May 17, 2024

MALNAD TV

HEART OF COFFEE CITY

ಕಾರ್ಯಕರ್ತನ ಜೊತೆ ನಾನಿದ್ದೇನೆ ಕಳೆದುಕೊಂಡಲ್ಲಿಂದಲೇ ಗಳಿಸಿಕೊಳ್ಳೋಣ.ಸಿ.ಟಿ.ರವಿ

1 min read

ಚಿಕ್ಕಮಗಳೂರು-ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗಾದ ಸೋಲು ಅಭಿವೃದ್ಧಿ ರಾಜಕಾರಣ ಮತ್ತು ಹಿಂದುತ್ವಕ್ಕಾದ ಸೋಲಾಗಿದೆ. ಇದರಿಂದ ಕ್ಷೇತ್ರದ ಜನರಿಗೆ ದೊಡ್ಡ ನಷ್ಟವುಂಟಾಗಿದೆ ಎಂದು ಪಕ್ಷದ ಕಾರ್ಯಕರ್ತರು, ಮುಖಂಡರು ಅಭಿಪ್ರಾಯಿಸಿದರು.ಚುನಾವಣೆಯಲ್ಲಿ ಉಂಟಾದ ಸೋಲಿನ ಬಗ್ಗೆ ಪಕ್ಷದ ಕಚೇರಿ ಪಾಂಚಜ್ಯದಲ್ಲಿ ನಡೆದ ಅವಲೋಕನ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ಬಹುತೇಕರು ಭಾವುಕರಾಗದರು. ಕೆಲವರು ದುಃಖದಿಂದಲೇ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.ಜಾತಿ ಹೆಸರಲ್ಲಿ ನಿರಂತರವಾಗಿ ನಡೆದ ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಯಿಂದ ಬಿಜೆಪಿ ಸೋತಿರುವುದು ನಿಜಕ್ಕೂ ದುರದೃಷ್ಟಕರ. ಇದು ಸಿಟಿ ರವಿ ಅವರ ಸೋಲಲ್ಲ ಅಭಿವೃದ್ಧಿ ರಾಜಕಾರಣ ಮತ್ತು ಹಿಂದುತ್ವದ ಸೋಲು ಎಂದು ಬಿಜೆಪಿ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನ ನಕಲಿ ಗ್ಯಾರಂಟಿ ಕಾರ್ಡುಗಳು ಹಾಗೂ ಶಾಸಕರ ಕುರಿತಂತೆ ವ್ಯವಸ್ಥಿತವಾಗಿ ರೂಪಿಸಿದ ಸುಳ್ಳು ಸುದ್ದಿಗಳ ಅಪಪ್ರಚಾರ ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ತಡೆಯೊಡ್ಡಿರುವುದು ದುಃಖಕರ ಎಂದು ವಿಷಾದ ವ್ಯಕ್ತಪಡಿಸಿದರು.
ವಿರೋಧಪಕ್ಷಗಳ ಅಪವಿತ್ರ ಮೈತ್ರಿ, ಅಭ್ಯರ್ಥಿ ಕಣದಲ್ಲಿದ್ದರು ಠೇವಣಿ ಸಿಗದಂತೆ ನೋಡಿಕೊಂಡ ಕೆಲವು ಜೆಡಿಎಸ್ ಮುಖಂಡರುಗಳ ಕುತಂತ್ರ ರಾಜಕಾರಣದ ಮುಂದೆ ಪ್ರೀತಿ ಮತ್ತು ಸಿದ್ದಾಂತದ ರಾಜಕಾರಣ ಸೋತಿದೆ ಎಂದು ಬಹುತೇಕರು ಹೇಳಿದರು.
ಗೆದ್ದೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದ ಕಾರಣಕ್ಕೆ ಕೆಲವು ಸಣ್ಣ, ಸಣ್ಣ ವಿಚಾರಗಳನ್ನು ನಿರ್ಲಕ್ಷಿಸಿದ್ದು, ಇನ್ನೂ ಕೆಲವು ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಮುಳುವಾಯಿತು ಎಂದು ಹಲವರು ಹೇಳಿದರು. ಕೆಲವರು ಅಭಿಪ್ರಾಯ ಹಂಚಿಕೊಳ್ಳುವಾಗಲೇ ದುಃಖದಿಂದ ಕಣ್ಣೀರಿಟ್ಟರು. ಅವರನ್ನು ಸಿ.ಟಿ.ರವಿ ಅವರೇ ಸಮಾಧಾನ ಪಡಿಸಿದರು.

 

ಈ ವೇಳೆ ಮಾತನಾಡಿದ ರವಿ, ನಾವು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವರಲ್ಲ ಸಿಧ್ದಾಂತಕ್ಕಾಗಿ ಬಂದವರು. ಅಧಿಕಾರ ಇಂದು ಬರಬಹುದು ನಾಳೆ ಹೋಗಬಹುದು.ಸಿದ್ಧಾಂತ ಶಾಶ್ವತ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದರು ಧೈರ್ಯತುಂಬಿದರು.
ಸಿದ್ಧಾಂತದೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಮುಂದೆ ಮಾಡಿಕೊಳ್ಳೋದಿಲ್ಲ. ಸುಳ್ಳು ಸುದ್ದಿಗಳ ಭರಾಟೆ ಮತ್ತು ಅಪಪ್ರಚಾರಗಳಿಂದ ಸೋತಿರಬಹುದು ಆದರೆ ಕಳೆದ ಬಾರಿಗಿಂತ ಒಂಭತ್ತು ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿದ್ದೇವೆ. ಕಳೆದುಕೊಂಡಲ್ಲಿಂದ ಮತ್ತೆ ಗಳಿಸಿಕೊಳ್ಳೋಣ ಎಂದರು.ಕಾರ್ಯಕರ್ತರ ಸಂಕಷ್ಟಕ್ಕೆ ಸದಾ ಧ್ವನಿ ಆಗುತ್ತೇನೆ. ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮತ್ತೆ ಬೂತ್ ಗಟ್ಟಿಗೊಳಿಸೋಣ ಮತ್ತೆ ಸಂಘಟನೆ ಗಟ್ಟಿಗೊಳಿಸೋಣ. ಅಧಿಕಾರ ಇದ್ದಾಗ ರಾಜ ಧರ್ಮ ಪಾಲಿಸಿದ್ದೇನೆ. ಯಾರೊಬ್ಬರಿಗೂ ತೊಂದರೆಯಾಗದ ರೀತಿಯಲ್ಲಿ ಅಧಿಕಾರ ನಡೆಸಿದ್ದೇನೆ ಎಂದರು.ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮಾಜಿ ಸಿ.ಡಿ.ಎ ಅಧ್ಯಕ್ಷ ಕೋಟೆ ರಂಗನಾಥ್, ವಕ್ತಾರ ಟಿ.ರಾಜಶೇಖರ್, ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿಮಹೇಶ್, ಜಿ.ಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ್, ಕೆ.ಆರ್.ಅನಿಲ್‍ಕುಮಾರ್, ರವೀಂದ್ರಬೆಳವಾಡಿ, ದೇವರಾಜಶೆಟ್ಟಿ ಇತರರು ಇದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!