May 8, 2024

MALNAD TV

HEART OF COFFEE CITY

ದೇಶವನ್ನು ಯಾರು ದುಡಿದು ಕಟ್ಟುತ್ತಾರೋ ಅವರ ಭವಿಷ್ಯದ ಬಗ್ಗೆ ಚರ್ಚೆ ಮಾಡುವ ಮಹತ್ವದ ದಿನ ಕಾರ್ಮಿಕರ ದಿನಾಚರಣೆಯಾಗಿದೆ- ರೇಣುಕಾರಾಧ್ಯ

1 min read

ಚಿಕ್ಕಮಗಳೂರುದೇಶವನ್ನು ಯಾರು ದುಡಿದು ಕಟ್ಟುತ್ತಾರೋ ಅವರ ಭವಿಷ್ಯದ ಬಗ್ಗೆ ಚರ್ಚೆ ಮಾಡುವ ಮಹತ್ವದ ದಿನ ಕಾರ್ಮಿಕರ ದಿನಾಚರಣೆಯಾಗಿದೆ ಎಂದು ಸಿಪಿಐ ಮುಖಂಡ ರೇಣುಕಾರಾಧ್ಯ ಅಭಿಪ್ರಾಯಿಸಿದರು.

       ನಗರದ ಮಾರ್ಕೆಟ್ ರಸ್ತೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮಾಲಿ ಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಮಿಕ ದಿನಾಚಾರಣೆ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಬಟ್ಟೆ ವಿತರಿಸಿ ಮಾತನಾಡಿ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದ ಕಾರಣದಿಂದ ಮುಂದೂಡಲಾಗಿದ್ದ ಕಾರ್ಮಿಕರ ದಿನಾಚಾರಣೆಯನ್ನು ಹಮಾಲಿ ಸಂಘದ ವತಿಯಿಂದ ಗುರುವಾರ ಆಚರಣೆ ಮಾಡಲಾಯಿತು, ಮೇ 1 ರಂದು ನಡೆಸಲಾಗುವ ದಿನಾಚರಣೆ ದುಡಿಯುವ ವರ್ಗದ ದಿನಾಚಾರಣೆ, ಪ್ರಪಂಚದಾದ್ಯA ನಡೆಸಲಾಗುವುದು, ದುಡಿಮೆಯ ಮೂಲಕ ದೇಶವನ್ನು ಕಟ್ಟುವ ಕಾರ್ಮಿಕರ ಇತಿಹಾಸ ಮತ್ತು ಅವರ ಭವಿಷ್ಯದ ಚರ್ಚೆ ನಡೆಸುವ ದಿನ, ಒಂದು ವಸ್ತುವಿಗೆ ರೂಪವನ್ನು ನೀಡಿ ಸಮಾಜಕ್ಕೆ ಬಳಕೆಯಾಗುವಂತೆ ಕೆಲಸಗಾರರು ಶ್ರಮವಹಿಸುತ್ತಾರೆ ಎಂದರು.

ಯಾರು ದುಡಿದು ದೇಶದ ಸಂಪತ್ತನ್ನು ಸೃಷ್ಠಿ ಮಾಡುತ್ತಾರೋ ಅವರೇ ನಿಜವಾದ ಕಾರ್ಮಿಕ, ಪ್ರತಿಯೊಂದು ಹಂತದಲ್ಲಿಯೂ ಕೆಲಸಗಾರರ ಶ್ರಮ ಅನಿವಾರ್ಯ, ಅಂತಹ ಕೆಲಸಗಾರರನ್ನು ನೆನಪುಮಾಡುವ ದಿನಾಚಾರಣೆಯೇ ಮೇ ದಿನಾಚಾರಣೆ, ದೇಶದಲ್ಲಿ ಜಾತಿ ಆಧಾರಿತ ರಾಜಕರಣ ಮತ್ತು ಮೀಸಲಾತಿ ಚರ್ಚೆಯಾಗುತ್ತಿದ್ದು, ದುಡಿಯುವ ಬಹುಸಂಖ್ಯಾತ ಕಾರ್ಮಿಕರಿಗಾಗಿ ಯಾವುದೇ ಮೀಸಲಾತಿ ಇಲ್ಲದಿರುವುದು ದುರ್ದೈವ, ಬಹಳ ವರ್ಷಗಳಿಂದ ಸಂಘಗಳು ಹುಟ್ಟುತ್ತವೆ ಅದೇರೀತಿಯಾಗಿ ಮಾಯವಾಗುತ್ತಿರುವ ದಿನಗಳಲ್ಲಿ ಹಮಾಲಿ ಕಾರ್ಮಿಕರ ಸಂಘವು ತನ್ನೆಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಘವು ತನ್ನು ಚಟುವಟಿಕೆಗಳನ್ನು ಮುಂದುವರಿಕೊAಡು ಹೋಗುವಂತೆ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.

ಸಾವಿರಾರು ಎಕರೆ ಸರ್ಕಾರಿ ಪಾಳು ಭೂಮಿಗಳು ಮತ್ತು ಲಕ್ಷಾಂತರ ಎಕರೆ ಶ್ರೀಮಂತರು ಒತ್ತುವರಿ ಮಾಡಿರುವ ಭೂಮಿಗಳು ಜಿಲ್ಲೆಯಲ್ಲಿದ್ದು ಅದೇ ಭಾಗದಲ್ಲಿ ವಾಸವಿದ್ದು ಇಂದಿಗೂ ಕೂಲಿಮಾಡಿ ಬದುಕುತ್ತಿರುವ ವಿಳಾಸವಿಲ್ಲದ ಜನರು ಜಿಲ್ಲೆಯಲ್ಲಿ ಇದ್ದಾರೆ, ಅಂತವರಿಗೆ ಸುಸರ್ಜಿತವಾಗಿ ವಾಸ ಮಾಡುವ ಭಾಗವನ್ನು ಗುರ್ತಿಸಿ ನಿವೇಶನವನ್ನು ಕೊಡುವ ಮೂಲಕ ಶಾಶ್ವತವಾದ ವಿಳಾಸ ನೀಡುವಂತೆ ಆಡಳಿತ ಸರ್ಕಾರ ಮನಸ್ಸು ಮಾಡಬೇಕೆಂದು ತಿಳಿಸಿದರು.

250 ರಿಂದ 500 ವರೆಗೆ ಸಂಬಳವನ್ನು ತರುವ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ಜತೆಗೆ ಬೆಲೆ ಏರಿಕೆಯಾಗಿರುವ ದಿನಬಳಕೆ ವಸ್ತುಗಳು ಮತ್ತು ಮನೆ ಬಾಡಿಗೆ ಕಟ್ಟುಕೊಂಡು ಕಷ್ಟದಲ್ಲಿ ಜೀವನ ನಡೆಸಬೇಕಾಗುತ್ತಿದೆ, ತಮ್ಮದೇ ಒಂದು ಸ್ವಂತ ಮನೆಯನ್ನು ಕಟ್ಟಿಕೊಂಡು ಬದುಕಬೇಕೆಂಬ ಆಸೆಯನ್ನು ಹೊಂದಿರುವ ಕಾರ್ಮಿಕರಿಗೆ ಪೂರಕವಾದ ಸ್ಪಂದನೆಗಳಿಲ್ಲ, ಸಂಘಟನೆಗಳು ಇಂತಹ ವಿಚಾರಗಳಲ್ಲಿ ಆಲೋಚಿಸಬೇಕು, ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಅವರಿಗೆ ಭದ್ರತೆ ಒದಗಿಸುವುದರ ಜತೆಗೆ ದುಡಿಯುವ ಕಾರ್ಮಿಕರಿಗೆ ಸಾಮಾಜಿಕವಾಗಿ ಸಮಾಜದಲ್ಲಿ ಬದುಕುವ ಅವಕಾಶವನ್ನು ಕಲ್ಪಿಸುವ ಹೋರಾಟವನ್ನು ಕೈಗೊಳ್ಳಬೇಕೆಂದು ಎಂದರು.

 

ಹಮಾಲಿ ಕಾರ್ಮಿಕ ಸಂಘದ ಅಧ್ಯಕ್ಷ ರಹೀಂ ಕಾಕಾ ಮಾತನಾಡಿ ಒಂದು ಮನೆಯನ್ನು ಕಟ್ಟುವಾಗ ಅಡಿಪಾಯದಲ್ಲಿ ಸಿಮೇಂಟ್ ಇಳಿಸುವವರು ನಾವು ಆದರೆ ಕಟ್ಟಡ ಕಾರ್ಮಿಕ ಸಾಲಿಗೆ ಎಲ್ಲರನ್ನು ಸೇರಿಸುತ್ತಾರೆ ಆದರೆ ನಮ್ಮನ್ನು ಸೇರಿಸಲಾಗಿಲ್ಲ ಇದು ಸರ್ಕಾರದ ಬೇಜವಾಬ್ದಾರಿ, ನಮ್ಮನ್ನು ಅಸಂಘಟಿತ ಕಾರ್ಮಿಕರೆಂದು ಗುರ್ತಿಸಿ ಕಾರ್ಡ್ ನೀಡಲಾಗಿದ್ದು ಆದರೆ ಅದಕ್ಕೆ ಯಾವುದೇ ಬೆಲೆ ಇಲ್ಲ, ಇಲ್ಲಿಯವರೆಗು ಹಮಾಲಿ ಕಾರ್ಮಿಕರ ಬಗ್ಗೆ ಯೋಚನೆ ಮಾಡಿದ ಯಾವ ಸರ್ಕಾರವನ್ನು ನಾನು ಕಂಡಿಲ್ಲ, ಕಟ್ಟಡವನ್ನು ಕಟ್ಟುವ ಕಾರ್ಮಿಕ, ಫ್ಲಮರ್, ಪೈಂಟರ್, ಮರಗೆಲಸ ಮಾಡುವ ಆಚಾರಿಯನ್ನು ಕಾರ್ಮಿಕರೆಂದು ಗುರುತಿಸಿಕೊಳ್ಳುತ್ತಾರೆ ಆದರೆ ಕಟ್ಟಡ ಪ್ರಾರಂಭದಿA ಕೊನೆಯ ಹಂತದವರೆಗೂ ಕಬ್ಬಿಣ, ಮಣ್ಣು, ಕಲ್ಲು, ಸಿಮೆಂಟ್ ಸರಬರಾಜು ಮಾಡುವ ಹಮಾಲಿ ಯಾಕೆ ಕಟ್ಟಡ ಕಾರ್ಮಿಕರಿಗೆ ಸೇರುವುದಿಲ್ಲ ಎಂದರು.

ಸರ್ಕಾರಕ್ಕೆ ಹಮಾಲಿ ಕಾರ್ಮಿಕರ ಬಗ್ಗೆ ಚಿಂತೆ ಇಲ್ಲ, ಜತೆಗೆ ಕರ್ನಾಟಕದಲ್ಲಿ ಹಮಾಲಿಕರ ಸಂಘದ ಒಗ್ಗಟ್ಟಿನ ಕೊರತೆ, ಕಾರ್ಮಿಕರ ಮುಖಂಡರು ಎಂದು ಹೇಳಿಕೊಳ್ಳುವ ರಾಜಕೀಯ ವ್ಯಕ್ತಿಗಳು ತಿಳಿದುಕೊಳ್ಳಬೇಕು, ಜಿಲ್ಲೆಯ 5 ಕ್ಷೇತ್ರದಲ್ಲಿ ನಗರದಲ್ಲಿ ಮಾತ್ರ ಹಮಾಲಿ ಸಂಘ ಗಟ್ಟಿಯಾಗಿ ನಿಂತಿರುವುದು ಅದು ನಮ್ಮ ಸಂಘ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ, ಕರ್ನಾಟಕದ ಭಾಷೆ ಬೇಕು ನಾವೆಲ್ಲರು ಕನ್ನಡದ ಮಕ್ಕಳು ಕನ್ನಡದ ಜೀವ ಎನ್ನುವ ಸರ್ಕಾರ, ಹಲವು ಬಾರಿ ಟೆಂಡರ್ ನೀಡುವಾಗ ಲಾರಿ ಮಾಲೀಕರು ಮತ್ತು ಅಸ್ಸಾಮಿನ ಜನರು ಒಟ್ಟಾಗಿ ಅವರಿಗೆ ಟೆಂಡರ್ ನೀಡಲಾಗುವುದು, ಅದರಿಂದ ಕರ್ನಾಟಕದ ಕನ್ನಡದ ಕಾರ್ಮಿಕರಾದ ನಮಗೆ ಕೆಲಸವಿಲ್ಲದಂತಾಗುತ್ತದೆೆ, ಕನ್ನಡ ಮಣ್ಣಿನ ಹುಟ್ಟಿದ ಕನ್ನಡದ ಹಮಾಲಿ ಮಕ್ಕಳಿಗೆ ತಿನ್ನಲು ಅನ್ನವಿಲ್ಲ ಇದು ಸರ್ಕಾರದ ಕಣ್ಣಿಗೆ ಇದು ಕಾಣಿಸುತ್ತಿಲ್ಲವೇ ಎಂದರು.

ಸರ್ಕಾರಕ್ಕೆ ಟೆಂಡರ್ ಕಡಿಮೆ ಹೋಗಿ ಅದರಿಂದ ಅವರಿಗೆ ಕಮಿಷನ್ ಸಿಗುವುದು ಮಾತ ಮುಖ್ಯ, ಹಮಾಲಿಗಳು ಹೇಗೆ ಬದುಕುತ್ತಿದ್ದಾರೆ, ಹಮಾಲಿಗಳೆಂದರೇ ಯಾರು ಎಂದು ಸರ್ಕಾರಕ್ಕೆ ತಿಳಿದಿಲ್ಲ, ಹಮಾಲಿಗಳೇ ನೀವು ಕಾರ್ಮಿಕರೇ ಎಂದು ಯಾವ ಸರ್ಕಾರದ ನಾಯಕರ ಮುಖಂಡರ ಬಾಯಿಂದ ಕೇಳಿಲ್ಲ, ಜಿಲ್ಲೆ ಮತ್ತು ರಾಜ್ಯದ ಹಮಾಲಿ ಸಂಘಗಳಿಗೆ ಮೂಲಕ ತಿಳಿಸುವುದೇನೆಂದರೇ ಮೊದಲು ನಾವು ಸಂಘಟಿತರಾಗೋಣ, ನಾವೆಲ್ಲ ಸಂಘಟಿತರಾದರೆ ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಾಜ್ಯದ ಸರ್ಕಾರದ ವಿರುದ್ಧ ಧ್ವನಿಎತ್ತುಬಹುದು ಎಂದರು.

  ಸಂದರ್ಭದಲ್ಲಿ ಉಪಾಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಮಂಜು, ಖಜಾಂಚಿ ಗುರುಮೂರ್ತಿ, ಗೌರವಾಧ್ಯಕ್ಷ ಚಿಕ್ಕೇಗೌಡ, ಆಡಿಟರ್ ಗುರುಮೂರ್ತಿ, ಸಹ ಕಾರ್ಯದರ್ಶಿ ಶಿವಕುಮಾರ್, ನಾಗಣ್ಣ, ಸಂಘಟನಾ ಕಾರ್ಯದರ್ಶಿ ಪುಟ್ಟೇಗೌಡ, ಮಂಜು, ಸದಸ್ಯರುಗಳಾದ ಸವರ್ಣ, ಪರಮೇಶ್, ಗುರುನಾಥ, ಅಮ್ಜದ್, ರಾಮು, ರಫೀಕ್, ಗೋಪಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!