ್ಣಯ್ಯ,ಸವಿತಾ ರಮೇಶ್, ಮಾಲಿನಿ ಬಾಯಿ ರಾಜನಾಯ್ಕ, ಪುಷ್ಪಲತಾ ಸೋಮೇಶ್ ಮತ್ತು ನಗರ ಘಟಕದ ಅಧ್ಯಕ್ಷ ಕೆ.ಬಿ.ಸೋಮೇಶ್ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!