May 7, 2024

MALNAD TV

HEART OF COFFEE CITY

ಪ್ರೀತಿ ವಿಶ್ವಾಸರ ರಾಜಕಾರಣ ಮಾಡಿದ್ದೇನೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕ್ಷೇತ್ರದ ಜನರ ಮೇಲಿದೆ- ಸಿ.ಟಿ.ರವಿ

1 min read

ಚಿಕ್ಕಮಗಳೂರು-ಸಂಬಂಧ ಕಟ್ಟುವ ಪ್ರೀತಿ ವಿಶ್ವಾಸರ ರಾಜಕಾರಣ ಮಾಡಿದ್ದೇನೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕ್ಷೇತ್ರದ ಜನರ ಮೇಲಿದೆ ಎಂದು ಶಾಸಕರು, ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಹೇಳಿದರು. ಅವರು  ಕ್ಷೇತ್ರದ ಸರಪನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ, ಮತಯಾಚನೆ ಮಾಡಿ ಮಾತನಾಡಿದರು.ನ್ಯಾಯದ ತಕ್ಕಡಿಯನ್ನು ನೀವು ಇಟ್ಟುಕೊಳ್ಳಿ, ಸಿ.ಟಿ.ರವಿ ಒಳ್ಳೆ ಕೆಲಸ ಮಾಡಿದ್ದರೆ, ಬಿಜೆಪಿ ಬಂದ ಮೇಲೆ ಊರಲ್ಲಿ ನೆಮ್ಮದಿ ನೆಲೆಸಿದ್ದರೆ ಓಟ್ ಹಾಕಿ ಎಂದು ವಿನಂತಿಸಲು ಬಂದಿದ್ದೇನೆ ಎಂದರು.
15 ವರ್ಷದ ಹಿಂದೆ ಈ ಭಾಗ ನಮ್ಮ ಕ್ಷೇತ್ರಕ್ಕೆ ಸೇರಿದಾಗ ನಾನು ಮನೆ ಮಗ ಇದ್ದಂತೆ, ಒಡ ಹುಟ್ಟಿದ ಅಣ್ಣ ತಮ್ಮ ಇದ್ದಂತೆ, ಕಷ್ಟಕ್ಕೆ ಹೆಗಲು ಕೊಡುತ್ತೇನೆ ಎಂದಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ರಾಜ್ಯ, ರಾಷ್ಟ್ರದ ಜವಾಬ್ದಾರಿ ನಡುವೆ ಸಂಬಂಧ ಮರೆತಿಲ್ಲ. ಇಂದೂ ಸಹ ಅದೇ ಸಂಬಂಧವನ್ನು ಇಟ್ಟುಕೊಂಡೇ ಬಂದಿದ್ದೇನೆ. ನಮಗೂ ಅದೇ ಭಾವನೆ ಇರುವವರು ಆಶೀರ್ವಾದ ಮಾಡಬೇಕು ಎಂದರು.ನಾನು ಜನತೆಗೆ ಪ್ರೀತಿಯನ್ನು ಹಂಚಿದ್ದೇನೆ. ಕೆಲವರು ವಿಷವನ್ನೇ ಹಂಚುತ್ತಾರೆ. ಯಾವ ಊರಿನಲ್ಲೂ ಜಾತಿ ಜಗಳವಾಗಲು ಅವಕಾಶ ಕೊಟ್ಟಿಲ್ಲ. ಒಂದು ಕಾಲದಲ್ಲಿ ಊರೂರಿನಲ್ಲಿ ರಾಜಕೀಯ ಕಾರಣಕ್ಕೆ ಹೊಡೆದಾಟ ನಡೆಯುತ್ತಿತ್ತು. ನಾನು ಬಂದ ಮೇಲೆ ಎಲ್ಲಿಯೂ ರಾಜಕೀಯ ಕಾರಣಕ್ಕೆ ಜಗಳವಿಲ್ಲ. ರಾಜಕೀಯ ಸಂಸ್ಕøತಿಯನ್ನು ಬದಲಿಸಿದ್ದೇನೆ. ಜನತೆ ಕೊಟ್ಟ ರಾಜಕೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದರು.ಮೆಡಿಕಲ್ ಕಾಲೇಜು, ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆ, ಕಡೂರು-ಚಿಕ್ಕಮಗಳೂರು ಹೈವೇ, ಚಿಕ್ಕಮಗಳೂರು-ಬೇಲೂರು ಚತುಷ್ಪತ ಹೆದ್ದಾರಿ ಹಾಗೂ ಚಿಕ್ಕಮಗಳೂರು ಬೇಲೂರು-ಹಾಸನ ರೈಲ್ವೇ ಯೋಜನೆಗೆ ಮಂಜೂರಾತಿ, ದಂಟರಮಕ್ಕಿ ಕೆರೆ ಅಭಿವೃದ್ಧಿ, ಹೊಸ ಡಿಸಿ ಕಾಂಪ್ಲೆಕ್ಸ್ ಹಾಗೂ ಕೋರ್ಟ್ ಕಾಂಪ್ಲೆಕ್ಸ್ ಕಾಮಗಾರಿ, ಹೊಸ ವಿವಿ ಮಂಜೂರಾತಿ, ಸಾವಿರಾರು ಜನರಿಗೆ ಕೆಲಸ ಕೊಡಿಸಬೇಕೆಂದು ಬಜೆಟ್‍ನಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗೆ ಮಂಜೂರಾತಿ ಕೊಡಿಸಿದ್ದೇನೆ ಇದೆಲ್ಲ ಸಾಧ್ಯವಾಗಿದ್ದು ಜನ ಕೊಟ್ಟ ರಾಜಕೀಯ ಅಧಿಕಾರದಿಂದ ಎಂದರು.

ಫಸಲು ಕೊಡುವ ತೆಂಗಿನ ಮರಕ್ಕೆ ನೀರು, ಗೊಬ್ಬರ ಹಾಕಿದರೆ ಇನ್ನಷ್ಟು ಫಸಲು ಕೊಡುತ್ತದೆ. ಬೇರು ಸಹಿತ ಕಿತ್ತುಬಿಟ್ಟರೆ ನಷ್ಟ ಯಾರಿಗೆ? ಕೆಲವು ಹೊಟ್ಟೆ ಕಿಚ್ಚಿನ ಜನ ಬೇರು ಒಣಗಿಸಬೇಕು ಎಂದು ಸಂಚು ಮಾಡುತ್ತಿದ್ದಾರೆ. ಆ ದೊಡ್ಡ ಜನ ಯಾವ ಊರಿಗೆ ಏನು ಮಾಡಿದ್ದೇವೆ ಎಂದು ಹೇಳಲಿ. ಅವರೂ ಸಹ ರಾಜಕೀಯ ಅಧಿಕಾರ ಅನುಭವಿಸಿದವರೇ, ಯಾವ ಊರಿಗೆ ಅಂಬೇಡ್ಕರ್ ಭವನ ಮಾಡಿಸಿದ್ದಾರೆ? ಯಾವ ಊರಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ ಇದೆಲ್ಲವನ್ನೂ ಬಿಚ್ಚಿ ಹೇಳುವ ಕಾಲವಿದು ಎಂದರು.
ನಾನು ಸಂಬಂಧ ಕಟ್ಟುವ ಕೆಲಸ ಮಾಡಿದ್ದೇನೆ. ಚಿಕ್ಕಮಗಳೂರು ಹಬ್ಬ, ಸ್ನೇಹ ಮಿಲನ ಕಾರ್ಯಕ್ರಮಗಳನ್ನು ಸಂಬಂಧ ಕಟ್ಟಲೆಂದೇ ಮಾಡಿದ್ದು, ನನಗೆ ಹೆಮ್ಮೆ ಇದೆ. ಒಂದು ಸಣ್ಣ ಮಗು ಸಹ ಸಿ.ಟಿ.ರವಿ ಎನ್ನುತ್ತಾರೆ. ಜನರಿಗೆ ಅಧಿಕಾರದ ಭಯ ಇಲ್ಲ. ಒಂದು ಕಾಲದಲ್ಲಿ ಅಧಿಕಾರಸ್ಥರನ್ನು ಕಂಡರೆ ಭಯ ಪಡುವ ವಾತಾವರಣ ಇತ್ತು. ಇಂದು ಭಯ ಪಡುವ ಸ್ಥಿತಿ ಇಲ್ಲ. ಬಿಜೆಪಿ ಮುಖಂಡರುಗಳಾದ ಈಶ್ವರಳ್ಳಿ ಮಹೇಶ್, ಬೆಳವಾಡಿ ರವೀಂದ್ರ, ಪ್ರಕಾಶ್ ಇತರರು ಇದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!