May 6, 2024

MALNAD TV

HEART OF COFFEE CITY

ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭೂತಪೂರ್ವ ಜನಬೆಂಬಲ: ಗಾಯಿತ್ರಿ ಶಾಂತೇಗೌಡ

1 min read

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತದಾರರಿಂದ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ತಿಳಿಸಿದರು.
ಅವರು ಲಕ್ಯಾ ಹೋಬಳಿಯ ಲಕ್ಯಾ, ಬಿಳೇಕಲ್ಲಳ್ಳಿ, ಹಿರೇಗೌಜ, ಲಕ್ಕಮ್ಮನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಗಾಣದಾಳು, ಕ್ಯಾತನಬೀಡು ಗಾಮದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಪರವಾಗಿ ಮತ ಯಾಚಿಸಿ ನಂತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲೆಯ ಶೃಂಗೇರಿ, ತರೀಕೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮತ ಪ್ರಚಾರದಲ್ಲಿ ಭಾಗವಹಿಸಿದಾಗ ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ, ಹಲವು ನೀರಾವರಿ ಯೋಜನೆ, ಚರಂಡಿ, ರಸ್ತೆ ಸೇರಿದಂತೆ ಅಭಿವೃದ್ದಿ ಕೈಗೊಳ್ಳುವಲ್ಲಿ ಬಿಜೆಪಿ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಚುನಾವಣೆ ನಿಮಿತ್ತ ಈಗ ಹತ್ತಾರು ಲೋಡ್ ಸಿಮೆಂಟ್ ಇಳಿಸುತ್ತಿದ್ದಾರೆ ಇದುವರೆಗೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿ, ೨೦ ವರ್ಷಗಳಿಂದ ಅಭಿವೃದ್ದಿ ಮಾಡದ ಶಾಸಕ ಸಿ.ಟಿ ರವಿಯನ್ನು ತಿರಸ್ಕರಿಸಿ ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಉತ್ತಮ ಲೀಡ್‌ನಲ್ಲಿ ವಿಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿ ಭೇದ ಮರೆತು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್‌ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಿಂದುತ್ವ ಭಾವನಾತ್ಮಕ ವಿಚಾರದಲ್ಲಿ ಮತ ಸೆಳೆಯುವ ಪ್ರಯತ್ನ ಈ ಚುನಾವಣೆಯಲ್ಲಿ ಫಲಿಸುವುದಿಲ್ಲ ಅಭಿವೃದ್ದಿ ಶೂನ್ಯವಾಗಿದೆ ಮುಂದಿನ ೧೦ ವರ್ಷ ಅಧಿಕಾರ ನೀಡಿದರು ಯಾವುದೇ ಪ್ರಯೋಜನವಾಗುವುದಿಲ್ಲ ಅವರ ಹಣಬಲ, ತೋಳ್ಬಲ ನಡೆಯುವುದಿಲ್ಲ ಜನರೇ ಸ್ವತಃ ದೇಣಿಗೆ ನೀಡಿ ತಮ್ಮಯ್ಯಗೆ ಬೆಂಬಲಿಸುತ್ತಿದ್ದಾರೆ ಸುಮಾರು ರಾಜ್ಯದಲ್ಲಿ ೧೩೦ ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಸದೃಢ ಸರ್ಕಾರ ರಚನೆ ಮಾಡುತ್ತದೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಮಾತನಾಡಿ ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಪ್ರಚಾರಕ್ಕೆ ಕರೆತಂದು ಜನರು ಸಂಭ್ರಮಿಸುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಇದು ಶುಭಸೂಚನೆಯಾಗಿದ್ದು ೨೦೦೪ ರ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆ ಎಲ್ಲಾ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಲ್ಲಿ ಬಲವಿದೆ ಎಂಬAತೆ ೮ ಅಭ್ಯರ್ಥಿ ಆಕಾಂಕ್ಷಿಗಳು ಕೆಲಸ ಮಾಡುತ್ತಿರುವುದೇ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಎದೆಗೆ ಬಿದ್ದ ಅಕ್ಷರ, ನೆಲಕ್ಕೆ ಬಿದ್ದ ಮಳೆ, ಕಾಂಗ್ರೆಸ್‌ಗೆ ಬಿದ್ದ ಮತ ಎಂದು ವ್ಯರ್ಥವಾಗುವುದಿಲ್ಲ ಕಾಂಗ್ರೆಸ್‌ಗೆ ಮತ ದೇಶಕ್ಕೆ ಹಿತ ಎಂಬ ಘೋಷಣೆಯೊಂದಿಗೆ ಬಡವರ, ದೀನದಲಿತರಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಮತದಾರರ ಸಂಕಷ್ಟಗಳಿಗೆ ನೆರವಾಗಿದ್ದಾರೆ ಆದರೆ ಶಾಸಕರು ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಭಾವನಾತ್ಮಕ ವಿಚಾರಗಳಿಗೆ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇಡೀ ಕ್ಷೇತ್ರದಾದ್ಯಂತ ಜನ ಬೆಂಬಲ ವ್ಯಕ್ತವಾಗುತ್ತಿರುವುದು ನನ್ನ ಗೆಲುವಿಗೆ ಸಹಕಾರಿಯಾಗುತ್ತದೆ ಕಾಂಗ್ರೆಸ್ ಪಕ್ಷ ಆಡಳಿತಾವಧಿಯಲ್ಲಿ ಕೊಟ್ಟಂತಹ ಉಚಿತ ಅಕ್ಕಿ, ಇಂದಿರಾ ಕ್ಯಾಂಟೀನ್, ಹಲವು ಭಾಗ್ಯಗಳನ್ನು ಕೊಟ್ಟಿದ್ದು ಈ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಶಾಸಕರು ಅವರ ಮನೆ ಅಭಿವೃದ್ದಿ ಮಾಡಿದ್ದಾರೆ ಹೊರತು ಬಡವರಿಗೆ ಒಂದು ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ವಕ್ತಾರರಾದ ಹೆಚ್.ಹೆಚ್ ದೇವರಾಜ್, ರೇಖಾಹುಲಿಯಪ್ಪಗೌಡ, ಗ್ರಾಮಸ್ಥರಾದ ಡಿ.ಎಂ ಕೃಷ್ಣೇಗೌಡ, ವಿನಾಯಕ, ಲಕ್ಯಾ ಬಸವರಾಜು, ನಾಗರಾಜು, ಯೋಗೀಶ್, ಗಂಗಾಧರ,ಈಶ್ವರಯ್ಯ, ಪ್ರಕಾಶ್ ಮತ್ತಿತರರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!